RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಗೋಕಾಕದಲ್ಲಿ ಸಡಗರ ಸಂಮ್ರದ ಪವಿತ್ರ ರಂಜಾನ್ ಹಬ್ಬ ಆಚರಣೆ

ಗೋಕಾಕ:ಗೋಕಾಕದಲ್ಲಿ ಸಡಗರ ಸಂಮ್ರದ ಪವಿತ್ರ ರಂಜಾನ್ ಹಬ್ಬ ಆಚರಣೆ 

ಗೋಕಾಕದಲ್ಲಿ ಸಡಗರ ಸಂಮ್ರದ ಪವಿತ್ರ ರಂಜಾನ್ ಹಬ್ಬ ಆಚರಣೆ

 

ನಮ್ಮ ಬೆಳಗಾವಿ ಇ- ವಾರ್ತೆ, ಗೋಕಾಕ ಮೇ 3 :

 
ಸ್ಥಳೀಯ ಈದ್ಗಾ ಮೈದಾನದಲ್ಲಿ ಸೌಹಾರ್ದತೆಯ ಸಹಬಾಳ್ವೆಯ ಪ್ರತೀಕವಾಗಿರುವ ಪವಿತ್ರ ರಂಜಾನ್ ಹಬ್ಬವನ್ನು ಮಂಗಳವಾರದಂದು ಇಲ್ಲಿಯ ಮುಸ್ಲಿಂ ಭಾಂದವರು ಅತ್ಯಂತ ಸಡಗರ ಸಂಮ್ರದಿಂದ ಆಚರಿಸಿದರು.
ತಮ್ಮ ಧರ್ಮದ ಸಂಪ್ರದಾಯದಂತೆ ಅಂದು ಬೆಳಗ್ಗೆ ಮಸೀದಿಯಲ್ಲಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ಹೊಸ ಬಟ್ಟೆತೊಟ್ಟು ಮಕ್ಕಳು ಸೇರಿದಂತೆ ವೃದ್ಧರವರೆಗೆ ಮುಸ್ಲಿಂ ಭಾಂದವರು ಒಬ್ಬರಿಗೊಬ್ಬರು ಅಪ್ಪಿಕೊಂಡು ರಂಜಾನ್ ಹಬ್ಬದ ಶುಭಾಶಯಗಳನ್ನು ಹಂಚಿಕೊಂಡು ಈದ -ಉಲ್-ಪಿತರ್ ಸಡಗರದಿಂದ, ಭಕ್ತಿಯಿಂದ ಆಚರಿಸಿದರು.
ನಗರದ ಮುಸ್ಲಿಂ ಭಾಂದವರು ಹಿಂದೂ ಭಾಂದವರ ಅಕ್ಕ-ಪಕ್ಕದ ಮನೆಯವರಿಗೆ, ಮಿತ್ರರಿಗೆ ಹಾಗೂ ತಮ್ಮ ಬಂಧು, ಭಾಂದವರಿಗೆ ಸವಿ ಸವಿಯಾದ ಅಡುಗೆ ಉಣಬಡಿಸಿ ಸಂಭ್ರಮಿಸಿದರು.


ಸ್ನೇಹ, ಸೌಹಾರ್ದತೆ, ತ್ಯಾಗದ ಸಂಕೇತವಾಗಿರುವ ರಮಜಾನ್ ಹಬ್ಬವನ್ನು ಅಲ್ಹಾನ ಆಜ್ಞೆಯಂತೆ ಆಚರಿಸಬೇಕು. ಪ್ರೀತಿ, ಸಹಬಾಳ್ವೆ, ಸೌಹಾರ್ದತೆಯಿಂದ, ಪರೋಪಕಾರಿಯಾಗಿ ಒಬ್ಬ ಒಳ್ಳೆಯ ಮಾನವನಾಗಿ ಧಾರ್ಮಿಕ ಕರ್ತವ್ಯಗಳನ್ನು ನಿಭಾಯಿಸಬೇಕೆಂದು ಗೋಕಾಕ ನಗರದ ಅಮೀರಸಾಬ ಹಾಜಿ ಕುತಬ್ಬುದ್ದಿನ ಬಸಾಪೂರ ಸಂದೇಶ ನೀಡಿದರು.
ಮೌಲಾನಾ ಸಲಹಾಸಾಬ ಅವರು ರಮಜಾನ ಹಬ್ಬದ ವಿಶೇಷ ಪ್ರಾರ್ಥನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಮಾಜದ ನಗರಸಭೆ ಸದಸ್ಯರಾದ ಅಬ್ಬಾಸ ಎ ದೇಸಾಯಿ , ಕುತಬುದ್ದಿನ ಗೋಕಾಕ , ಮುಖಂಡರಾಜ ಜಾವೇದ್ ಗೋಕಾಕ , ಇಸ್ಮಾಯಿಲ್ ಗೋಕಾಕ, ಇಸ್ಮಾಯಿಲ್ ಜಮಾದಾರ, ಜಾಕೀರ ಕುಡಚಿಕರ, ಅಬ್ಬಾಸ ಕೆ ದೇಸಾಯಿ , ಸಾದಿಕ ಹಲ್ಯಾಳ , ಜುಬೇರ ತರಾಸಗರ , ದಸ್ತಗೀರ ಪೈಲವಾನ, ಜಹಾಂಗೀರ ಜಮಾದಾರ, ಮಲಿಕಜಾನ ತಲವಾರ, ಸೇರಿದಂತೆ ಸಮಾಜದ ಎಲ್ಲ ಮುಖಂಡರು ಉಪಸ್ಥಿತರಿದ್ದರು

Related posts: