RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಕರ್ನಾಟಕ ಗ್ರಾಹಕರ ಸಂಚಾರಿ ಪೀಠ ಕಾರ್ಯಾರಂಭದಲ್ಲಿ ಸರಕಾರದ ವಿಳಂಭ ದೋರಣೆ ಖಂಡಿಸಿ ನಗರದಲ್ಲಿ ಪ್ರತಿಭಟನೆ

ಗೋಕಾಕ:ಕರ್ನಾಟಕ ಗ್ರಾಹಕರ ಸಂಚಾರಿ ಪೀಠ ಕಾರ್ಯಾರಂಭದಲ್ಲಿ ಸರಕಾರದ ವಿಳಂಭ ದೋರಣೆ ಖಂಡಿಸಿ ನಗರದಲ್ಲಿ ಪ್ರತಿಭಟನೆ 

ಕರ್ನಾಟಕ ಗ್ರಾಹಕರ ಸಂಚಾರಿ ಪೀಠ ಕಾರ್ಯಾರಂಭದಲ್ಲಿ ಸರಕಾರದ ವಿಳಂಭ ದೋರಣೆ ಖಂಡಿಸಿ ನಗರದಲ್ಲಿ ಪ್ರತಿಭಟನೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 15 :
ಕರ್ನಾಟಕ ಗ್ರಾಹಕರ ಸಂಚಾರಿ ಪೀಠ ಕಾರ್ಯಾರಂಭದಲ್ಲಿ ವಿಳಂಭ ಮಾಡುತ್ತಿರುವ ಸರಕಾರದ ದೋರಣೆಯನ್ನು ಖಂಡಿಸಿ ಇಲ್ಲಿನ ನ್ಯಾಯವಾದಿಗಳ ಸಂಘದವರು ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಬುಧವಾರದಂದು ನಗರದ ಬಸವೇಶ್ವರ ವೃತ್ತದಿಂದ ತಹಸೀಲ್ದಾರ ಕಛೇರಿವರೆಗೆ ಮೆರವಣಿಗೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದರು.

ಬೆಳಗಾವಿಯನ್ನು ಕರ್ನಾಟಕದ 2ನೇ ರಾಜಧಾನಿ ಎಂದು ಕರೆಯಲಾಗಿದ್ದರು ಸರಕಾರದ ತಾರತಮ್ಯ ನೀತಿಯಿಂದ ಬೆಳಗಾವಿಯಲ್ಲಿ ಕಾರ್ಯಾರಂಭವಾಗಬೇಕಿದ್ದ ಕರ್ನಾಟಕ ಗ್ರಾಹಕರ ಸಂಚಾರಿ ಪೀಠ ವಿಳಂಬಕ್ಕೆ ಜಿಲ್ಲೆಯ ಸಚಿವ ಉಮೇಶ್ ಕತ್ತಿ ಹಾಗೂ ರಾಜ್ಯ ಸರಕಾರದ ನಿರ್ಲಕ್ಷ್ಯ ಧೋರಣೆ ಕಾರಣವಾಗಿದೆ. ಇದನ್ನು ಸಂಘದ ಸರ್ವ ಸದಸ್ಯರು ತೀವ್ರವಾಗಿ ಖಂಡಿಸುತ್ತೆವೆ. ಆದಷ್ಟು ಬೇಗನೆ ರಾಜ್ಯ ಗ್ರಾಹಕರ ಸಂಚಾರಿ ಪೀಠವನ್ನು ಬೆಳಗಾವಿಯಲ್ಲಿ ಕಾರ್ಯಾರಂಭ ಮಾಡಬೇಕು ಇಲ್ಲದಿದ್ದರೆ ಜಿಲ್ಲೆಯ ಸಮಸ್ತ ನ್ಯಾಯವಾದಿಗಳಿಂದ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿ.ಡಿ.ಹುಕ್ಕೇರಿ, ಪದಾಧಿಕಾರಿಗಳಾದ ವಾಯ್.ಕೆ ಕೌಜಲಗಿ, ಎ.ಎ.ಪಾಟೀಲ, ಎಸ್.ಎಂ.ಕುದರಿ, ಎಸ್.ಬಿ.ನಾಯಿಕ, ಡಿ.ಡಿ.ಕೋಟಬಾಗಿ, ಜಿ.ಎಸ್.ಗಂಜಿ ಹಾಗೂ ಎಸ್.ವ್ಹಿ ದೇಮಶೆಟ್ಟಿ ,ಎಲ್.ಎಂ ಗುದಿಗೋಪ್ಪ, ನಿಡಸೋಸಿ ಸೇರಿದಂತೆ ಅನೇಕರು ಇದ್ದರು.

Related posts: