RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಅಂತರಂಗ ಶುದ್ದಿಯಿಂದ ಇಂದ್ರಿಯ ಗಳನ್ನು ಗೆದ್ದು ಜೀವನದ ಸಾರ್ಥಕತೆಯನ್ನು ಮಾಡಿಕೊಳ್ಳಿ : ಶ್ರೀ ಬಸವಗೀತಾ ತಾಯಿ

ಗೋಕಾಕ:ಅಂತರಂಗ ಶುದ್ದಿಯಿಂದ ಇಂದ್ರಿಯ ಗಳನ್ನು ಗೆದ್ದು ಜೀವನದ ಸಾರ್ಥಕತೆಯನ್ನು ಮಾಡಿಕೊಳ್ಳಿ : ಶ್ರೀ ಬಸವಗೀತಾ ತಾಯಿ 

ಅಂತರಂಗ ಶುದ್ದಿಯಿಂದ ಇಂದ್ರಿಯ ಗಳನ್ನು ಗೆದ್ದು ಜೀವನದ ಸಾರ್ಥಕತೆಯನ್ನು ಮಾಡಿಕೊಳ್ಳಿ : ಶ್ರೀ ಬಸವಗೀತಾ ತಾಯಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 17 :

 

ಅಂತರಂಗ ಶುದ್ದಿಯಿಂದ ಇಂದ್ರಿಯ ಗಳನ್ನು ಗೆದ್ದು ಜೀವನದ ಸಾರ್ಥಕತೆಯನ್ನು ಮಾಡಿಕೊಳ್ಳುವಂತೆ ಅಕ್ಕಮಹಾದೇವಿ ತಮ್ಮ ವಚನಗಳ ಮೂಲಕ ನೀಡಿದ ಸಂದೇಶವನ್ನು ಆಚರಣೆಗೆ ತರುವಂತೆ ರಾಮದುರ್ಗದ ಶ್ರೀ ಬಸವಗೀತಾ ತಾಯಿಯವರು ಹೇಳಿದರು.

ಶನಿವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಹುಣ್ಣಿಮೆ ನಿಮಿತ್ತ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಹಾಗೂ ಲಿಂಗಾಯತ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 152ನೇ ಶಿವಾನುಭವ ಗೋಷ್ಠಿಯಲ್ಲಿ ಶ್ರೀ ಕುಲಕ್ಕೆ ಸ್ಪೂರ್ತಿ ಅಕ್ಕಾ ಎಂಬ ವಿಷಯ ಕುರಿತು ಅವರು ಮಾತನಾಡುತ್ತಿದ್ದರು.

ಸಮಾಜದಲ್ಲಿ ಇಂದು ನಾವು ಎದುರಿಸುತ್ತಿರುವ ಪ್ರತಿಯೊಂದು ಸಮಸ್ಯೆಗೂ ವಚನ ಸಾಹಿತ್ಯದ ಮೂಲಕ ಪರಿಹಾರ ಕಂಡುಕೊಳ್ಳಬಹುದು. ವಚನಗಳನ್ನು ಕಂಠಪಾಠ ಮಾಡದೆ ಅರಿತು ನಡೆಯಬೇಕು. ಬಸವ ತತ್ವದ ಅನುಕರಣೆ ಸರಳವಾಗಿದ್ದು, ಅದನ್ನು ಆಚರಣೆಗೆ ತರುವ ಮೂಲಕ ಜೀವನವನ್ನು ಸಾರ್ಥಕತೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ವ‌ಹಿಸಿದ್ದರು.
ವೇದಿಕೆ ಮೇಲೆ ಬಸವ ಪ್ರಕಾಶ ಮಹಾಸ್ವಾಮಿಗಳು, ಬಸನಗೌಡ ಪಾಟೀಲ, ಡಾ.ಸಿ.ಕೆ ನಾವಲಗಿ, ಎಸ್.ಎಸ್.ಅಂಗಡಿ, ಎಸ್.ಎಸ್.ಕಟ್ಟಿ, ವಿನೋದ ಗುರಾಣಿ, ವೀಣಾ ಸವಣೂರ, ಗಂಗಾಭೀಕಾ ದಯನ್ನವರ ಇದ್ದರು.

ಶಿಕ್ಷಕರಾದ ಆರ್‌.ಎಲ್.ಮಿರ್ಜಿ ಸ್ವಾಗತಿಸಿದರು, ಎಸ್.ಕೆ ಮಠದ ವಂದಿಸಿದರು.

Related posts: