RNI NO. KARKAN/2006/27779|Monday, December 23, 2024
You are here: Home » breaking news » ಘಟಪ್ರಭಾ:ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರಗಳ ಚುನಾವಣೆ ಪ್ರಚಾರ

ಘಟಪ್ರಭಾ:ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರಗಳ ಚುನಾವಣೆ ಪ್ರಚಾರ 

ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರಗಳ ಚುನಾವಣೆ ಪ್ರಚಾರ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜೂ 11 :
ಸೋಮವಾರ ಜೂನ್-13 ರಂದು ನಡೆಯುವ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯ ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರಗಳ ಚುನಾವಣೆ ನಿಮಿತ್ಯ ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ಸುರೇಶ ಸನದಿ ಅವರು ಘಟಪ್ರಭಾ ನಗರದಲ್ಲಿ ಶನಿವಾರ ಪ್ರಚಾರ ಕೈಗೊಂಡರು.
ಗೋಕಾಕ ವಿಧಾನ ಸಭಾ ಮತಕ್ಷೇತ್ರ ವ್ಯಾಪ್ತಿಯ ಘಟಪ್ರಭಾದಲ್ಲಿ ಅತೀ ಹೆಚ್ಚು ಮತದಾರರಿದ್ದಾರೆ. ಶಿಕ್ಷಕರ ಕ್ಷೇತ್ರದಿಂದ ಅರುಣ ಶಹಾಪೂರ ಮತ್ತು ಪದವೀಧರ ಕ್ಷೇತ್ರದಿಂದ ಹನಮಂತ ನಿರಾಣಿ ಅವರಿಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಿ ಆಯ್ಕೆ ಮಾಡಿ ಶಾಸಕ ರಮೇಶ ಜಾರಕಿಹೊಳಿ ಅವರ ಕೈ ಬಲಪಡಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಹಿರಿಯರಾದ ಹಣಮಂತ ದುರ್ಗನ್ನವರ, ಡಿ.ಎಂ.ದಳವಾಯಿ, ಸುರೇಶ ಪಾಟೀಲ, ಬಸವರಾಜ ಹುದ್ದಾರ, ಈಶ್ವರ ಮಟಗಾರ, ಸುಧೀರ ಜೋಡಟ್ಟಿ, ಕುಮಾರ ಹುಕ್ಕೇರಿ, ಪ್ರವೀಣ ಮಟಗಾರ, ಸಲೀಮ ಕಬ್ಬೂರ, ಮಲ್ಲು ಕೋಳಿ, ವಿಕ್ರಮ ದಳವಾಯಿ, ಇಮ್ರಾನ ಬಟಕುರ್ಕಿ, ಮಾರುತಿ ಹುಕ್ಕೇರಿ, ಶಿವುಪುತ್ರ ಕೊಗನೂರ, ಮಲ್ಲಿಕಾರ್ಜುನ ತುಕ್ಕಾನಟ್ಟಿ ಶೇಖರ ಕುಲಗೋಡ ಶ್ರೀಕಾಂತ ಮಹಾಜನ, ಚಂದ್ರ ಗಾಣಿಗ, ಪ್ರತಾಪ ಬೇವಿನಗಿಡದ, ಚಿರಾಕಲಿಶಾ ಮಕಾನದಾರ ಸೇರಿದಂತೆ ಮತದಾರರು ಶಿಕ್ಷಕರು ಇದ್ದರು.

Related posts: