ಗೋಕಾಕ:ಉದ್ಯೋಗ ಗಳಿಕೆಗೆ ಶಿಕ್ಷಣದ ಜತೆ ಕೌಶಲ್ಯ ಅಗತ್ಯ : ಪ್ರವಿಣ್ ಗುಡಿ
ಉದ್ಯೋಗ ಗಳಿಕೆಗೆ ಶಿಕ್ಷಣದ ಜತೆ ಕೌಶಲ್ಯ ಅಗತ್ಯ : ಪ್ರವಿಣ್ ಗುಡಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 9 :
ಇಂದು ಉದ್ಯೋಗ ಗಳಿಸಿಕೊಳ್ಳಲು ಕೇವಲ ಶಿಕ್ಷಣ ಒಂದಿದ್ದರೆ ಸಾಲದು. ಜತೆಗೆ ಇತರ ಕೌಶಲ್ಯಗಳು ವಿದ್ಯಾರ್ಥಿಗಳಿಗೆ ಅನಿವಾರ್ಯ ಎಂದು ಹುಬ್ಬಳ್ಳಿಯ ಸಂಪನ್ಮೂಲ ವ್ಯಕ್ತಿ ಪ್ರವಿಣ್ ಗುಡಿ ಹೇಳಿದರು.
ಗುರುವಾರದಂದು ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಶ್ರೀ ಸಿದ್ದಲಿಂಗೇಶ್ವರ ಬಿಸಿಎ ಕಾಲೇಜಿನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ 3 ದಿನಗಳ ಕಾಲ ವಿಶೇಷ ಉದ್ಯೋಗ ತರಬೇತಿ ಕಾರ್ಯಾಗಾರದಲ್ಲಿ ಜೀವನ ಮತ್ತು ಜೀವನ ಕೌಶಲ್ಯ ವಿಷಯ ಕುರಿತು ಅವರು ಮಾತನಾಡಿದರು.
ಜೀವನದಲ್ಲಿ ಉನ್ನತ ಗುರಿ ಹಾಗೂ ಕನಸು ಹೊಂದಿರುವುದು ಅವಶ್ಯಕ.ಇವುಗಳನ್ನು ಈಡೇರಿಸಲು ಉನ್ನತ ಪ್ರಯತ್ನ ಅಷ್ಟೇ ಅವಶ್ಯಕ. ಮುಂದೆ ಗುರಿ, ಹಿಂದೆ ಗುರು ಇದ್ದರೂ ಮಧ್ಯದಲ್ಲಿರುವ ನಮ್ಮ ಪ್ರಯತ್ನವೂ ಪ್ರಮುಖವಾಗಿರುತ್ತದೆ.
ನಿಮ್ಮ ಜೀವನ ಯಾರು ಬದಲಾಯಿಸುದಿಲ್ಲ ,ನಿಮ್ಮ ಭವಿಷ್ಯವನ್ನು ನಿವೇ ನಿರ್ಧರಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಗುರಿ ಹಾಗೂ ಶಿಸ್ತು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ಅದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಲಿಕೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಅರ್ಪಿಸಿಕೊಂಡು ಅರ್ಪಣಾ ಮನೋಭಾವದಿಂದ ಕಲಿತರೆ ಉತ್ತಮ ವಿದ್ಯಾರ್ಥಿಗಳಾಗಲು ಸಾಧ್ಯ ಎಂದ ಅವರು ಜೀವನದ ಪ್ರತಿಯೊಂದು ಹಂತದಲ್ಲಿ ಮನುಷ್ಯ ವಿಚಾರ ಮಾಡಿ ಕಾರ್ಯ ಪ್ರವೃತ್ತರಾಗುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೂ ಸಹ ಯಾವುದೇ ಆತಂಕ, ಭಯ ಪಡೆದ ತಮಗೆ ಎದುರಾದ ಸಮಸ್ಯೆಗಳನ್ನು ಶಿಕ್ಷಕರೊಂದಿಗೆ ಮುಕ್ತ ಮನಸ್ಸಿನಿಂದ ಚರ್ಚಿಸಿ ಅವುಗಳನ್ನು ಪರಿಸರಿಸಿಕೊಳ್ಳುವ ರೂಡಿಯನ್ನು ಮಾಡಿಕೊಂಡರೆ ಮಾತ್ರ ಒಬ್ಬ ಸದೃಢ ವಿದ್ಯಾರ್ಥಿಯಾಗಿ ಹೊರಹೊಮ್ಮಬಹುದು ಆ ದಿಸೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಮುಂದೆ ಬರುಬೇಕು ಎಂದು ಪ್ರವಿಣ್ ಗುಡಿ ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಅಡಿವೇಶ ಗವಿಮಠ, ಪ್ರಾಚಾರ್ಯ ರಮೇಶ ಕುಂಬಾರ, ಮೇಘಾ ಚಚಡಿ ಉಪಸ್ಥಿತರಿದ್ದರು.