RNI NO. KARKAN/2006/27779|Saturday, October 19, 2024
You are here: Home » breaking news » ಮೂಡಲಗಿ:ಮೂಡಲಗಿ ಹಳ್ಳದಲ್ಲಿ ಏಳು ಭ್ರೂಣಗಳ ಪತ್ತೆ ಜನರಲ್ಲಿ ಆತಂಕ

ಮೂಡಲಗಿ:ಮೂಡಲಗಿ ಹಳ್ಳದಲ್ಲಿ ಏಳು ಭ್ರೂಣಗಳ ಪತ್ತೆ ಜನರಲ್ಲಿ ಆತಂಕ 

ಮೂಡಲಗಿ ಹಳ್ಳದಲ್ಲಿ ಏಳು ಭ್ರೂಣಗಳ ಪತ್ತೆ ಜನರಲ್ಲಿ ಆತಂಕ

 

ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಜೂ 24 :
ಮೂಡಲಗಿ ಪಟ್ಟಣದೊಳಗೆ ಹರಿದ ಹಳ್ಳದಲ್ಲಿ ಶುಕ್ರವಾರ ಮಧ್ಯಾಹ್ನ ಹತ್ಯೆ ಮಾಡಲಾದ ಏಳು ಭ್ರೂಣಗಳು ಪತ್ತೆಯಾಗಿವೆ. ಈ ದೃಶ್ಯ ಕಂಡು ಪಟ್ಟಣದ ಜನರು ಬೆಚ್ಚಿಬಿದ್ದರು. ಹಳ್ಳದಲ್ಲಿ ಕಂಡ ಪ್ಲಾಸ್ಟಿಕ್ ಡಬ್ಬಿಗಳು ಕಂಡಬಂದವು. ಸಮೀಪದ ಹೋಗಿ ನೋಡಿದಾಗ ಮಗುವಿನ ಆಕಾರದ ಭ್ರೂಣಗಳನ್ನು ಹಾಕಿ ಮುಚ್ಚಳ ಮುಚ್ಚಿದ್ದು ಗೊತ್ತಾಯಿತು. ವಿಷಯ ತಿಳಿದ ತಕ್ಷಣ ಪಟ್ಟಣದಲ್ಲಿ ಜನಸ್ತೋಮ ಸೇರಿತು.
ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಏಳು ಭ್ರೂಣಗಳನ್ನು ತುರಕಲಾಗಿದೆ. ಸ್ಥಳಕ್ಕೆ ಬಂದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಭ್ರೂಣಗಳಿದ್ದ ಡಬ್ಬಗಳನ್ನು ವಶಕ್ಕೆ ಪಡೆದು ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇಡಲಾಗಿದೆ.
ಈ ಭ್ರೂಣಗಳಲ್ಲಿ ಕೆಲವು ಐದು ತಿಂಗಳು ತುಂಬಿವೆ ಮತ್ತೆ ಕೆಲವು ಏಳು ತಿಂಗಳಾಗಿವೆ. ಮೂಡಲಗಿ ಠಾಣೆಯಲ್ಲಿ ಕೇಸ್ ದಾಖಲಿಸುವ ಪ್ರಕ್ರಿಯೆ ಮುಗಿಸಿದ ನಂತರ ಬೆಳಗಾವಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ತರಲಾಗುವುದು. ನಂತರ ಪೂರ್ಣ ವಿವರ ಗೊತ್ತಾಗಲಿದೆ’ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ ಕೋಣಿ ತಿಳಿಸಿದ್ದಾರೆ.

ಮೂಡಲಗಿ ಪಟ್ಟಣದ ಬಸ್ ನಿಲ್ದಾಣದ ಬಳಿಯಲ್ಲಿಯ ಹಳ್ಳಕ್ಕೆ ಹತ್ಯೆ ಮಾಡಿರುವ 7 ಭ್ರೂಣಗಳನ್ನು ಎಸೆದಿರುವ ಸಂಗತಿಯು ನನ್ನ ಗಮನಕ್ಕೆ ಬಂದಿದೆ. ಇದು ಹೀನ ಕೃತ್ಯವಾಗಿದ್ದು, ಸಮಾಜ ತಲೆ ತಗ್ಗಿಸುವಂತ ಸಂಗತಿಯಾಗಿದೆ. ಕಾನೂನುಬಾಹಿರವಾಗಿ ಮಾಡಿರುವ ವ್ಯಕ್ತಿಗಳನ್ನು ಗುರುತಿಸಲು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿರುವೆನು. ಈ ತರಹ ಪುನ: ನಡೆಯದಂತೆ ಆರೋಗ್ಯ ಇಲಾಖೆಯವರು ಕಟ್ಟೆಚ್ಚರವಹಿಸಬೇಕು ಎಂದು ಸೂಚಿಸಿರುವೆನು’
ಬಾಲಚಂದ್ರ ಜಾರಕಿಹೊಳಿ,
ಕೆಎಂಎಫ್ ಅಧ್ಯಕ್ಷರು, ಶಾಸಕರು ಅರಭಾವಿ ಕ್ಷೇತ್ರ

Related posts: