ಗೋಕಾಕ:ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿ : ವಿದ್ಯಾ ಗುಲ್
ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿ : ವಿದ್ಯಾ ಗುಲ್
ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಜೂ 30 :
ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡಿ ಅವರನ್ನು ಉತ್ತಮ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಇನರವ್ಹಿಲ್ ಸಂಸ್ಥೆಯ ಕಾರ್ಯದರ್ಶಿ ವಿದ್ಯಾ ಗುಲ್ ಹೇಳಿದರು.
ಗುರುವಾರದಂದು ನಗರದ ಕುರುಬರು ದಡ್ಡಿಯ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಇನರವ್ಹಿಲ್ ಸಂಸ್ಥೆಯಿಂದ ಆಟದ ಮೈದಾನ ದುರಸ್ಥಿ, ಮುಖ್ಯ ಧ್ವಾರ ಹಾಗೂ ನಾಮಫಲಕ ನಿರ್ಮಿಸಿದ ನಿಮಿತ್ತ ಹಮ್ಮಿಕೊಂಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇನರವ್ಹಿಲ್ ಸಂಸ್ಥೆ ಶೈಕ್ಷಣಿಕ,ಆರೋಗ್ಯ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸೇವಾ ಮನೋಭಾವದಿಂದ ಸಹಾಯ ಮಾಡುತ್ತಿದೆ. ಉತ್ತಮ ಸಮಾಜ ನಿರ್ಮಾಣವೆ ಸಂಸ್ಥೆಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಸರಕಾರ ಹಾಗೂ ಸಂಘ ಸಂಸ್ಥೆಗಳಿಂದ ಸಿಗುವ ಸೌಲಭ್ಯಗಳ ಸದುಪಯೋಗದಿಂದ ಪ್ರತಿಭಾವಂತರಾಗಿ ಎಂದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ,ಇನರವ್ಹಿಲ್ ಅಧ್ಯಕ್ಷೆ ಜ್ಯೋತಿ ವರದಾಯಿ, ಮುಖ್ಯೋಪಾಯ ಯಲ್ಲಪ್ಪ ಕುರುಬಗಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಆರ್.ಕೆ ಗೋಟಿನವರ, ರೋಟರಿ ಅಧ್ಯಕ್ಷ ಗಣೇಶ್ ವರದಾಯಿ, ಕಾರ್ಯದರ್ಶಿ ದಿಲೀಪ್ ಮೆಳವಂಕಿ, ಸೋಮಶೇಖರ್ ಮಗದುಮ್ಮ , ಸತೀಶ್ ನಾಡಗೌಡ, ಮಲ್ಲಿಕಾರ್ಜುನ ಈಟಿ, ಗಿರೀಜಾ ಮುನ್ನೋಳಿಮಠ ಇದ್ದರು.