ಗೋಕಾಕ:ನಾಳೆ ಮಹಾತಪಸ್ವಿ ರಾಜಋಷಿ ಶ್ರೀ ಭಗೀರಥ ಮೂರ್ತಿ ಪ್ರತಿಷ್ಠಾನ ಕಾರ್ಯಕ್ರಮ
ನಾಳೆ ಮಹಾತಪಸ್ವಿ ರಾಜಋಷಿ ಶ್ರೀ ಭಗೀರಥ ಮೂರ್ತಿ ಪ್ರತಿಷ್ಠಾನ ಕಾರ್ಯಕ್ರಮ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 12 :
ತಾಲೂಕಿನ ಉಪ್ಪಾರಹಟ್ಟಿ ಗ್ರಾಮದ ಭಗೀರಥ ವೃತ್ತದಲ್ಲಿ ದೇವಗಂಗೆಯನ್ನು ಭೂಲೋಕ್ಕೆ ಕರೆತಂದ ಮಹಾತಪಸ್ವಿ ರಾಜಋಷಿ ಶ್ರೀ ಭಗೀರಥ ಮೂರ್ತಿ ಪ್ರಾಣಪ್ರತಿಷ್ಠಾನಾ ಕಾರ್ಯಕ್ರಮದ ಸೋಮವಾರ ದಿ.13 ರಂದು ನಡೆಯಲಿದೆ.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ವಿದ್ವಾನ್ ಶ್ರೀ ನಾಗಲಿಂಗೇಶ್ವರ ಮಹಾಸ್ವಾಮಿಜಿ ವಹಿಸುವರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ರಮೇಶ ಜಾರಕಿಹೊಳಿ ನೆರವೇರಿಸುವರು.
ಮುಖ್ಯತಿಥಿಗಳಾಗಿ ಕೆಎಮ್‍ಎಫ್ ಅಧ್ಯಕ್ಷ ಹಾಗೂ ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಯಮಕನಮರ್ಡಿ ಶಾಸಕ ಸತೀಶ ಜಾರಕಿಹೊಳಿ, ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಯುವ ಮುಖಂಡರಾದ ಭೀಮಗೌಡ ಪೋಲಿಸಗೌಡರ ಆಗಮಿಸಲಿದ್ದಾರೆ.
ಉಪ್ಪಾರ ಸಮಾಜ ಹಿರಿಯರು ಮತ್ತು ಸಮಾಜ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಭಗೀರಥ ಸರ್ವ ಸದ್ಭಕ್ತ ಮಂಡಳಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.