ಗೋಕಾಕ:ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಲು ಎನ್‍ಎಸ್‍ಎಸ್ ಶಿಬಿರ ಸಹಕಾರಿಯಾಗಿದೆ : ಸನತ ಜಾರಕಿಹೊಳಿ
ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಲು ಎನ್‍ಎಸ್‍ಎಸ್ ಶಿಬಿರ ಸಹಕಾರಿಯಾಗಿದೆ : ಸನತ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 24 :
ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಲು ಎನ್‍ಎಸ್‍ಎಸ್ ಶಿಬಿರ ಸಹಕಾರಿಯಾಗಿದೆ ಎಂದು ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ತಾಲ್ಲೂಕಿನ ಹುಲಿಕಟ್ಟಿ ಗ್ರಾಮದ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್ ಎಸ್ ಎಸ್ ಘಟಕದಿಂದ ನಡೆದ ರಾಷ್ಟ್ರೀಯ ಸೇವಾ ಯೋಜನೆ – 2022ರ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ಹಳ್ಳಿಗಳಲ್ಲಿ ಇಂತಹ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ವೃದ್ಧಿಯಾಗಲಿದೆ ಎಂದರು.
ಎನ್‍ಎಸ್‍ಎಸ್ ಶಿಬಿರಾರ್ಥಿಗಳು ಊರಿನ ರಸ್ತೆ, ಚರಂಡಿ, ದೇವಸ್ಥಾನದ ಆವರಣ ಶುಚಿಗೊಳಿಸಿದ್ದಾರೆ. ಇದನ್ನು ಮುಂದೆ ಗ್ರಾಮಸ್ಥರು ಕಾಪಾಡಿಕೊಂಡು ಹೋಗಬೇಕೆಂದು ಕಿವಿಮಾತು ಹೇಳಿದರು.
ಪ್ರಾಚಾರ್ಯ ಐ.ಎಸ್.ಪವಾರ ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕೊಳವಿ ಗ್ರಾಪಂ ಪಿಡಿಓ ಸಂಜುಕುಮಾರ ಜೋತಾವರ,ಶ್ರೀಮತಿ ಎಂ.ವಾಯ್.ಪಾಟೀಲ, ಶ್ರೀಮತಿ ಸಿ.ಆರ್.ಕಮ್ಮಾರ,ಶ್ರೀಮತಿ ಡಿ.ಪಿ.ಕೋಟಗಿ,ಶಿವಾನಂದ ತಿಪ್ಪನ್ನವರ ಮತ್ತಿತರರಿದ್ದರು.