RNI NO. KARKAN/2006/27779|Monday, December 23, 2024
You are here: Home » breaking news » ಕೌಜಲಗಿ:ಹಿಂದೂ ಧರ್ಮವು ಸಮತತ್ವವನ್ನು ತಿಳಿಸಿಕೊಡುತ್ತದೆ : ಚೈತ್ರ ಕುಂದಾಪುರ

ಕೌಜಲಗಿ:ಹಿಂದೂ ಧರ್ಮವು ಸಮತತ್ವವನ್ನು ತಿಳಿಸಿಕೊಡುತ್ತದೆ : ಚೈತ್ರ ಕುಂದಾಪುರ 

ಹಿಂದೂ ಧರ್ಮವು ಸಮತತ್ವವನ್ನು ತಿಳಿಸಿಕೊಡುತ್ತದೆ : ಚೈತ್ರ ಕುಂದಾಪುರ

 
ನಮ್ಮ ಬೆಳಗಾವಿ ಇ – ವಾರ್ತೆ, ಕೌಜಲಗಿ ಏ 12 :

 
ಜಾತ್ರೆ-ಉತ್ಸವಗಳು ಹಿಂದೂ ಧರ್ಮದ ಭವ್ಯ ಸಂಸ್ಕøತಿ- ಸಂಸ್ಕಾರವನ್ನು ಕಳಿಸಿ ಕೊಡುವುದರ ಜೊತೆಗೆ ಹಿಂದೂ ಧರ್ಮದ ಸಮತತ್ವವನ್ನು ತಿಳಿಸಿಕೊಡುತ್ತವೆ ಎಂದು ವಾಗ್ಮಿ ಚೈತ್ರ ಕುಂದಾಪುರ ಅಭಿಪ್ರಾಯಿಸಿದರು.
ಸಮೀಪದ ಮನ್ನಿಕೇರಿ ಗ್ರಾಮದ ಮಹಾಂತಲಿಂಗೇಶ್ವರ ಮಠದಲ್ಲಿ ಜಾತ್ರೋತ್ಸವ ನಿಮಿತ್ತ ಸೋಮವಾರದಂದು ಧಾರ್ಮಿಕ ಪ್ರವಚನ ಸಮಾರೋಪ ಮತ್ತು ರಥೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಚೈತ್ರ ಅವರು, ಹಿಂದೂ ಧರ್ಮದಲ್ಲಿ ಔದಾರ್ಯತೆ, ಬಂಧ-ಸಂಬಂಧವಿದೆ. ಇಲ್ಲಿಯ ಜಾತಿ ಉಪಜಾತಿಗಳಲ್ಲಿಯ ತಾರತಮ್ಯತೆಯನ್ನು ಅಳಿಸಿ ಹಿಂದೂಗಳೆಲ್ಲ ಒಂದು ಎಂಬ ಭಾವವನ್ನು ಮೂಡಿಸಿಕೊಳ್ಳಬೇಕಾದುದು ಇಂದಿನ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು. ಭಾರತ ದೇಶದಲ್ಲಿ ಗ್ರಾಮೀಣ ಪ್ರದೇಶಗಳು ಹಿಂದೂ ಧರ್ಮ-ಸಂಸ್ಕೃತಿಯ ತವರಾಗಿದ್ದು, ಹಳ್ಳಿಯ ಗಂಡುಮಕ್ಕಳು ಹಣೆಗೆ ವಿಭೂತಿ, ಹೆಣ್ಣುಮಕ್ಕಳು ಅಗಲವಾದ ಕುಂಕುಮ ಧಾರಣೆ ಮಾಡುವುದರಲ್ಲಿ ಹಿಂದುತ್ವ ಮತ್ತು ವೈಜ್ಞಾನಿಕತೆಯಿದೆ. ಪರಂಪರಾಗತವಾಗಿ ಬಂದ ಈ ಸಂಪ್ರದಾಯಗಳಲ್ಲಿ ಅಚಲ ಮನಶಕ್ತಿಯಿದೆ. ಹಿಂದೂಗಳಲ್ಲಿ ಈ ಜೀವನ ಶೈಲಿ ಬದಲಾದರೆ, ದೇಶದಲ್ಲಿ ಹಿಂದುತ್ವ ಹೊರಟುಹೋಗಬಹುದು ಆದುದರಿಂದ ಹಿಂದೂ ಧರ್ಮ ಜಾಗೃತಿ ಆಗಬೇಕಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ದಾನಿಗಳನ್ನು ವಿವಿಧ ಗಣ್ಯಮಾನ್ಯರನ್ನು ಸತ್ಕರಿಸಲಾಯಿತು. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಶಾಸಕರ ಪರವಾಗಿ ಸತ್ಕಾರ ಸ್ವೀಕರಿಸಿದರು. ಆರ್.ಎಸ್.ಎಸ್ ವಿಭಾಗ ಸಂಘ ಚಾಲಕ ಮಲ್ಲಿಕಾರ್ಜುನ ಚುನಮರಿ, ವಿಶ್ವ ಹಿಂದೂ ಪರಿಷತ್ ವಿಭಾಗ ಅಧಿಕಾರಿ ನಾರಾಯಣ ಮಠಾಧಿಕಾರಿ, ಗೋಕಾಕ ತಾಲೂಕ ಬಿಸಿಊಟದ ಅಧಿಕಾರಿ ಎ.ಬಿ.ಮಲಬನ್ನವರ ಮಾತನಾಡಿದರು.
ದಿವ್ಯ ಸಾನಿಧ್ಯವನ್ನು ಮಹಾಂತಲಿಂಗೇಶ್ವರ ಮಠದ ವಿಜಯಸಿದ್ದೇಶ್ವರ ಸ್ವಾಮೀಜಿ ವಹಿಸಿ ಮಾತನಾಡಿ, ಹಿಂದೂ ಧರ್ಮದಲ್ಲಿ ಸಮಾನತೆಯ ಕುರಿತಾಗಿ ದೊಡ್ಡಮಟ್ಟದ ಜಾಗೃತಿ ಮೂಡಬೇಕಾಗಿದೆ. ಸಣ್ಣ ಸಣ್ಣ ಜಾತಿಗಳಲ್ಲಿ ಕಲಹಗಳು ಮೂಡಿ, ಹಿಂದೂಗಳಲ್ಲಿಯ ಏಕತೆಗೆ ಧಕ್ಕೆ ಉಂಟಾಗುತ್ತಿದೆ. ನಮಗೆ ನಮ್ಮ ಭಾರತ ದೇಶ ಎಷ್ಟು ಮುಖ್ಯವೋ ಹಾಗೆ ನಮಗೆಲ್ಲ ಹಿಂದುತ್ವ ಮುಖ್ಯವಾಗಿದೆ. ಜಾಗತಿಕವಾಗಿ ಗುರುಸ್ಥಾನ ಪಡೆಯುತ್ತಿರುವ ಭಾರತದಂಥ ರಾಷ್ಟ್ರದಲ್ಲಿ ಯಾರೂ ಜಾತಿಯ ಮೂಲಕ ಗುರುತಿಸಿಕೊಳ್ಳದೆ, ಸರ್ವರಲ್ಲಿಯೂ ಸಮಾನತೆ ಕಂಡುಕೊಳ್ಳುವುದರ ಜೊತೆಗೆ, ಹಿಂದುತ್ವದ ಮೂಲಕ ನಮ್ಮನ್ನು ನಾವು ಹಿಂದುಗಳು ಗುರುತಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಮದುರ್ಗದ ಜಗದಾತ್ಮಾನಂದ ಸ್ವಾಮೀಜಿ, ತಿಗಡಿಯ ಶಂಕರಾನಂದ ಸ್ವಾಮೀಜಿ, ಜೋಕ್ಕಾನಟ್ಟಿ ಬಿಳಿಯಾನಸಿದ್ಧ ಸ್ವಾಮೀಜಿ, ಮುಗಳಿಹಾಳ ಸೋಮಲಿಂಗ ಶಾಸ್ತ್ರಿಜಿ, ಡಾ.ರೇಖಾ ಚಿನ್ನಾಕಟ್ಟಿ, ಪತ್ರಕರ್ತ ಡಾ.ರಾಜು ಕಂಬಾರ ಮುಂತಾದವರಿದ್ದರು. ಸಿದ್ಧಾರೂಢ ಕಂಬಾರ ಸೇರಿದಂತೆ ಮಠದ ನೂರಾರು ಭಕ್ತರು, ಮಹಿಳೆಯರು, ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಾಯಂಕಾಲ 5.30 ಗಂಟೆಗೆ ಮಹಾಂತಲಿಂಗೀಶ್ವರ ರಥೋತ್ಸವ ಜರುಗಿತು. ರಾತ್ರಿ ಮನರಂಜನಾ ಕಾರ್ಯಕ್ರಮ ನಡೆದವು.

Related posts: