ಗೋಕಾಕ:ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಅಧ್ಯಯನ ಶೀಲರಾಗಿ : ರಾಜು ಗೋಳಸಾರ
ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಅಧ್ಯಯನ ಶೀಲರಾಗಿ : ರಾಜು ಗೋಳಸಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 31
ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಅಧ್ಯಯನ ಶೀಲರಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳುವಂತೆ ಇಲ್ಲಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮೀತಿ ಕಾರ್ಯದರ್ಶಿ ರಾಜು ಗೋಳಸಾರ ಹೇಳಿದರು.
ಅವರು, ಮಂಗಳವಾರದಂದು ನಗರದ ಲಕ್ಷ್ಮೀ ಏಜ್ಯುಕೇಷನ್ ಟ್ರಸ್ಟನ ಸಭಾ ಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮೀತಿ, ನ್ಯಾಯವಾದಿಗಳ ಸಂಘ, ತಾಲೂಕು ಆರೋಗ್ಯ ಇಲಾಖೆ ಹಾಗೂ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದ ಎನ್‍ಎಸ್‍ಎಸ್ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಉತ್ತರ ಕರ್ನಾಟಕದಲ್ಲಿ ಹೆಚ್ಚು ಜನ ತಂಬಾಕು ಸೇವಿಸುತ್ತಿದ್ದಾರೆ. ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ವಿದ್ಯಾರ್ಥಿಗಳು ಇಂತಹ ದುಶ್ಚಟಗಳಿಂದ ದೂರವಿದ್ದು ಪ್ರಯತ್ನಶೀಲರಾಗಿ ತಮ್ಮ ಗುರಿಯನ್ನು ಮುಟ್ಟಿ ಸಮಾಜದಲ್ಲಿ ಗೌರವನ್ನು ಸಂಪಾಧಿಸಬೇಕು. ದಿನನಿತ್ಯ ಬಳಕೆಯ ಕಾನೂನುಗಳನ್ನು ತಿಳಿದು ಅವುಗಳ ಪಾಲನೆ ಮಾಡಬೇಕು. ಕಾನೂನು ಅಜ್ಞಾನಕ್ಕೆ ಕ್ಷಮೆ ಇರುವದಿಲ್ಲ. ದಿ.25/06/2022 ರಂದು ರಾಜ್ಯಾಧ್ಯಂತ ಲೋಕ ಅದಾಲತ ನಡೆಯಲಿದ್ದು, ಇದರ ಸದುಪಯೋಗದಿಂದ ಜನತೆ ತಮ್ಮ ಪ್ರಕರನಗಳನ್ನು ಇತ್ಯರ್ಥ ಪಡಿಸಿಕೊಳ್ಳಿ. ಈ ಕಾರ್ಯದಲ್ಲಿ ವಿದ್ಯಾರ್ಥಿಗಳು ಜನರಲ್ಲಿ ಅರಿವು ಮೂಢಿಸಿ ಶಾಂತ ಹಾಗೂ ಆರೋಗ್ಯವಂತ ಸಮಾಜ ನಿರ್ಮಿಸಲು ಶ್ರಮಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ ವಹಿಸಿದ್ದರು.
ವೇದಿಕೆಯ ಮೇಲೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿ ಡಿ ಹುಕ್ಕೇರಿ, ಪ್ರಾಚಾರ್ಯ ಐ ಎಸ್ ಪವಾರ, ಡಾ. ಆರ್ ಆರ್ ಅಂಟಿನ, ಡಾ. ಶ್ರೀದೇವಿ ಪೂಜೇರಿ, ಮಲ್ಲವ್ವ ನಾಯ್ಕ ಇದ್ದರು.
ಉಪನ್ಯಾಸಕಿ ಎಮ್ ವಾಯ್ ಪಾಟೀಲ ಸ್ವಾಗತಿಸಿದರು, ಎಸ್ ಎಚ್ ತಿಪ್ಪನ್ನವರ ವಂದಿಸಿದರು.