RNI NO. KARKAN/2006/27779|Friday, November 8, 2024
You are here: Home » breaking news » ಗೋಕಾಕ:ಮಾರ್ಚ್ 3 ರಿಂದ 6 ರವರೆಗೆ ಶರಣ ಸಂಸ್ಕೃತಿ ಉತ್ಸವ : ಮುರುಘರಾಜೇಂದ್ರ ಮಹಾಸ್ವಾಮಿಗಳು

ಗೋಕಾಕ:ಮಾರ್ಚ್ 3 ರಿಂದ 6 ರವರೆಗೆ ಶರಣ ಸಂಸ್ಕೃತಿ ಉತ್ಸವ : ಮುರುಘರಾಜೇಂದ್ರ ಮಹಾಸ್ವಾಮಿಗಳು 

ಮಾರ್ಚ್ 3 ರಿಂದ 6 ರವರೆಗೆ ಶರಣ ಸಂಸ್ಕೃತಿ ಉತ್ಸವ : ಮುರುಘರಾಜೇಂದ್ರ ಮಹಾಸ್ವಾಮಿಗಳು

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 28 :

 
ಕಾಯಕಯೋಗಿಶ್ರೀ ಮ.ನಿ.ಪ್ರ ಲಿಂಗೈಕ್ಯ ಬಸವಮಹಾಸ್ವಾಮಿಗಳವರ ಹದಿನೇಳನೆಯ ಪುಣ್ಯಸ್ಮರಣೋತ್ಸವ ನಿಮಿತ್ಯ ಮಾರ್ಚ್ 3 ರಿಂದ 6 ರವರೆಗೆ ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾ ಪೀಠದ ಆವರಣದಲ್ಲಿ ಶರಣ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಸೋಮವಾರದಂದು ನಗರದ ಚನ್ನಬಸವ ವಿದ್ಯಾ ಪೀಠದಲ್ಲಿ ಕರೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಗುರುವಾರ ದಿನಾಂಕ: 3 ರಂದು ಮುಂಜಾನೆ 8.00 ಘಂಟೆಗೆ ನಗರದ ಶಾಲಾ ವಿದ್ಯಾರ್ಥಿಗಳಿಂದ ಅರಿವು-ಶಿಕ್ಷಣ-ಆರೋಗ್ಯ ಕಾಲ್ನಡಿಗೆಜಾತಾ ಕಾರ್ಯಕ್ರಮ ನಡೆಯಲಿದ್ದು, ಸಾನಿಧ್ಯವನ್ನು ಸುಣಧೋಳಿ ಜಡಿಸಿದ್ಧೇಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ವಹಿಸುವರು ಧ್ವಜಾರೋಹಣವನ್ನು ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ಅಶೋಕ ನಿಂ. ಪೂಜೇರಿ ಬಾಲಾಜಿ ಸ. ಕೊಳವಿ ಬಾಗವಹಿಸುವರು ಸಂಜೆ 6.00ಗಂಟೆಗೆ ಚನ್ನಬಸವೇಶ್ವರ ವಿದ್ಯಾಪೀಠದಲ್ಲಿ ಜರಗುವ “ಬಸವ ಧರ್ಮ ಸಮಾವೇಶ” ದ ದಿವ್ಯ ಸಾನಿಧ್ಯವನ್ನು ಶ್ರೀ ಮನ್ನ ಮಹಾರಾಜ ನಿರಂಜನ ಜಗದ್ಗುರು ಡಾ|| ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ತೋಂಟದಾರ್ಯ ಸಂಸ್ಥಾನಮಠ ಗದಗ-ಡಂಬಳ ವಹಿಸುವರು, ಸಾನಿಧ್ಯವನ್ನು ಘಟಪ್ರಭಾದ ಶ್ರೀ ಮ.ನಿ.ಪ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ವಹಿಸುವರು ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಮಾಡುವರು , ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರಮೇಶ. ಲ. ಜಾರಕಿಹೊಳಿ ವಹಿಸುವರು, ಅತಿಥಿಗಳಾಗಿ ಶಾಸಕ ಬಾಲಚಂದ್ರ ಲ. ಜಾರಕಿಹೊಳಿ, ಕೆಎಲ್ಇ ನಿರ್ದೇಶಕ ಜಯಾನಂದ ಮುನವಳ್ಳಿ, ಬಸನಗೌಡ ಶಿ. ಪಾಟೀಲ, ರಾಜಶೇಖರ ಬಿಳ್ಳೂರ, ಡಾ|| ವಿಶ್ವನಾಥ ವಿ.ಶಿಂಧೋಳಿಮಠ, ಪ್ರಶಾಂತ ಮ. ಕುರಬೇಟ, ಮಹಾಂತೇಶ ಗಂ. ತಾಂವಶಿ, ಪರಮೇಶ ರಾ. ಗುಲ್ಲ ಭಾಗವಹಿಸುವರು.
