RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಭಜರಂಗದಳದ ಕಾರ್ಯಕರ್ತರು ಸಮಾಜ, ದೇಶ, ಧರ್ಮ ರಕ್ಷಣೆಗಾಗಿ ನಿಸ್ವಾರ್ಥದಿಂದ ಹೋರಾಡುತ್ತಿದ್ದಾರೆ : ಪುಂಡಲೀಕ ದಳವಾಯಿ

ಗೋಕಾಕ:ಭಜರಂಗದಳದ ಕಾರ್ಯಕರ್ತರು ಸಮಾಜ, ದೇಶ, ಧರ್ಮ ರಕ್ಷಣೆಗಾಗಿ ನಿಸ್ವಾರ್ಥದಿಂದ ಹೋರಾಡುತ್ತಿದ್ದಾರೆ : ಪುಂಡಲೀಕ ದಳವಾಯಿ 

ಭಜರಂಗದಳದ ಕಾರ್ಯಕರ್ತರು ಸಮಾಜ, ದೇಶ, ಧರ್ಮ ರಕ್ಷಣೆಗಾಗಿ ನಿಸ್ವಾರ್ಥದಿಂದ ಹೋರಾಡುತ್ತಿದ್ದಾರೆ : ಪುಂಡಲೀಕ ದಳವಾಯಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 2 :

 

ಶಸ್ತ್ರ ಹಾಗೂ ಶಾಸ್ತ್ರದೊಂದಿಗೆ ಧರ್ಮ ಸ್ಥಾಪನೆ ಮಾಡಿದ ಶಿವಾಜಿ ಮಹರಾಜ ಹಾಗೂ ಬಸವಣ್ಣನವರ ಆದರ್ಶಗಳ ಆಚರಣೆಯೊಂದಿಗೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಭಜರಂಗದಳ ಹೊರಾಡುತ್ತಿದೆ ಎಂದು ಭಜರಂಗದಳದ ಪ್ರಾಂತ ಸಂಯೋಜಕ ಪುಂಡಲೀಕ ದಳವಾಯಿ ಹೇಳಿದರು.
ಅವರು, ರವಿವಾರದಂದು ನಗರದಲ್ಲಿ ವಿಶ್ವಹಿಂದು ಪರಿಷದ್ ಭಜರಂಗದಳದಿಂದ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಬಸವ ಜಯಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಬೃಹತ ಶೋಭಾಯಾತ್ರೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಜರಂಗದಳದ ಕಾರ್ಯಕರ್ತರು ಸಮಾಜ, ದೇಶ, ಧರ್ಮ ರಕ್ಷಣೆಗಾಗಿ ನಿಸ್ವಾರ್ಥದಿಂದ ಹೋರಾಡುತ್ತಿದ್ದಾರೆ. ಶಿವಾಜಿ ಮರಾಜರ ಆದರ್ಶಗಳನ್ನು ಮೈಗೂಡಿಸಿಕೊಂಡು, ಭಗೀರಥ ಮಹಾರಾಜರ ಪ್ರಯತ್ನ, ರಾಯಣ್ಣನ ಧೈರ್ಯ ಹಾಗೂ ಬಸವಣ್ಣನವರ ಸಮಾನತೆಯೊಂದಿಗೆ ಹಿಂದೂ ರಾಷ್ಟ್ರ ನಿಮಾಣಕ್ಕೆ ಹಗಲಿರುಳು ಹೋರಾಡುತ್ತಿದ್ದಾರೆ. ಶ್ರೀರಾಮನ ಆದರ್ಶದಿಂದ ರಾಮರಾಜ್ಯ ನಿರ್ಮಾಣಕ್ಕೆ ಪಣತೊಟ್ಟಿದ್ದಾರೆ. ಇದಕ್ಕೆ ಹಿಂದುಗಳು ಸಂಘಟಿತರಾಗಿ ಕೈಜೋಡಿಸುವಂತೆ ಕರೆ ನೀಡಿದರು.
ನಗರದ ಪ್ರಮುಖ ಬೀದಿಗಳಲ್ಲಿ ಬಸವಣ್ಣನವರ, ಶಿವಾಜಿ ಮಹರಾಜರ, ರಾಜಋಷಿ ಭಗೀರಥರ ಮತ್ತು ಸಂಗೋಳ್ಳಿ ರಾಯಣ್ಣನವರ ಪುತ್ಥಳಿಯ ಭವ್ಯ ಮೆರವಣಿಗೆಯ ಶೋಭಾ ಯಾತ್ರೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಬ್ರಹ್ಮಾನಂದ ಸ್ವಾಮಿಗಳು, ಎಮ್ ಡಿ ಚುನಮರಿ, ಎಮ್ ವೈ ಹಾರುಗೇರಿ, ನಾರಾಯಣ ಮಠಾಧಿಕಾರಿ, ಸದಾಶಿವ ಗುದಗೋಳ, ಕೃಷ್ಣಾ ಕುರುಬಗಟ್ಟಿ, ಜಯಾನಂದ ಮುನವಳ್ಳಿ, ಜಿತೇಂದ್ರ ಮಾಂಗಳೇಕರ, ಮಹಾಂತೇಶ ತಾಂವಶಿ ಸೇರಿದಂತೆ ಅನೇಕರು ಇದ್ದರು.

Related posts: