RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ರೈತರ ಆರ್ಥಿಕ ಬೆಳವಣಿಗೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪಾತ್ರ ಮಹತ್ವದ್ದಾಗಿದೆ : ಶಾಸಕ ರಮೇಶ

ಗೋಕಾಕ:ರೈತರ ಆರ್ಥಿಕ ಬೆಳವಣಿಗೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪಾತ್ರ ಮಹತ್ವದ್ದಾಗಿದೆ : ಶಾಸಕ ರಮೇಶ 

ರೈತರ ಆರ್ಥಿಕ ಬೆಳವಣಿಗೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪಾತ್ರ ಮಹತ್ವದ್ದಾಗಿದೆ : ಶಾಸಕ ರಮೇಶ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 21 :

 

ಗ್ರಾಮೀಣ ಭಾಗದ ರೈತರ ಆರ್ಥಿಕ ಬೆಳವಣಿಗೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಅವರು, ಸೋಮವಾರದಂದು ತಾಲೂಕಿನ ಮಾಲದಿನ್ನಿ ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘ ನಿ, ಮಾಲದಿನ್ನಿ ಇದರ ನೂತನ ಕಟ್ಟಡ ಉದ್ಘಾಟನೆ ನೆರವೆರಿಸಿ ಮಾತನಾಡಿದರು.
ರೈತರಿಗೆ ಸಕಾಲದಲ್ಲಿ ಆರ್ಥಿಕ ನೆರವು ಒದಗಿಸಿ ಕೃಷಿ ಕ್ಷೇತ್ರದ ಅಭ್ಯುದಯಕ್ಕೆ ಕಾರಣವಾಗಿವೆ. ಆದ್ದರಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಆರ್ಥಿಕವಾಗಿ ಸದೃಢವಾಗಿ, ಗ್ರಾಮೀಣ ಜನರ ಬದುಕಿಗೆ ಆಸರೆಯಾಗಲು ಶಕ್ತಿ ಮೀರಿ ಶ್ರಮಿಸಬೇಕು ಎಂದರು.
ರಾಜ್ಯ ಸರಕಾರ ರೈತರಿಗೆ ಶೇ.3% ಬಡ್ಡಿ ದರದಲ್ಲಿ ಕೃಷಿಗಾಗಿ ಟ್ರ್ಯಾಕ್ಟರ್ ಲೋನ್ ಮತ್ತು ಬೆಳೆ ಸಾಲ ನೀಡುವಲ್ಲಿ ಸರಕಾರ ಯಶಸ್ವಿಯಾಗಿದ್ದು, ಈ ಯೋಜನೆಯನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘ ನಿ, ಮಾಲದಿನ್ನಿ ವತಿಯಿಂದ ಶೇ.3% ಬಡ್ಡಿದರದಲ್ಲಿ ಎರಡು ಟ್ರ್ಯಾಕ್ಟರಗಳನ್ನು ರೈತರರಾದ ಲಕ್ಕಪ್ಪ ಭಂಡಿ, ಚಿನ್ನಪ್ಪ ಭಂಡಿ ಅವರಿಗೆ ಶಾಸಕ ರಮೇಶ ಜಾರಕಿಹೊಳಿ ಅವರು ಹಸ್ತಾಂತರಿಸಿದರು. ಕೃಷಿ ಪತ್ತಿನ ಸಹಕಾರಿ ಸಂಘ ನಿ, ಮಾಲದಿನ್ನಿ ಪದಾಧಿಕಾರಿಗಳು ಶಾಸಕ ರಮೇಶ ಜಾರಕಿಹೊಳಿ ಅವರನ್ನು ಆತ್ಮೀಯವಾಗಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಭೀಮಗೌಡ ಪೋಲಿಸಗೌಡರ, ಮಾಜಿ ಜಿಪಂ ಸದಸ್ಯರಾದ ಟಿ ಆರ್ ಕಾಗಲ, ಎಮ್ ಎಲ್ ತೋಳಿನವರ, ಪಿಕೆಪಿಎಸ್ ಅಧ್ಯಕ್ಷ ರಾಮಣ್ಣ ಭಂಡಿ, ಉಪಾಧ್ಯಕ್ಷ ಯಲ್ಲಪ್ಪ ಮಾಳೇದ, ಸದಸ್ಯರಾದ ಯಲ್ಲಪ್ಪ ಬಬಲಿ, ಮಲ್ಲಪ್ಪ ಬಂಗೆನ್ನವರ, ಲಕ್ಕಪ್ಪ ಭಂಡಿ, ಲಕ್ಷ್ಮಪ್ಪ ಹೊನ್ನಕುಪ್ಪಿ, ಹನಮಂತ ಭಂಡಿ, ದುಂಡವ್ವ ಹೊಸಕುರಬರ, ತುಳಸವ್ವ ದಂಡಿನ, ಕಾಶವ್ವ ರಡ್ಡಿ, ರುಕ್ಮಿಣಿ ಮಾವರಕರ, ಗ್ರಾಮದ ಹಿರಿಯರಾದ ಲಕ್ಷ್ಮಣ ಭಂಡಿ, ಅವನಪ್ಪ ಭಂಡಿ, ರಂಗಪ್ಪ ಪೂಜೇರಿ, ಗಪಾರಸಾಬ ಮುಲ್ಲಾ, ಭೀರಪ್ಪ ದುರ್ಗಿಪೂಜೇರಿ, ಶ್ರೀಕಾಂತ ಕಂಬಾರ, ರಾಮಗೌಡ ಪಾಟೀಲ, ಲಕ್ಕಪ್ಪ ಮಾಳಗಿ, ವಿಠ್ಠಲ ಗುಂಡಿ ಸೇರಿದಂತೆ ಸಿಬ್ಬಂಧಿಗಳು, ಗ್ರಾಮಸ್ಥರು ಇದ್ದರು.

Related posts: