RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಹಾಲು ಉತ್ಪಾದಕರಿಗಾಗಿ ಕೆಎಮ್‍ಎಫ್ ನಿಂದ ಅನೇಕ ಯೋಜನೆಗಳು ಜಾರಿ : ಅಮರನಾಥ ಜಾರಕಿಹೊಳಿ

ಗೋಕಾಕ:ಹಾಲು ಉತ್ಪಾದಕರಿಗಾಗಿ ಕೆಎಮ್‍ಎಫ್ ನಿಂದ ಅನೇಕ ಯೋಜನೆಗಳು ಜಾರಿ : ಅಮರನಾಥ ಜಾರಕಿಹೊಳಿ 

ಹಾಲು ಉತ್ಪಾದಕರಿಗಾಗಿ ಕೆಎಮ್‍ಎಫ್ ನಿಂದ ಅನೇಕ ಯೋಜನೆಗಳು ಜಾರಿ : ಅಮರನಾಥ ಜಾರಕಿಹೊಳಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 25:

 
ಹಾಲು ಉತ್ಪಾದಕರಿಗಾಗಿ ಕೆಎಮ್‍ಎಫ್ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗುವಂತೆ ಕೆಎಮ್‍ಎಫ್ ನಿರ್ದೇಶಕ ಅಮರನಾಥ ರಮೇಶ ಜಾರಕಿಹೊಳಿ ಹೇಳಿದರು.

ಗುರುವಾರದಂದು ನಗರದ ಶಾಕರ ಕಚೇರಿಯಲ್ಲಿ ಕೆಎಮ್‍ಎಫ್ ಹಾಲು ಉತ್ಪಾದಕ ಸದಸ್ಯರಿಗೆ ಕರ್ನಾಟಕ ಹಾಲು ಮಹಾ ಮಂಡಳಿ ಬೆಳಗಾವಿ ವತಿಯಿಂದ ಶೇ.50ರ ಸಹಾಯ ಧನದೊಂದಿಗೆ ಫಲಾನುಭವಿಗಳಿಗೆ ವಿದ್ಯುತ್‌ಚಾಲಿತ ಹಾಲು ಕರಿಯುವ ಮತ್ತು ಮೇವು ಕಾಟಾವು ಯಂತ್ರ ಹಾಗೂ ಪಶುಗಳಿಗೆ ರಬ್ಬರ ಹಾಸಿಗೆಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.

ಆಧುನಿಕ ತಂತ್ರಜ್ಞಾನ ಬಳಕೆಯಿಂದ ಹೈನುಗಾರಿಕೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಸಾಕಷ್ಟು ಜನರನ್ನು ಕಾಣಬಹುದು. ಹಾಲು ಕರೆಯುವ ಯಂತ್ರಗಳ ಬಳಕೆಯಿಂದ ಹೈನುಗಾರರ ಶ್ರಮ ಕಡಿಮೆಯಾಗುತ್ತದೆ. ಉತ್ತಮ ಗುಣಮಟ್ಟದ ಹಾಲು ಕೂಡ ಲಭ್ಯವಾಗುತ್ತದೆ.
ಹೈನುಗಾರರಿಂದ ಹಾಲು ಖರೀದಿ ಕಾರ್ಯವನ್ನು ಕೆಎಂಎಫ್‌ ನಿರ್ವಹಿಸುತ್ತಿದ್ದು, ಹೀಗಾಗಿ ಕೆಎಂಎಫ್‌ನಿಂದಲೇ ಯಂತ್ರಕ್ಕೆ ಸಬ್ಸಿಡಿ ನೀಡಲಾಗುತ್ತಿದೆ.ಫಲಾನುಭವಿಗಳನ್ನು ಯಂತ್ರಗಳ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಬೀಮಗೌಡ ಪೊಲೀಸಗೌಡರ, ಕೆಎಂಎಫ್ ಮ್ಯಾನೇಜರ್ ಯಾಸೀನ್ ಮುಲ್ಲಾ, ರವಿ ತಳವಾರ, ಎಸ್.ಬಿ ಕರಬನ್ನವರ,ಸಚಿನ ವಡದಲ್ಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: