ಗೋಕಾಕ:ಗಾಣಿಗ ಸಮಾಜದವರಿಗೆ 2ಎ ವರ್ಗದ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಆಗ್ರಹಿಸಿ ಸರಕಾರಕ್ಕೆ ಮನವಿ
ಗಾಣಿಗ ಸಮಾಜದವರಿಗೆ 2ಎ ವರ್ಗದ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಆಗ್ರಹಿಸಿ ಸರಕಾರಕ್ಕೆ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು, 1:
ಗಾಣಿಗ ಸಮಾಜದವರಿಗೆ 2ಎ ವರ್ಗದ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಗೋಕಾಕ ನಗರ ಗಾಣಿಗೇರ ಅಭಿವೃದ್ಧಿ ಸಂಘದವರು ಶುಕ್ರವಾರದಂದು ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ಗಾಣಿಗ ಜಾತಿಯು 2ಎ ವರ್ಗದಲ್ಲಿ ಬರುವುದರಿಂದ ಹಿಂದು ಗಾಣಿಗ ಅಥವಾ ವೃತ್ತಿಯಿಂದ ಗಾಣಿಗರಾಗಿರುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ನೌಕರಿ ಸಲುವಾಗಿ 2ಎ ಸರ್ಟಿಫಿಕೇಟ್ ನೀಡಬೇಕು. ತಂದೆಯ ಶಾಲಾ ದಾಖಲಾತಿ ವರ್ಗಾವಣೆ ಪತ್ರದಲ್ಲಿ ಗಾಣಿಗ ಬದಲಾಗಿ ಲಿಂಗಾಯತ/ಲಿಂಗವಂತ ಎಂದು ನಮೂದಿಸಿದ್ದರೂ ವೃತ್ತಿಯಿಂದ ಗಾಣಿಗರಾದವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ವಿಚಾರಣೆ ನಡೆಸಿ ಗಾಣಿಗ ಎಂದು ಪರಿಗಣಿಸಿ 2ಎ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಚಂದ್ರಕಾಂತ ಕುರಬೇಟ, ಕಾರ್ಯದರ್ಶಿ ಧರೀಶ ಕಲಘಾಣ ಮುಖಂಡರಾದ ಅಶೋಕ ಪಾಟೀಲ, ಪ್ರಕಾಶ ಕೋಲಾರ, ಪ್ರಮೋದ ಕುರಬೇಟ, ಜ್ಯೋತಿ ಕೋಲಾರ ಸೇರಿದಂತೆ ಅನೇಕ ಸಮಾಜ ಬಾಂಧವರು ಇದ್ದರು.