RNI NO. KARKAN/2006/27779|Tuesday, December 24, 2024
You are here: Home » breaking news » ಗೋಕಾಕ:ದಿನಾಂಕ 10 ರಂದು ಸಂಜೆ ನೌಕರರ ಸಮ್ಮೇಳನ ಹಾಗೂ ಕಾರ್ಯಾಲಯದ ಉದ್ಘಾಟನೆ : ಬಸವರಾಜ ಮುರಗೋಡ

ಗೋಕಾಕ:ದಿನಾಂಕ 10 ರಂದು ಸಂಜೆ ನೌಕರರ ಸಮ್ಮೇಳನ ಹಾಗೂ ಕಾರ್ಯಾಲಯದ ಉದ್ಘಾಟನೆ : ಬಸವರಾಜ ಮುರಗೋಡ 

ದಿನಾಂಕ 10 ರಂದು ಸಂಜೆ ನೌಕರರ ಸಮ್ಮೇಳನ ಹಾಗೂ ಕಾರ್ಯಾಲಯದ ಉದ್ಘಾಟನೆ : ಬಸವರಾಜ ಮುರಗೋಡ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಏ 8 :

 

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಮಟ್ಟದ ನೌಕರರ ಸಮ್ಮೇಳನ ಹಾಗೂ ಕಾರ್ಯಾಲಯದ ಉದ್ಘಾಟನಾ ಸಮಾರಂಭವು ದಿನಾಂಕ 10 ರಂದು ಸಂಜೆ 4 ಘಂಟೆಗೆ ಇಲ್ಲಿನ ಲಕ್ಷ್ಮೀ ದೇವಿ ದೇವಸ್ಥಾನದ ಶ್ರೀ ಮಹಾಲಕ್ಷ್ಮಿ ಸಭಾಂಗಣದಲ್ಲಿ ಜರಗುವದು.

ಸಮಾರಂಭವನ್ನು ಶಾಸಕ ರಮೇಶ ಜಾರಕಿಹೊಳಿ ಉದ್ಘಾಟಿಸುವರು, ಅಧ್ಯಕ್ಷತೆಯನ್ನು ರಾಜ್ಯ ಸರಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಢಕ್ಷರಿ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ , ಲಖನ್ ಜಾರಕಿಹೊಳಿ ಹಾಗೂ ಕಾರ್ಮಿಕ ಧುರೀಣ ಅಂಬಿರಾವ ಪಾಟೀಲ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆ.
ಕಾರ್ಯಕ್ರಮದ ನಂತರ ಅಂತರರಾಷ್ಟ್ರೀಯ ಖ್ಯಾತಿಯ ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಅವರಿಂದ ಹಾಸ್ಯ ಕಾರ್ಯಕ್ರಮ ಇರುವದು. ಗೋಕಾಕ ಹಾಗೂ ಮೂಡಲಗಿ ಸರಕಾರಿ ನೌಕರರು ಭಾಂಧವರು ಸಮಾರಂಭದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಮುರಗೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts: