ಗೋಕಾಕ:ಆಧ್ಯಾತ್ಮಿಕ ಭಂಡರವಾದ ಬಸವಾದಿ ಶರಣರ ವಚನಗಳನ್ನು ಆಚರಣೆಗೆ ತನ್ನಿ: ಡಿ.ವಾಯ್.ಎಸ್.ಪಿ ಬಸವರಾಜ ಯಲಿಗಾರ
ಆಧ್ಯಾತ್ಮಿಕ ಭಂಡರವಾದ ಬಸವಾದಿ ಶರಣರ ವಚನಗಳನ್ನು ಆಚರಣೆಗೆ ತನ್ನಿ: ಡಿ.ವಾಯ್.ಎಸ್.ಪಿ ಬಸವರಾಜ ಯಲಿಗಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 3 :
ಆಧ್ಯಾತ್ಮಿಕ ಭಂಡರವಾದ ಬಸವಾದಿ ಶರಣರ ವಚನಗಳನ್ನು ಆಚರಣೆಗೆ ತರುವಂತೆ ಚಿಕ್ಕೋಡಿ ಉಪ ವಿಭಾಗದ ಡಿ.ವಾಯ್.ಎಸ್.ಪಿ ಬಸವರಾಜ ಯಲಿಗಾರ ಹೇಳಿದರು.
ಗುರುವಾರದಂದು ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾ ಪೀಠದ ಆವರಣದಲ್ಲಿ ಇಲ್ಲಿನ ಶೂನ್ಯ ಸಂಪಾದನ ಮಠದ 17 ನೇ ಶರಣ ಸಂಸ್ಕೃತಿ ಉತ್ಸವದ ಷಟಸ್ಥಲ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡುತ್ತಾ ವಚನಗಳ ಪಾಲನೆಯಿಂದ ಸಮಸ್ಯೆಗಳಿಲ್ಲದೆ ನೆಮ್ಮದಿಯ ಜೀವನ ಸಾಧ್ಯ. ಮಹತ್ಮರು ನೀಡಿದ ಸಂದೇಶಗಳ ಆಚರಣೆಯಿಂದ ಸಂಸ್ಕೃತಿ , ಆಧ್ಯಾತ್ಮಿಕ, ವೈಚಾರಿಕತೆಯೊಂದಿಗೆ ಬದುಕಿ ಜೀವನವನ್ನು ಪಾವನಮಾಡಿಕೊಳ್ಳಿ. ಇಂತಹ ಉತ್ಸವಗಳು ಹೆಚ್ಚು ,ಹೆಚ್ಚು ಆಚರಣೆಯಾಗಿ ಶರಣರ ಸಂದೇಶಗಳು ಜನಸಾಮಾನ್ಯರಿಗೆ ತಲುಪುವಂತಾಗಬೇಕು ಇಂತಹ ಕಾರ್ಯ ಮಾಡುತ್ತಿರುವ ಇಲ್ಲಿನ ಶ್ರೀ ಮಠದ ಕಾರ್ಯ ಮಾದರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಶಾಲಾ ವಿದ್ಯಾರ್ಥಿಗಳಿಂದ ಅರಿವು- ಅಕ್ಷರ- ಆರೋಗ್ಯ ಕಾಲ್ನಡಿಗೆ ಜಾಥಾ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸುಣಧೋಳಿಯ ಶಿವಾನಂದ ಮಹಾಸ್ವಾಮಿಗಳು ವಹಿಸಿದ್ದರು, ನೇತೃತ್ವವನ್ನು ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ ಪೂಜಾರಿ, ಬಾಲಾಜಿ ಕೋಳವಿ, ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಸಿ.ಸಿ.ವಾಲಿ, ಕಾರ್ಯದರ್ಶಿ ಶಂಕರ ಗೋರೋಶಿ, ಲಿಂಗಾಯತ ಜಾಗೃತ ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಸುಮಿತ್ರಾ ಗುರಾಣಿ ಇದ್ದರು.