RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ನ್ಯಾಯಾಲಯ ತಡೆಯಾಜ್ಞೆ :ಏರ್‍ಟೇಲ್ ಹೊಸ ಟಾವರ್ ಕಾಮಗಾರಿ ಸ್ಥಗಿತ

ಗೋಕಾಕ:ನ್ಯಾಯಾಲಯ ತಡೆಯಾಜ್ಞೆ :ಏರ್‍ಟೇಲ್ ಹೊಸ ಟಾವರ್ ಕಾಮಗಾರಿ ಸ್ಥಗಿತ 

ನ್ಯಾಯಾಲಯ ತಡೆಯಾಜ್ಞೆ :ಏರ್‍ಟೇಲ್ ಹೊಸ ಟಾವರ್ ಕಾಮಗಾರಿ ಸ್ಥಗಿತ

ಗೋಕಾಕ ಸೆ 28 : ಇಲ್ಲಿಯ ಪಾಯಸಾಗರ ಶಾಲೆ ರಸ್ತೆ ಪಕ್ಕದಲ್ಲಿರುವ ಶಾಲಾ ಕಾಲೇಜುಗಳ ಹತ್ತಿರದಲ್ಲಿ ಏರ್‍ಟೇಲ್ ಖಾಸಗಿ ಕಂಪನಿ ಅವರು ಹೊಸ ಟಾವರ್ ನಿರ್ಮಿಸುತ್ತಿರುವ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಸ್ಥಳೀಯ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಟಾವರ್ ನಿರ್ಮಾಣ ಮಾಡುತ್ತಿರುವ ಸ್ಥಳದಲ್ಲಿ ಪ್ರತಿಭಟನೆ ಮಾಡಿ ಆಕ್ರೋಷ ವ್ಯಕ್ತಪಡಿಸಿದರು.

ಗೋಕಾಕ ನಗರದ ವಾರ್ಡ 22ರಲ್ಲಿರುವ ಪಾಯಸಾಗರ ಶಾಲೆ, ಜೆಎಸ್‍ಎಸ್ ಕಾಲೇಜು ಹಾಗೂ ಮೈ ಫಸ್ರ್ಟ ಸ್ಟೇಪ್ ಪ್ಲೇ ನರ್ಸರಿ ಶಾಲೆಗೆ ನಿತ್ಯ ಮಕ್ಕಳು ವಿದ್ಯಾಭ್ಯಾಸಕ್ಕೆ, ನಗರದ ಸಾರ್ವಜನಿಕರು ಇಲ್ಲಿ ಓಡಾಡುತ್ತಿದ್ದು, ಈ ಶಾಲೆ ಕಾಲೇಜುಗಳ ಹತ್ತಿರ ಗುಡ್ಡದಮನಿ ಎಂಬುವರ ಖಾಸಗಿ ಜಾಗೆಯಲ್ಲಿ ಏರ್‍ಟೇಲ್ ಖಾಸಗಿ ಕಂಪನಿಯ ಹೊಸ ಟಾವರ್ ನಿರ್ಮಿಸುತ್ತಿರುವದರಿಂದ ಶಾಲಾ ಮಕ್ಕಳ ಹಾಗೂ ಸಾರ್ವಜನಿಕರ ಶಾರೀರಿಕ ಬೆಳವಣಿಗೆಯ ಮೇಲೆ ದುಷ್ಪÀರಿಣಾಮ ಬಿರುವದರಿಂದ ಟಾವರ್ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ಹಾಗೂ ಈ ಸ್ಥಳದಲ್ಲಿ ಟಾವರ್ ಸಂಪೂರ್ಣ ನಿರ್ಮಾಣವಾಗದಂತೆ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳುವಂತೆ ನ್ಯಾಯಾಲಯದ ಮೊರೆ ಹೋಗಿ ನ್ಯಾಯಾಲಯ ತಡೆಯಾಜ್ಞೆ ನೀಡಿದರು ಕಾಮಗಾರಿಯನ್ನು ಸ್ಥಗೀತಗೋಳಿಸದ ಹಿನ್ನಲೆಯಲ್ಲಿ ಬುಧವಾರದಂದು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಸೇರಿ ಪ್ರತಿಭಟನೆ ನಡೆಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಪೋಲಿಸ್ ಸಿಬ್ಬಂಧಿ ವರ್ಗದವರು ಪ್ರತಿಭಟನೆ ಶಾಂತಗೊಳಿಸಿ ಕಾಮಗಾರಿ ಸ್ಥಗೀತಗೊಳಿಸುವಂತೆ ಸೂಚನೆ ನೀಡಿದರು.

ನಗರಸಭೆ ಸದಸ್ಯ ಭೀಮಶಿ ಭರಮನ್ನವರ, ವಾರ್ಡ ಪ್ರಮುಖರಾದ ಅಶೋಕ ಹೆಗ್ಗನ್ನವರ, ರಾಹುಲ್ ಕಿತ್ತೂರ, ಶಾಂತಿನಾಥ ಖಾರೇಪಟನ ಬಾಹುಬಲಿ ಕಿತ್ತೂರ, ಮಹಾವೀರ ಜೋಡಟ್ಟಿ, ಮನೋಜ ಜೋಡಟ್ಟಿ, ಅಣ್ಣಾಸಾಬ ಡಬಾಜ್, ಸುರೇಶ ಜೋಡಟ್ಟಿ, ಅಶೋಕ ಕಿತ್ತೂರ, ಉಷಾ ಕಿತ್ತೂರ, ಶಾರದಾ ಮಂತ್ರನ್ನವರ, ಸುನಿತಾ ಜೋಡಟ್ಟಿ, ಶೀತಲ ಕಿತ್ತೂರ, ರೂಪಾ ಶೆಟ್ಟಿ, ಅಕ್ಷಯ ಶೆಟ್ಟಿ, ಜಾವೇದ ಮೋಮಿನ್, ಇಸಾಕ್ ಪೀರಜಾದೆ, ರೀಟಾ ತಬಾಜ್, ಮಂಜುಳಾ ಜೋಡಟ್ಟಿ, ಅರ್ಚನಾ ಜೋಡಟ್ಟಿ, ಶಾರಧಾ ಸಬರದ, ಪಾಯಸಾಗರ ಶಾಲೆಯ ಮುಖ್ಯೋಪಾಧ್ಯಾಯ ಬಿಲ್ ಸರ್, ಮೈಫಸ್ರ್ಟ ಸ್ಟೇಪ್ ಶಾಲೆಯ ಚೇರಮನ್ ಪ್ರತಾಪ ದುದಾಳೆ ಹಾಗೂ ಶಾಲೆಯ ಶಿಕ್ಷಕರು, ಶಾಲಾ ಮಕ್ಕಳು ಸೇರಿದಂತೆ ನೂರಾರು ಜನ ನಾಗರಿಕರು ಉಪಸ್ಥಿತರಿದ್ದರು.

Related posts: