ಗೋಕಾಕ:ದಿನಾಂಕ 27 ರಂದು ಸಾಹಿತ್ಯ ಪರಿಷತ್ ಗೋಕಾಕ ತಾಲೂಕು ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭ
ದಿನಾಂಕ 27 ರಂದು ಸಾಹಿತ್ಯ ಪರಿಷತ್ ಗೋಕಾಕ ತಾಲೂಕು ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 22 :
ಸಾಹಿತ್ಯ ಪರಿಷತ್ ಗೋಕಾಕ ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯ ಚುಟುವಟಿಕೆಗಳ ಉದ್ಘಾಟನಾ ಸಮಾರಂಭದ ಕುರಿತು ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ತಾವಂಶಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರದಂದು ನಗರದಲ್ಲಿ ಪೂರ್ವಭಾವಿ ಸಭೆ ಜರುಗಿತು.
ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ದಿನಾಂಕ 27ರಂದು ಇಲ್ಲಿನ ಕೆಎಲ್ಇ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಚಂದ್ರಶೇಖರ್ ಅಕ್ಕಿ , ನೂತನ ಕಸಾಪ ಅಧ್ಯಕ್ಷೆ ಭಾರತಿ ಮದಬಾಂವಿ, ಮಹಾನಂದಾ ಪಾಟೀಲ, ಶಕುಂತಲಾ ಹಿರೇಮಠ, ಈಶ್ವರಚಂದ್ರ ಬೆಟಗೇರಿ, ಬಸವರಾಜ ಮುರಗೋಡ, ಲಕ್ಷ್ಮಣ ಸೊಂಟಕ್ಕಿ, ಸುರೇಶ್ ಮುದ್ದಾರ, ರಾಜೇಶ್ವರಿ ತೋಟಗಿ, ಸುರೇಶ ಮರಲಿಂಗನ್ನವರ, ಎ.ಬಿ.ಚೌಗಲಾ, ರಾಜೇಶ್ವರಿ ಕಳಸದ , ಆರ್.ಎಲ್.ಮಿರ್ಜಿ ಸೇರಿದಂತೆ ಅನೇಕರು ಇದ್ದರು.