ಶುಕ್ರವಾರ ದಿನಾಂಕ 4 ರಂದು ಸಾಯಂಕಾಲ 6 ಘಂಟೆಗೆ “ಕಾಯಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ/ಮಹಿಳಾ ಸಮಾವೇಶ ಜರುಗಲಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಡಾ|| ಅಭಿನವ ಕುಮಾರ ಚನ್ನಬಸವ ಮಹಾಸ್ವಾಮಿಗಳು ವಹಿಸುವರು, ಸಾನಿಧ್ಯವನ್ನು
ಶ್ರೀ ಮ.ನಿ.ಪ್ರ ಪ್ರಭುನೀಲಕಂಠ ಮಹಾಸ್ವಾಮಿಗಳು ವಹಿಸುವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ವಹಿಸುವರು, ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವೆ ಶಶಿಕಲಾ ಜೊಲ್ಲೆ ನೆರೆವೇರಿ‌ಸುವರು, ಅತಿಥಿಗಳಾಗಿ ಸಂಸದೆ ಮಂಗಳಾ ಅಂಗಡಿ, ಶ್ರೀಮತಿ ವೀಣಾ ವಿ ಕಾಶಪ್ಪನವರ, ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಭಾಗವಹಿಸುವರು. ಅಂತರರಾಷ್ಟ್ರೀಯ ಖ್ಯಾತಿಯ ಐಪಿಎಸ್ ಅಧಿಕಾರಿ ಡಾ. ಕಿರಣ್ ಬೇಡಿ ಅವರಿಗೆ ಕಾಯಕಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವದು.
ದಿನಾಂಕ 5 ರಂದು ಶನಿವಾರ ಸಾಯಂಕಾಲ 6 ಘಂಟೆಗೆ “ ನ್ಯಾಯವಾದಿಗಳ ಸಮಾವೇಶ ” ಜರಗುವದು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಂದಿಗುಂದ ಗುಬ್ಬಿಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು ವಹಿಸುವರು, ಸಾನಿಧ್ಯವನ್ನು ಕುಂದರಗಿಯ ಅಡಿವಿಸಿದ್ದೇಶ್ವರ ಮಠದ ಅಮರಸಿದ್ದೇಶ್ವರ ಮಹಾಸ್ವಾಮಿಗಳು ವಹಿಸುವರು, ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿಗಳಾದ ಸಚಿನ್ ಎಸ್. ಮಗದುಮ ನೆರವೇರಿಸುವರು, ಅತಿಥಿಗಳಾಗಿ ವಿಲೇಕಾನಾಧಿಕಾರಿಗಳಾದ ಶ್ರೀಕಾಂತ ವಾಯ್. ವಟವಟಿ, ಕೃಷ್ಣಪ್ಪಾ ಭಿ. ನಾಯಿಕ , ಕಲ್ಮೇಶ ತು. ಕಿವುಡ, ವಿನಯ ಬಾ. ಮಾಂಗಳೇಕರ ,ಚನ್ನಪ್ಪ ದುಂ. ಹುಕ್ಕೇರಿ, ಸುಧೀರ ಎಸ್ ಗೋಡಿಗೌಡರ ಭಾಗವಹಿಸುವರು.
ರವಿವಾರ ದಿನಾಂಕ 6 ರಂದು ಸಾಯಂಕಾಲ 6 ಘಂಟೆಗೆ ಕೊನೆಯದಿನ ನಡೆಯುವ “ ಯುವಸಮಾವೇಶ ”ದ ದಿವ್ಯಸಾನಿಧ್ಯವನ್ನು ಬಾಳೆಹೊಸೂರಿನ ದಿಂಗಾಲೇಶ್ವರ ಸಂಸ್ಥಾನಮಠದ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ವಹಿಸುವರು, ಸಾನಿಧ್ಯವನ್ನು ಅವರಾಧಿಯ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳು ವಹಿಸುವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಉತ್ತರ ಪ್ರಾಂತ ಸಹ ಸಂಘದ ಚಾಲಕ ಅರವಿಂದ ದೇಶಪಾಂಡೆ ವಹಿಸುವರು. ಉದ್ಘಾಟನೆಯನ್ನು ಮಾಜಿ ಉಪ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ನೆರೆವೇರಿ‌ಸುವರು. ಮುಖ್ಯ ಉಪನ್ಯಾಸಕರಾಗಿ ಸಂಸದ ತೇಜಸ್ವಿಸೂರ್ಯ ಭಾಗವಹಿಸಿ ಉಪನ್ಯಾಸ ನೀಡುವರು. ಅತಿಥಿಗಳಾಗಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಸವರಾಜ ಲ. ಹುಳ್ಳೆರ, ಡಾ|| ಅರುಣ ಶ್ರೀ. ತುಪ್ಪದ, ಮಾಹಾಂತೇಶ ವಕ್ಕುಂದ , ಭೀಮಪ್ಪ ಗಡಾದ ಭಾಗವಹಿಸುವರು. ಅದೇ ದಿನ ಮುಂಜಾನೆ 8:30ಕ್ಕೆ ಶ್ರೀ ಮಠದಕರ್ತೃಗದ್ದುಗೆ ಹಾಗೂಅಭಿಷೇಕ ಹಾಗೂ ಬಿಲ್ವಾರ್ಚನೆ ಸಹಸ್ರ ಸಹಸ್ರ, ಮುತ್ತೈದೆಯರಿಗೆಉಡಿ ತುಂಬುವ ಕಾರ್ಯಕ್ರಮ, ಬೆಳಿಗ್ಗೆ 9-30 ಗಂಟೆಗೆ ಪಲ್ಲಕ್ಕಿ ಉತ್ಸವವು
ವಚನ ತಾಡೋಲೆ ಪ್ರತಿಗಳ ಹಾಗೂ ವಿಶ್ವಗುರು ಬಸವಣ್ಣನವರ ಭಾವಚಿತ್ರ ಮತ್ತು
ಪಲ್ಲಕ್ಕಿ ಉತ್ಸವವು, ಕುಂಭಮೇಳ ಸಕಲ ಬಿರುದಾವಳಿಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀಮಠ ತಲುಪುವದು ಉತ್ಸವದಲ್ಲಿ ಸರ್ವಧರ್ಮದ ಸಮಾಜ ಬಾಂಧವರು ಭಾಗವಹಿಸುವರು.
ಮದ್ಯಾಹ್ನ 12-30 ಗಂಟೆಗೆ ಮಹಾಪ್ರಸಾದ ಜರಗುವದು.ಹಾಗೂ ಪ್ರತಿ ದಿನ ಜರಗುವ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರಿಗೆ ಗೌರವ ಸನ್ಮಾನ ನಡೆಯಲಿದ್ದು, ಪ್ರತಿ ದಿನದ ಕಾರ್ಯಕ್ರಮದ ಮುಕ್ತಾಯ ನಂತರ ಎಲ್ಲಾ ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮದ ನಂತರ ನಾಡಿನ ಹೆಸರಾಂತ ಕಲಾ ತಂಡಗಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಆದ್ದರಿಂದ ತಾಲೂಕಿನ ಎಲ್ಲಾ ಭಕ್ತಾದಿಗಳು, ಹಿತೈಷಿಗಳು, 4 ದಿನಗಳಕಾಲ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶರಣ ಸಂಸ್ಕೃತಿ ಉತ್ಸವವನ್ನು ಯಶಸ್ಸುಗೊಳಿಸುವಂತೆ ಕಾರ್ಯಕ್ರಮದ ನೇತೃತ್ವ ವಹಿಸುವ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಿನಂತಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶರಣ ಸಂಸ್ಕೃತಿ ಉತ್ಸವ ಸಮಿತಿಯ ಅಧ್ಯಕ್ಷ ಚನಮಲ್ಲಪ್ಪಾ ವಾಲಿ,ಕಾರ್ಯದರ್ಶಿ ಶಂಕರ ಗೋರೋಶಿ, ಕೋಶಾಧ್ಯಕ್ಷ ಸಂಜಯ ಹೊಸಕೋಟಿ, ಹಿರಿಯ ಸಾಹಿತಿ ಡಾ.ಸಿ.ಕೆ.ನಾವಲಗಿ, ಮುಖಂಡ ವಿವೇಕ ಜತ್ತಿ ಉಪಸ್ಥಿತರಿದ್ದರು.

Related posts: