RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಸಮಾಜದ ಏಳ್ಗೆಗೆ ಮಠಮಾನ್ಯಗಳ ಕೊಡುಗೆ ಅಪಾರ : ತಹಶೀಲ್ದಾರ್ ಪ್ರಕಾಶ ಹೋಳೆಪ್ಪಗೋಳ

ಗೋಕಾಕ:ಸಮಾಜದ ಏಳ್ಗೆಗೆ ಮಠಮಾನ್ಯಗಳ ಕೊಡುಗೆ ಅಪಾರ : ತಹಶೀಲ್ದಾರ್ ಪ್ರಕಾಶ ಹೋಳೆಪ್ಪಗೋಳ 

ಸಮಾಜದ ಏಳ್ಗೆಗೆ ಮಠಮಾನ್ಯಗಳ ಕೊಡುಗೆ ಅಪಾರ : ತಹಶೀಲ್ದಾರ್ ಪ್ರಕಾಶ ಹೋಳೆಪ್ಪಗೋಳ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 30 :

 
ಸಮಾಜದ ಏಳ್ಗೆಗೆ ಮಠಮಾನ್ಯಗಳ ಕೊಡುಗೆ ಅಪಾರವಾಗಿದ್ದು,, ಸನಾತನ ಧರ್ಮ,ಸಂಸ್ಕೃತಿ, ಆಧ್ಯಾತ್ಮಿಕ ಚಿಂತನೆಗಳಿಂದ ಮನುಷ್ಯನ ಮನಸ್ಸನ್ನು ಧಾರ್ಮಿಕ ಗುರುಗಳು ಪ್ರಪುಲ್ಲ ಗೊಳಿಸಿದ್ದಾರೆ ಎಂದು ತಹಶೀಲ್ದಾರ ಪ್ರಕಾಶ್ ಹೊಳೆಪ್ಪಗೋಳ ಹೇಳಿದರು.

ಸಮೀಪದ ರಡ್ಡೇರಟ್ಟಿ ಗ್ರಾಮದಲ್ಲಿ ಬುಧವಾರದಂದು ಲಿಂಗೈಕ್ಯ ವೇದಮೂರ್ತಿ ಬಸಯ್ಯ ಸ್ವಾಮಿಗಳ 9ನೇ ಪುಣ್ಯಸ್ಮರಣೆ ನಿಮಿತ್ತ ಶ್ರೀರೇಣುಕಾ ಬಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಮಠಮಾನ್ಯಗಳು ಸಮಾಜದ ಕಲ್ಯಾಣಕ್ಕಾಗಿ ಗಣನೀಯವಾಗಿ ಶ್ರಮಿಸುತ್ತಿವೆ. ರಾಜ್ಯದ ಬಹುತೇಕ ಮಠಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಇದೇ ಕಾರ್ಯಕ್ರಮದಲ್ಲಿ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ಐ ನಾಗರಾಜ ಖಿಲಾರಿ, ಮದಕವಿಯ ಕೃಷಿ ಪಂಡಿತ ಶಿವಾನಂದ ಮಠಪತಿ, ರೈತ-ಕಾರ್ಮಿಕ ಅಶೋಕ ಲಗಳಿ ಅವರಿಗೆ ರೇಣುಕ ಬಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಶ್ರೀ ಬಸಯ್ಯ ಸ್ವಾಮಿ ಹಿರೇಮಠ ಭಾವಚಿತ್ರಕ್ಕೆ ಪೂಜ್ಯರು ಅತಿಥಿಗಳು ಪೂಜೆ ಸಲ್ಲಿಸಿ, ಪುಷ್ಪಾರ್ಪಣೆ ಅರ್ಪಿಸಿದರು.
ದಿವ್ಯ ಸಾನಿಧ್ಯವನ್ನು ಬಾಗೋಜಿಕೊಪ್ಪದ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯಸ್ವಾಮೀಜಿ, ಕಪರಟ್ಟಿ- ಕಳ್ಳಿಗುದ್ದಿ ಬಸವರಾಜ ಸ್ವಾಮೀಜಿ, ಯಾದವಾಡದ ಚನ್ನಬಸಪ್ಪ ಮುತ್ಯಾ ವಹಿಸಿದ್ದರು. ಕಾರ್ಯಕ್ರಮದ ಆಯೋಜಕ ಶಿವಬಸಯ್ಯ ಬಸಯ್ಯ ಹಿರೇಮಠ, ಪಿಕೆಪಿಎಸ್ ಅಧ್ಯಕ್ಷ ಕರೆಪ್ಪ ಬಿಜಗುಪ್ಪಿ ಮುಂತಾದ ಗ್ರಾಮದ ಮುಖಂಡರು, ಮಹಿಳೆಯರು ಇದ್ದರು. ಬೀಸನಕೊಪ್ಪದ ಗುರುನಾಥ ಬಡಿಗೇರ ಹಾಗೂ ಅವರ ಶಿಷ್ಯ ವೃಂದದಿಂದ ಭಜನಾ ಕಾರ್ಯಕ್ರಮ ಜರುಗಿದವು.

Related posts: