RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸಂಗೀತ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ : ಮುರುಘರಾಜೇಂದ್ರ ಶ್ರೀ

ಗೋಕಾಕ:ಸಂಗೀತ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ : ಮುರುಘರಾಜೇಂದ್ರ ಶ್ರೀ 

ಸಂಗೀತ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ : ಮುರುಘರಾಜೇಂದ್ರ ಶ್ರೀ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 12 :
ಸಂಗೀತಕ್ಕೆ ಅಘಾದ ಶಕ್ತಿಇದೆ.ಅದೊಂದು ತಪಸ್ಸು ಹಾಗೂ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ ಎಂದು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು
ರವಿವಾರದಂದು ನಗರದ ಮಹಾಲಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲೆಯ ಸರ್ವ ಕಲಾ ಬಳಗದಿಂದ ಗದುಗಿನ ಲಿ.ಪಂಡಿತ್ ಪಂಚಾಕ್ಷರಿ ಗವಾಯಿ, ಹಾಗೂ ಲಿ‌.ಪಂಡಿತ್ ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡ 2ನೇ ವರ್ಷದ ಸಂಗೀತ ಜಾತ್ರೆಯ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಸಂಗೀತ ತಪ್ಪಸ್ವಿ ಪುಟ್ಟರಾಜ ಗವಾಯಿ ಮತ್ತು ಪಂಚಾಕ್ಷರಿ ಗವಾಯಿಗಳ ಹೆಸರು ಸೂರ್ಯಚಂದ್ರ ಇರುವವರೆಗೆ ಇರುವುದು. ಅಂಧ ಮಕ್ಕಳಿಗೆ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಅವರ ಜೀವನಕ್ಕೆ ಭದ್ರ ಬೂನಾದಿ ಹಾಕಿ ಕೊಟ್ಟು , ಶಾಸ್ತ್ರಿಯ ಸಂಗೀತ, ಕರ್ನಾಟಕ ಸಂಗೀತ ಸೇರಿದಂತೆ ಅನೇಕ ಪ್ರಕಾರದ ಸಂಗೀತವನ್ನು ಜಗತ್ತಿಗೆ ಪ್ರಚುರಪಡೆಸಿದ ಸಂಗೀತ ಲೋಕದ ದಿಗ್ಗಜರೆನಿಸಿಕೊಂಡ ಇಬ್ಬರೂ ಪುಣ್ಯ ಪುರುಷರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಎಲ್ಲಾ ಕಲಾವಿದರು ಬಾಳಿ ಬದುಕಬೇಕಾಗಿದೆ. ಸಂಗೀತ ಕಲಾವಿದರು ತಮ್ಮ ಆರೋಗ್ಯ, ಕುಟುಂಬದ ಕಡೆ ಗಮನ ಕೊಡುವದರ ಜೊತೆಗೆ ಸಮಾಜವನ್ನು ಸಂಗೀತದ ಮುಖಾಂತರ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಾಗಿದೆ. ಕಲಾವಿದರು ಯಾವುದೇ ಚಟಗಳಿಗೆ ಮಾರುಹೋಗದೆ ಸಮಾಜ ತಿದ್ದುವಲ್ಲಿ ಶ್ರಮಿಸಬೇಕು. ಕಲಾವಿದರೆಲ್ಲರು ಒಗ್ಗಟ್ಟಿನಿಂದ ತಮ್ಮ ಜೀವನದಲ್ಲಿ ಸುಂದರ ಗೊಳಿಸಿಕೊಳ್ಳುವತ್ತ ಗಮನ ಹರಿಸಬೇಕು.
ನಮ್ಮ ದೇಶಿಯ ಸಂಗೀತದ ಕಡೆ ಹೆಚ್ಚು ಒಲವು ತೋರಿ ಅದರ ಬಗ್ಗೆ ಅರಿವು ಮೂಡಿಸಬೇಕು. ತಂತ್ರಜ್ಞಾನ ಬೆಳೆದಂತೆ ಸಂಗೀತ ಮಾರಕವಾಗುತ್ತಿದೆ. ಇಂದಿನ ಯುವ ಪೀಳಿಗೆ ಅದರ ಅವಲಂಬನೆಯಿಂದ ದಾರಿ ತಪ್ಪುತ್ತಿದ್ದಾರೆ. ಅವರಿಗೆ ಸಂಗೀತ , ಸಾಹಿತ್ಯ ಕಲೆಯಲ್ಲಿ ತೊಡಗಿಸಿಕೊಳ್ಳವಂತೆ ಪ್ರೇರೆಪಿಸಿ ವಿಕೃತರಾಗುತ್ತಿರುವ ಅವರನ್ನು ಸನ್ಮಾರ್ಗಕ್ಕೆ ತರಲು ಸಂಗೀತ ಪ್ರಮುಖ ಪಾತ್ರ ವಹಿಸಿದೆ ಅದನ್ನು ಅರಿತು ಕಲಾವಿದರು ಮುನ್ನಡೆಯಬೇಕು.
ಕಲಾವಿದರು ಹಣಕ್ಕಾಗಿ ಕಾರ್ಯ ಮಾಡದೆ. ಜನರನ್ನು ರಂಜಿಸುವ ಕಾರ್ಯ ಮಾಡುತ್ತಿದ್ದಾರೆ. ಇಂತಹ ಕಲಾವಿದರ ಬಗ್ಗೆ ‌ಸರಕಾರ ಗಮನ ಹರಿಸಿ ಕಲಾವಿದರಿಗೆ ಮಾಶಾಸನ ನೀಡಿಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಕಾರ್ಯಕ್ರಮವನ್ನು ಯುವ ಧುರೀಣ ಸರ್ವೋತ್ತಮ ಜಾರಕಿಹೊಳಿ ಉದ್ಘಾಟಿಸಿ ಕಲಾವಿದರಿಗೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಕಲಾವಿದ ಯಲೇಶಕುಮಾರ ಮೆಳವಂಕಿ ನಿರೂಪಿಸಿ, ವಂದಿಸಿದರು.
ವೇದಿಕೆಯಲ್ಲಿ ಕಳ್ಳಿಗುದ್ದಿ ಕಪರಟ್ಟಿಯ ಬಸವರಾಜ ಸ್ವಾಮೀಗಳು,  ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಶಬ್ಬೀರ ಡಾಂಗೆ, ಸಿದ್ದು ಮಂಗಿ, ಪಾಂಡು ದೊಡ್ಡಮನಿ, ಕಾಮೇಶ ಚಿಗಡೋಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: