RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ದಿ‌.24 ರಂದು ಮುರುಘರಾಜೇಂದ್ರ ಮಹಾಸ್ವಾಮಿಗಳ 50ನೇ ಹುಟ್ಟು ಹಬ್ಬ ಆಚರಣೆ

ಗೋಕಾಕ:ದಿ‌.24 ರಂದು ಮುರುಘರಾಜೇಂದ್ರ ಮಹಾಸ್ವಾಮಿಗಳ 50ನೇ ಹುಟ್ಟು ಹಬ್ಬ ಆಚರಣೆ 

ದಿ‌.24 ರಂದು ಮುರುಘರಾಜೇಂದ್ರ ಮಹಾಸ್ವಾಮಿಗಳ 50ನೇ ಹುಟ್ಟು ಹಬ್ಬ ಆಚರಣೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 22 :

 
ಇಲ್ಲಿನ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ – ಮಂಥನ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಶೂನ್ಯ ಸಂಪಾದನಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ 50ನೇ ಹುಟ್ಟು ಹಬ್ಬ ಹಾಗೂ 154ನೇ ಶಿವಾನುಭವಗೋಷ್ಠಿ ಕಾರ್ಯಕ್ರಮವು ಶುಕ್ರವಾರದಂದು ಸಾಯಂಕಾಲ 6 ಘಂಟೆಗೆ ನಗರದ ಶೂನ್ಯ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.

ಸ್ವಾಮೀಜಿಗಳ ಹುಟ್ಟು ಹಬ್ಬದ ಪ್ರಯುಕ್ತ ಮುಂಜಾನೆ 9:30ಕ್ಕೆ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು – ಹಂಪಲ್ ವಿತರಣೆ ಹಾಗೂ ಬಸವೇಶ್ವರ ವೃತ್ತದಲ್ಲಿ ಇರುವ ಬಸವೇಶ್ವರ ಪುತಳಿಗೆ ಮಾಲಾರ್ಪಣೆ ಮಾಡಲಾಗುವುದು.
ಸಾಯಂಕಾಲ ಜರುಗುವ ವೇದಿಕೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ನದಿ- ಇಂಗಳಗಾಂವ ಗುರುಲಿಂಗ ದೇವರಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ವಹಿಸುವರು ,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆಯ ಅಧ್ಯಕ್ಷ ಬಸನಗೌಡ ಪಾಟೀಲ ವಹಿಸುವರು. ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಕುರಿತು ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆಯ ಅಧ್ಯಕ್ಷ ಡಾ.ಸಿ.ಕೆ.ನಾವಲಗಿ ಮಾತನಾಡುವರು. ಕಾರ್ಯಕ್ರಮದ ತರುವಾಯ ಶ್ರೀಗಳಿಗೆ ಭಕ್ತಾದಿಗಳಿಂದ ಸತ್ಕಾರ ಕಾರ್ಯಕ್ರಮ ಜರುಗಲಿವೆ. ಕಾರಣ ಶ್ರೀಮಠದ ಸಮಸ್ತ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ , ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ – ಮಂಥನ ವೇದಿಕೆಯ ಪ್ರಮುಖರು ಪ್ರಕಟಣೆಯಲ್ಲಿ ಕೋರಿದ್ದಾರೆ.

Related posts: