ಗೋಕಾಕ:ಡಾ.ಪುನೀತ ರಾಜಕುಮಾರ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮತ್ತು ಪುಷ್ಪರ್ಚನೆ ಮಾಡಿ ವಿನೂತನವಾಗಿ ಪ್ರತಿಭಟನೆ
ಡಾ.ಪುನೀತ ರಾಜಕುಮಾರ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮತ್ತು ಪುಷ್ಪರ್ಚನೆ ಮಾಡಿ ವಿನೂತನವಾಗಿ ಪ್ರತಿಭಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 30 :
ಕಳೆದ ಮೂರು ದಿನಗಳ ಹಿಂದೆ ತಿರುಪತಿಯಿಂದ ತಿರುಮಲ ದೇವಸ್ಥಾನಕ್ಕೆ ತೆರಳುವಾಗ ಬೆಟ್ಟದ ಕೆಳಗೆ ಕರವೇ ಗಜಸೇನೆಯ ರಾಜ್ಯಾಧ್ಯಕ್ಷ ಬಿವಿ ರಾಘವೇಂದ್ರ ಅವರನ್ನು ಭದ್ರತಾ ಸಿಬ್ಬಂಧಿ ತಡೆದು ವಾಹನದ ಮೇಲೆ ಅಂಟಿಸಿದ್ದ ಡಾ.ಪುನೀತ ರಾಜಕುಮಾರ ಅವರ ಸ್ಟೀಕರ್ ತೆಗೆದುಹಾಕಿಸಿದ ಹಿನ್ನಲೆಯಲ್ಲಿ ಕರವೇ ಗಜಸೇನೆಯ ಕಾರ್ಯಕರ್ತರು ತಾಲೂಕಿನ ಶಿಂಧಿಕುರಬೇಟ ಗ್ರಾಮದಲ್ಲಿ ಡಾ.ಪುನೀತ ರಾಜಕುಮಾರ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮತ್ತು ಪುಷ್ಪರ್ಚನೆ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಕರವೇ ಗಜಸೇನೆಯ ಉತ್ತರಕರ್ನಾಟಕ ಯುವ ಘಟಕದ ಅಧ್ಯಕ್ಷ ಪವನ ಮಹಾಲಿಂಗಪೂರ ಮಾತನಾಡಿ, ಡಾ.ಪುನೀತ ರಾಜಕುಮಾರ ಅವರಿಗೆ ಅವಮಾನ ಮಾಡಿದ್ದಲ್ಲದೇ ಕನ್ನಡ ಶಾಲು ವಾಹನಗಳಲ್ಲಿ ತೆಗೆದುಕೊಂಡು ಹೋಗದೆ ತಡೆದಿದ್ದಾರೆ. ಓಟಿಡಿ ಸಿಬ್ಬಂಧಿ ಕನ್ನಡ ಶಾಲು ಕೆಳಗೆ ಇರಿಸಿ ಮರಳಿ ಪಡೆಯುವಂತೆ ಒತ್ತಾಯ ಸಹ ಮಾಡಿದ್ದು, ಆಂಧ್ರಪ್ರದೇಶದ ಸಿಎಮ್ ಜಗನಮೋಹನ ರೆಡ್ಡಿ ಈ ಘಟನೆ ಕುರಿತು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ ಗಜಸೇನೆಯ ಲಕ್ಷ್ಮಿ ಪಾಟೀಲ್, ರಾಜು ನಿಲಜಗಿ, ಕಾಡೆಶ ತೆಳಗೆರೆ, ಮಲಿಕ್ ಗುಜನಟ್ಟಿ, ವಿಜಯಲಕ್ಷ್ಮಿ ಮಾಲದಿನ್ನಿ, ರಾಮಯ್ಯ ಅಲೋಶಿ, ಚನ್ನಪ್ಪ ಗುದಗನ್ನವರ, ಅಡಿವೆಪ್ಪ ಬೆಕ್ಕಿನವರ ಸೇರಿದಂತೆ ಅನೇಕರು ಇದ್ದರು.