RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:”ಶಾಹಿದ್ ದಿವಸ” ಅಂಗವಾಗಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆ

ಗೋಕಾಕ:”ಶಾಹಿದ್ ದಿವಸ” ಅಂಗವಾಗಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆ 

“ಶಾಹಿದ್ ದಿವಸ” ಅಂಗವಾಗಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 24 :

 
ಬ್ರಿಟಿಷ್ ಶಾಹಿ ವಿರುದ್ದ ಕಹಳೆಯೂದಿದ್ದ ಮಹಾತ್ಮರ ಸ್ಮರಣಾರ್ಥ “ಶಾಹಿದ್ ದಿವಸ” ಅಂಗವಾಗಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿದರು.
ಮಂಗಳವಾರದಂದು ಸಂಜೆ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಸುಮಾರು ನೂರಾರು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ತ್ಯಾಗ ಬಲಿದಾನದ ಸ್ಮರಣಾರ್ಥವಾಗಿ ಪಾದಯಾತ್ರೆ ಮಾಡುವ ಮೂಲಕ ಬಸವೇಶ್ವರ ವೃತ್ತದ ವರೆಗೆ ಪಂಜಿನ ಮೆರವಣಿಗೆ ನಡೆಸಿ, ಬಸವೇಶ್ವರ ವೃತ್ತದಲ್ಲಿ ಕಾರ್ಯಕರ್ತರೆಲ್ಲರೂ ಮೆಣದ ದೀಪ ಹಚ್ಚಿ ಮಹಾನ ವ್ಯಕ್ತಿಗಳಿಗೆ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಶಾಸಕರ ಕಚೇರಿ ಸಹಾಯಕ ಸುರೇಶ ಸನದಿ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ ಮಡ್ಡಿಮನಿ, ಯುವ ಮೋರ್ಚಾ ಅಧ್ಯಕ್ಷ ಮಂಜು ಪ್ರಭುನಟ್ಟಿ, ರೈತಮೋರ್ಚಾ ಅಧ್ಯಕ್ಷ ಸುರೇಶ ಪತ್ತಾರ, ಪ್ರಧಾನ ಕಾರ್ಯದರ್ಶಿಗಳಾದ ವಿರೇಂದ್ರ ಏಕ್ಕೇರಿಮಠ, ಅರ್ಜುನ ಜರತಾರಕರ, ಶ್ರೀರಾಮ ಸೇನಾ ಅಧ್ಯಕ್ಷ ರವಿ ಪೂಜಾರಿ, ಅಡಿವೇಶ ಮಜ್ಜಗಿ ಸೇರಿದಂತೆ ನೂರಾರು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಇದ್ದರು.

Related posts: