RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಧರ್ಮ ಮತ್ತು ಕಾನೂನು ಒಂದೇ ನಾಣ್ಯದ ಎರೆಡು ಮುಖಗಳು : ವಿಲೇಖಾನಾಧಿಕಾರಿ ಶ್ರೀಕಾಂತ್ ವಟವಟಿ

ಗೋಕಾಕ:ಧರ್ಮ ಮತ್ತು ಕಾನೂನು ಒಂದೇ ನಾಣ್ಯದ ಎರೆಡು ಮುಖಗಳು : ವಿಲೇಖಾನಾಧಿಕಾರಿ ಶ್ರೀಕಾಂತ್ ವಟವಟಿ 

ಧರ್ಮ ಮತ್ತು ಕಾನೂನು ಒಂದೇ ನಾಣ್ಯದ ಎರೆಡು ಮುಖಗಳು : ವಿಲೇಖಾನಾಧಿಕಾರಿ ಶ್ರೀಕಾಂತ್ ವಟವಟಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 5 :

 
ಧರ್ಮ ಮತ್ತು ಕಾನೂನು ಒಂದೇ ನಾಣ್ಯದ ಎರೆಡು ಮುಖಗಳು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಲೇಖಾನಾಧಿಕಾರಿ ಶ್ರೀಕಾಂತ್ ವಟವಟಿ ಹೇಳಿದರು.

ಶನಿವಾರದಂದು ನಗರದ ಚನ್ನಬಸವೇಶ್ವರ ವಿದ್ಯಾ ಪೀಠದ ಆವರಣದಲ್ಲಿ ಶೂನ್ಯ ಸಂಪಾದನ ಮಠದ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡ 17ನೇ ಶರಣ ಸಂಸ್ಕೃತಿ ಉತ್ಸವದ ಮೂರನೇ ದಿನದ ನ್ಯಾಯವಾದಿಗಳ ಸಮಾವೇಶವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ನೆಮ್ಮದಿಯಾಗಿ ಬದುಕುವದೇ ಧರ್ಮ ಹಾಗೂ ಕಾನೂನುನಿನ ಉದ್ದೇಶವಾಗಿದೆ. ಧರ್ಮವನ್ನು ಗೌರವಿಸ ಪ್ರತಿಯೊಬ್ಬರು ಕಾನೂನುನನ್ನು ಸಹ ಗೌರವಿಸಬೇಕು. ಧರ್ಮ ಪೀಠ, ನ್ಯಾಯ ಪೀಠ, ವಿದ್ಯಾ ಪೀಠಗಳ ಪಾತ್ರ ಸಮಾಜ ಸುಧಾರಣೆಯಲ್ಲಿ ಬಹುಮುಖ್ಯವಾಗಿದೆ. ಕಾನೂನು ಮತ್ತು ಧರ್ಮ ಸಮಾನವಾಗಿವೆ‌.
ನ್ಯಾಯಾಂಗ ಹೆಣ್ಣು ಮಕ್ಕಳ ಪರ ಹಲವಾರು ಕಾನೂನುಗಳನ್ನು ಮಾಡಿದೆ ಅನಾವಶ್ಯಕವಾಗಿ ಕಾನೂನು ಅಸ್ತ್ರಗಳನ್ನು ಚಲಾಯಿಸಿದರೆ ಕುಟುಂಬದಲ್ಲಿ ಬಿರುಕುಗಳು ಬರಬಹುದು ಆದ್ದರಿಂದ ಹೆಣ್ಣು ಮಕ್ಕಳು ಅನಿವಾರ್ಯತೆ ಬಂದಾಗ ಕಾನೂನಿನ ಅಸ್ತ್ರ ಚಲಾಯಿಸಿ ತಮ್ಮ ಹಕ್ಕುನ್ನು ಪಡೆದುಕೊಳ್ಳಬೇಕು . ಧರ್ಮದ ಪ್ರಕಾರ ಕಾನೂನುಗಳನ್ನು ರೂಪಿಸಲಾಗಿದೆ.
1860 ರ ಭಾರತೀಯ ದಂಡ ಸಂಹಿತೆಯಲ್ಲಿ ಶರಣ ವಚನಗಳ ಸಾರ ಅಡಗಿದೆ . ಶರಣರ ವಚನಗಳ ಸಹ ಕಾನೂನು ಪಾಲನೆ ಪಾಠವನ್ನು ಹೇಳಿವೆ ಆದರೆ ವಚನಗಳಲ್ಲಿ ಶಿಕ್ಷೆ ವಿಧಿ‌ಸಿರಲ್ಲಿಲ ಆದರೆ ಕಾನೂನುಗಳಲ್ಲಿ ತಪ್ಪು ಮಾಡಿದರೆ ಶಿಕ್ಷೆಗಳನ್ನು ಅವಳಡಿಸಲಾಗಿದೆ. ಕಾನೂನುಗಳ ಉಗಮಕ್ಕೆ ವಚನಗಳ ಕಾರಣವಾಗಿವೆ.
ಕಾನೂನುಗಳನ್ನು ಮುರಿಯವವರನ್ನು ನಾವು ಹೆಚ್ಚಿನ ಮಹತ್ವ ನೀಡುವ ಸಂದರ್ಭಗಳು ಹೆಚ್ಚಾಗಿವೆ ಅಂತಹವರನ್ನು ಹೆಚ್ಚಿನ ಮಹತ್ವ ನೀಡದೆ ಕಾನೂನುನನ್ನು ಗೌರವಿಸವವರನ್ನು ಸಮಾಜ ಗೌರವಿಸಬೇಕು‌. ವಕೀಲರನ್ನು ಸನ್ಮಾನಿಸುವ ಮೂಲಕ ಇಡೀ ಸಮಾಜವನ್ನು ಗೌರವಿಸದ ಭಾಗ್ಯ ಈ ಉತ್ಸವ ಸಮಿತಿಗೆ ಸಲ್ಲುತ್ತದೆ ಎಂದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಬೆಂಗಳೂರಿನ ಕೃಷ್ಣಪ್ಪಾ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಚನ್ನಪ್ಪ ಹುಕ್ಕೇರಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರನ್ನು ಸತ್ಕರಿಸಿ,ಗೌರವಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಂದಿಗುಂದನ ಗುಬ್ಬಿಸಿದ್ದೇಶ್ವರ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು ವಹಿಸಿ ಆರ್ಶೀವಚನ ನೀಡಿದರು.
ವೇದಿಕೆಯ ಮೇಲೆ ಕಾರ್ಯಕ್ರಮದ ನೇತೃತ್ವ ವಹಿಸಿದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಕುಂದರಗಿ ಅಡವಿಸಿದ್ದೇಶ್ವರ ಮಠದ ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮಿಗಳು, ಗೌರವಾನ್ವಿತ ನ್ಯಾಯವಾದಿಗಳಾದ ಕಾಶಿನಾಥ್ ಮೊಟಕಪಲ್ಲಿ , ವಿನಯ ಮಾಂಗಳೇಕರ, ಸುಧೀರ್ ಗೋಡಿಗೌಡರ, ರಮೇಶ ಬಂಡಿ, ಡಾ.ಮಹಾಂತೇಶ ಕಡಾಡಿ, ಉತ್ಸವ ಸಮಿತಿ ಅಧ್ಯಕ್ಷ ಚನ್ನಮಲ್ಲಪ್ಪ ವಾಲಿ ಉಪಸ್ಥಿತರಿದ್ದರು.
ಕೊನೆಯಲ್ಲಿ ಚಿತ್ರದುರ್ಗದ ಜ.ಮು.ರಾ ತಂಡದವರಿಂದ ಸೋರುತಿಹುದು ಸಂಬಂಧ ಎಂಬ ನೃತ್ಯ ರೂಪಕ ನಡೆಯಿತು.

Related posts: