ಗೋಕಾಕ:ಇಂದು ಮಹಿಳೆ ಸಂಸಾರಕ್ಕೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿ ದ್ದಾಳೆ : ಪ್ರಾಚಾರ್ಯ ಸಿ.ಬಿ.ಪಾಗದ
ಇಂದು ಮಹಿಳೆ ಸಂಸಾರಕ್ಕೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿ ದ್ದಾಳೆ : ಪ್ರಾಚಾರ್ಯ ಸಿ.ಬಿ.ಪಾಗದ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 27 :
ಇಂದು ಮಹಿಳೆ ಸಂಸಾರಕ್ಕೆ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಾ ದೇಶದ ಪ್ರಗತಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾಳೆ ಎಂದು ಇಲ್ಲಿನ ಮಯೂರ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯ ಸಿ.ಬಿ.ಪಾಗದ ಹೇಳಿದರು.
ನಗರದಲ್ಲಿ ಜೆಸಿಐ ಸಂಸ್ಥೆಯವರು ಶನಿವಾರದಂದು ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತಾಯಂದಿರು ತಮ್ಮ ಮಕ್ಕಳನ್ನು ಬೆಳೆಸುವಲ್ಲಿ ಲಿಂಗಭೇದ ಮಾಡದೇ ಸಮಾನತೆ ಮನೋಭಾವದಿಂದ ಬೆಳೆಸಬೇಕು ಅವರಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿ ಒಳ್ಳೆಯ ನಾಗರಿಕರನ್ನಾಗಿ ಮಾಡುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಹಳಾ ದಿನಾಚರಣೆ ಅಂಗವಾಗಿ ಜೆಸಿಐ ಗೋಕಾಕ ನೃತ್ಯ ಚಾಂಪಿಯನ್ , ನನ್ನ ಅಮ್ಮಾ ಸೂಪರ ಸ್ಟಾರ್ ಮತ್ತು ಫ್ರಫೆಕ್ಟ್ ಮಹಿಳೆ ಎಂಬ ಸ್ವರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದ ನಗರದ ವಿದ್ಯಾರ್ಥಿನಿ ವೈಷ್ಣವಿ ತಳ್ಳಿ ಇವರಿಗೆ ಜೆಸಿಐ ಗೋಕಾಕ ವತಿಯಿಂದ ವಿದ್ಯಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜೆಸಿಐ ಮಹಿಳಾ ಘಟಕದ ಅಧ್ಯಕ್ಷೆ ಭಾಗೀರಥಿ ನಂದಗಾವಿ,ಪದಾಧಿಕಾರಿಗಳಾದ ಶೈನಾಜ ದಫೇದಾರ, ಲಕ್ಷ್ಮೀ ವಣ್ಣೂರ, ಧರಣಿ ಜರತಾರಕರ, ರಾಜೇಶ್ವರಿ ಕಿತ್ತೂರ, ಡಾ.ಕಿರಣ ಕಡಲಗಿಕರ, ನೇತ್ರಾವತಿ ಲಾತೂರ, ಮೀನಾಕ್ಷಿ ಸಾವಜಿ, ಕವಿತಾ ಕೊಪ್ಪದ, ಅಂಕಿತಾ ವಾಲಿ, ಪ್ರೀತಿ ಕುರಬೇಟ್, ದೀಪಾ ವರ್ಜಿ, ದಿಪ್ತಿ ಅಮ್ಮಣಗಿ, ಸುರ್ವಣಾ ಹವಾಲದಾರ,ನಂದಿನಿ ಲಾತೂರ, ರೇಖಾ ಕ್ಯಾಸ್ತಿ, ಅರ್ಪಣಾ ಕುಲಕರ್ಣಿ, ಪ್ರಜ್ಞಾ ಜಾಧವ , ಜೆಸಿಐ ವಲಯ ಪೂರ್ವ ಅಧ್ಯಕ್ಷ ವಿಷ್ಣು ಲಾತೂರ,
ಜೆಸಿಐ ಅಧ್ಯಕ್ಷ ರಜನಿಕಾಂತ್ ಮಾಳೋದೆ, ಶೇಖರ್ ಉಳ್ಳಾಗಡ್ಡಿ, ಸಂತೋಷ ಹವಾಲದಾರ, ಐ.ಎಂ ದಫೇದಾರ, ಮಲ್ಲಪ್ಪ ಮದಿಹಳ್ಳಿ, ಪ್ರಕಾಶ ವರದಿ, ರಾಚಪ್ಪ ಅಮ್ಮಣಗಿ, ಸಂಜು ಮಾಳೇದವರ ಇದ್ದರು.