ಘಟಪ್ರಭಾ:ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಮಾ 28 :
ಪ್ರತಿ ಹಳ್ಳಿಗಳಲ್ಲಿ 7 ಗಂಟೆ ತ್ರೀಪೇಸ್ ವಿದ್ಯುತ್ ನೀಡುವುದು ಮತ್ತು ವಿದ್ಯುತ್ ತಂತಿಗಳನ್ನು ನವೀಕರಣ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೋಕಾಕ ತಾಲೂಕು ಘಟಕದ ವತಿಯಿಂದ ಇಲ್ಲಿಯ ಹೆಸ್ಕಾಂ ವಿಭಾಗ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ಇಂಧನ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಮುಂಜಾನೆ ಹೆಸ್ಕಾಂ ಕಛೇರಿ ಮುಂದೆ ಜಮಾಯಿಸಿದ ನೂರಾರು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕತರು, ಪ್ರತಿಭಟನೆ ನಡೆಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿರುವ ಪ್ರಕಾರ ಪ್ರತಿ ಹಳ್ಳಿಗಳಲ್ಲಿಯೂ ಹಗಲು 7 ಗಂಟೆಗಳ ಕಾಲ್ ತ್ರೀಫೇಸ್ ವಿದ್ಯುತ್ ಪೂರೈಸಬೇಕು. ಲೋಡ್ ಶೆಡ್ಡಿಂಗ್ ಅಂತ ನೆಪ ಇಟ್ಟುಕೊಂಡು ರಾತ್ರಿ ವೇಳೆ ಕರೆಂಟ್ ಕಟ್ಟ್ ಮಾಡುವದನ್ನು ನಿಲ್ಲಿಸಬೇಕು. ಸಾಯಂಕಾಲ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಸಿಂಗಲ್ ಫೇಸ್ ವಿದ್ಯುತನ್ನು ನಿರಂತರವಾಗಿ ನೀಡಬೇಕು. ಮತ್ತು ಪ್ರತಿ ಹಳ್ಳಿಗಳಲ್ಲಿ ವಿದ್ಯುತ್ ತಂತಿಗಳನ್ನು ನವೀಕರಣ ಮಾಡಬೇಕು. ಹಳ್ಳಿಗಳಲ್ಲಿ ಲೈನ್ಮನ್ನಗಳು ಟಿ.ಸಿ, ಕೇಬಲ್ ಮತ್ತು ಆಯಿಲ್ ಚೇಂಜ್ ಮಾಡಲು ಹಣವನ್ನು ಕೇಳಿ ಪಡೆಯುತ್ತಿದ್ದು, ಮತ್ತು ರೈತರಿಗೆ ಸರಿಯಾಗಿ ಮಾಹಿತಿಯನ್ನು ನೀಡದೆ ರೈತರನ್ನು ವಂಚನೆ ಮಾಡುತ್ತಿರುದನ್ನು ಕೂಡಲೇ ನಿಲ್ಲಿಸಬೇಕು. ಹಳ್ಳಿಗಳಲ್ಲಿ ಲೈನ್ಮನ್ನಗಳು ಸಮಸ್ಯೆ ಬಗೆಹರಿಸುವ ನೆಪ್ಪದಲ್ಲಿ ವಂಚನೆ ಮಾಡುತ್ತಿದ್ದಾರೆ ಆದಕಾರಣ ಅಂತಹವರ ಮೇಲೆ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ, ಜಿಲ್ಲಾ ಅಧ್ಯಕ್ಷ ಸತ್ತೆಪ್ಪ ಮಲ್ಲಾಪುರ, ತಾಲೂಕಾ ಅಧ್ಯಕ್ಷÀ ಮುತ್ತೆಪ್ಪ ಭಾಗಣ್ಣವರ, ಶಂಕರ್ ಮದಿಹಳ್ಳಿ, ಕುಮಾರ್ ತಿಗಡಿ, ರಾಯಪ್ಪ ಗೌಡಪ್ಪನವರ, ವೆಂಕಪ್ಪ ಕೊಪ್ಪದ, ರಮೇಶ ತಿಗಡಿ, ಲಕ್ಷ್ಮಣ ಹಳ್ಳೂರ, ಮಲ್ಲೇಶ ನಾಯ್ಕ್, ಸಿದ್ದಪ್ಪ ಗೌಡಪ್ಪನವರ, ಅವಿನಾಶ್ ಖಾನಪ್ಪನವರ, ಶಿವಪ್ಪ ಹೊಸಮನಿ, ಸಿದ್ದಪ್ಪ ತಪಸಿ, ರಮೇಶ ವ್ಯಾಪರಕಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.