RNI NO. KARKAN/2006/27779|Sunday, December 15, 2024
You are here: Home » breaking news » ಗೋಕಾಕ:ಆಯುಷ್ಯಮಾನ ಇಲಾಖೆಯಲ್ಲಿ ಗೋಕಾಕ ಸರಕಾರಿ ಆಸ್ಪತ್ರೆ ರಾಜ್ಯಕ್ಕೆ 2 ನೇ ಸ್ಥಾನ ಪಡೆದಿದೆ : ವಿಪ ಸದಸ್ಯ ಲಖನ್ ಅಭಿಮತ

ಗೋಕಾಕ:ಆಯುಷ್ಯಮಾನ ಇಲಾಖೆಯಲ್ಲಿ ಗೋಕಾಕ ಸರಕಾರಿ ಆಸ್ಪತ್ರೆ ರಾಜ್ಯಕ್ಕೆ 2 ನೇ ಸ್ಥಾನ ಪಡೆದಿದೆ : ವಿಪ ಸದಸ್ಯ ಲಖನ್ ಅಭಿಮತ 

ಆಯುಷ್ಯಮಾನ ಇಲಾಖೆಯಲ್ಲಿ ಗೋಕಾಕ ಸರಕಾರಿ ಆಸ್ಪತ್ರೆ ರಾಜ್ಯಕ್ಕೆ 2 ನೇ ಸ್ಥಾನ ಪಡೆದಿದೆ : ವಿಪ ಸದಸ್ಯ ಲಖನ್ ಅಭಿಮತ

 
ನಮ್ಮ ಬೆಳಗಾವಿ ಇ – ವಾರ್ತೆ,ಗೋಕಾಕ ಏ 29 :

 

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರ ಉತ್ತಮ ಕಾರ್ಯಮಾಡುತ್ತಿದ್ದು, ಆಯುಷ್ಯಮಾನ ಇಲಾಖೆಯಲ್ಲಿ ಗೋಕಾಕ ಸರಕಾರಿ ಆಸ್ಪತ್ರೆ ರಾಜ್ಯಕ್ಕೆ 2 ನೇ ಸ್ಥಾನ ಪಡೆದಿದೆ. ಸರಕಾರಿ ಆಸ್ಪತ್ರೆ ಉತ್ತಮವಾಗಿ ಕಾರ್ಯನಿರ್ವಹಿಸಲು ಶಾಸಕ ರಮೇಶ ಜಾರಕಿಹೊಳಿ ಅವರು ಮುತುವರ್ಜಿ ವಹಿಸಿ ಕಾರ್ಯ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು .

ಶುಕ್ರವಾರದಂದು ನಗರದ ಸರಕಾರಿ ಆಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕೋಡಿ,ತಾಲೂಕು ಆಡಳಿತ ಗೋಕಾಕ , ತಾಲೂಕು ಪಂಚಾಯಿತಿ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಯುಷ್ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಉಚಿತ ಆರೋಗ್ಯ ಮೇಳ ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳ ಜಾಗೃತಿ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಸಹಕಾರ ಕೊಟ್ಟ ಪರಿಣಾಮ ಆಸ್ಪತ್ರೆಯು ಯಶಸ್ವಿಯಾಗಿ ತಮ್ಮ ಕಾರ್ಯ ನಿರ್ವಹಿಸುತ್ತಿದೆ. ಈಗಿದ್ದ ಆಸ್ಪತ್ರೆಯನ್ನು ಶೀಘ್ರದಲ್ಲೇ 250 ಹಾಸಿಗೆ ಉನ್ನತೀಕರಣ ಗೋಳಿಸಲಾಗುವದು.‌ಬರುವ 2 ವರ್ಷಗಳಲ್ಲಿ ಗೋಕಾಕ ನಗರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ‌ ಮಾಡುವ ಯೋಜನೆಯನ್ನು ಶಾಸಕ ರಮೇಶ ಜಾರಕಿಹೊಳಿ ಹೊಂದಿದ್ದಾರೆ ಎಂದ ಅವರು ಫೀಜಾ ಬರ್ಗರ ತಿನ್ನುವದರಿಂದದ ಆರೋಗ್ಯ ಹಾಳು ಭಾರತೀಯ ಆಹಾರ ಪದ್ಧತಿಯನ್ನು ಅಳವಡಿಸಿ ಆರೋಗ್ಯವಂತರಾಗಬೇಕು. ಆರೋಗ್ಯವೆ ನಮಗೆ ಮುಖ್ಯವಾಗಿದೆ. ಇಂತಹ ಕಾರ್ಯಕ್ರಮಗಳ ಸದುಪಯೋಗದಿಂದ ಸಾರ್ವಜನಿಕರು ಆರೋಗ್ಯವಂತ ಸಮಾಜ ನಿರ್ಮಿಸಬೇಕು.
ಕೊರೋನಾದಂತಹ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಹಂತದ ಸಿಬ್ಬಂದಿಗಳ ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿ ಜನರ ಜೀವ ಉಳಿಸಿದ್ದಾರೆ ಅವರ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸರಕಾರ ಜನರ ಆರೋಗ್ಯದ ದೃಷ್ಟಿಯಿಂದಯಿಂದ ಸರಕಾರ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದೆ ಸಾರ್ವಜನಿಕರು ಅವುಗಳ ಉಪಯೋಗ ಪಡೆದುಕೊಂಡು ಆರೋಗ್ಯವಂತರಾಗಬೇಕು. ಮಾನವನಿಗೆ ಅನ್ನ,ಆಹಾರ ,ವಸತಿ, ಅಕ್ಷರ ಸೇರಿದಂತೆ ಮೂಲಭೂತ ಸೌಲಭ್ಯ ಅತಿ ಅವಶ್ಯ ಅದನ್ನು ಕಲ್ಪಿಸುವದು ಸರಕಾರ ಜವಾಬ್ದಾರಿಯಾಗಿದೆ. ಅಂತಹ ಹಲವಾರು ಯೋಜನೆಗಳನ್ನು ಸರಕಾರ ಒದಗಿಸಿದ್ದು, ಆಯುಷ್ಯಮಾನ ಭಾರತ ಯೋಜನೆಯಡಿ 5 ಲಕ್ಷ ರೂಗಳ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಿದೆ. ಇಂತಹ ಮೇಳಗಳ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ, ಜನರಿಗೆ ಯೋಜನೆಗಳನ್ನು ತಲುಪಿಸುವ ಕಾರ್ಯ ನಿರಂತರ ನಡೆಯಲಿ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಧೇಹದಾನ ಮತ್ತು ನೇತ್ರದಾನ ಮಾಡಿದ ಮಹನೀಯರನ್ನು ಸತ್ಕರಿಸಿ , ಗೌರವಿಸಲಾಯಿತು. ಆಯುಷ್ಯಮಾನ ಸೇರಿದಂತೆ ಇತರ ಸರಕಾರಿ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ವೇದಿಕೆಯಲ್ಲಿ ತಹಸೀಲ್ದಾರಗಳಾದ ಪ್ರಕಾಶ ಹೊಳೆಪ್ಪಗೊಳ, ಡಿ.ಜಿ.ಮಹಾಂತ್, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಮುರಳಿಧರ ದೇಶಪಾಂಡೆ, ಎಫ್ ಜಿ. ಚನ್ನಣ್ಣವರ, ಅಪರ ಜಿಲ್ಲಾ ಆರೋಗ್ಯಧಿಕಾರಿ ಡಾ.ಶರಣಪ್ಪ ಗಡೇದ, ಡಾ.ಎಂ‌.ವ್ಹಿ.ಕಿವಡಸಣ್ಣವರ, ಡಿ.ವಾಯ್.ಎಸ್.ಪಿ ಮನೋಜಕುಮಾರ ನಾಯಿಕ, ಡಾ‌. ಆರ್.ಎಸ್.ಬೆನಚಿನಮರಡಿ , ಡಾ.ಮುತ್ತಣ್ಣ ಕೊಪ್ಪದ, ಡಾ.ರವೀಂದ್ರ ಅಂಟಿನ, ಪೌರಾಯುಕ್ತ ಶಿವಾನಂದ ಹಿರೇಮಠ, ಸಿಡಿಪಿಓಗಳಾದ ಜಯಶ್ರೀ ಶಿಲವಂತ, ವಾಯ್.ಕೆ ಗದಾಡಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೆನ್ನವರ ಉಪಸ್ಥಿತರಿದ್ದರು.

Related posts: