ಗೋಕಾಕ:ಸಂಸಾರಿಗೆ ಬದುಕು ತಪಸ್ಸು ಇದ್ದಂತೆ ಅದನ್ನು ಯಶಸ್ವಿಯಾಗಿ ನಿಭಾಯಿಸಿದರೆ ಸಾರ್ಥಕ : ಕೆ ಎನ್ ವಣ್ಣೂರ
ಸಂಸಾರಿಗೆ ಬದುಕು ತಪಸ್ಸು ಇದ್ದಂತೆ ಅದನ್ನು ಯಶಸ್ವಿಯಾಗಿ ನಿಭಾಯಿಸಿದರೆ ಸಾರ್ಥಕ : ಕೆ ಎನ್ ವಣ್ಣೂರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 4 :
ಸಂಸಾರಿಗೆ ಬದುಕು ತಪಸ್ಸು ಇದ್ದಂತೆ ಅದನ್ನು ಯಶಸ್ವಿಯಾಗಿ ನಿಭಾಯಿಸಿದರೆ ಸಾರ್ಥಕ ಬದುಕಾಗುವದೆಂದು ವಲಯ ಅರಣ್ಯಾಧಿಕಾರಿ ಕೆ ಎನ್ ವಣ್ಣೂರ ಹೇಳಿದರು.
ಅವರು, ರವಿವಾರದಂದು ನಗರದಲ್ಲಿ ಜೆಸಿಐ ಸಂಸ್ಥೆಯವರು ಹಮ್ಮಿಕೊಂಡ 22 ಜೋಡಿ ದಂಪತಿಗಳ ಸಾಮೂಹಿಕ ವಿವಾಹ ವಾರ್ಷಿಕೋತ್ಸವ ಸಮಾರಂಭದಲ್ಲಿ ತಾವು ದಂಪತಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಸತಿಪತಿಗಳು ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವನ ನಡೆಸಿದರೆ ಸಂಸಾರ ಸ್ವರ್ಗವಾಗುವದು. ಇಂದಿನ ಒತ್ತಡ ಜೀವನದಲ್ಲಿ ಇಂತಹ ಆಚರಣೆಗಳು ಉಲ್ಲಾಸದೊಂದಿಗೆ ಪರಸ್ಪರರಲ್ಲಿ ಪ್ರೀತಿ ವಿಶ್ವಾಸವನ್ನು ಹೆಚ್ಚಿಸುತ್ತವೆ. ನಾವೆಲ್ಲರೂ ನಮ್ಮ ಸಂಸ್ಕøತಿಯನ್ನು ಗೌರವಿಸಿ ಆಚರಣೆಗೆ ತರುವದರೊಂದಿಗೆ ಸುಸಂಸ್ಕøತ ಸಮಾಜವನ್ನು ನಿರ್ಮಿಸಲು ಶ್ರಮಿಸೋಣ. ಪರಿಸರ ರಕ್ಷಣೆಯ ಮನೋಭಾವವನ್ನು ನಾವೆಲ್ಲರೂ ಬೆಳೆಸಿಕೊಂಡು ತಮ್ಮ ಮಕ್ಕಳಲ್ಲೂ ಅದರ ಅರಿವು ಮೂಢಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜೆಸಿಐ ಅಧ್ಯಕ್ಷ ರಜನಿಕಾಂತ ಮಾಳೋದೆ, ಮಹಿಳಾ ಘಟಕದ ಅಧ್ಯಕ್ಷೆ ಭಾಗೀರಥಿ ನಂದಗಾವಿ, ವಿಷ್ಣು ಲಾತೂರ, ಶೇಖರ ಉಳ್ಳಾಗಡ್ಡಿ, ರಾಚಪ್ಪ ಅಮ್ಮಣಗಿ, ಬಸವರಾಜ ಗಂಗರೆಡ್ಡಿ. ಪ್ರಕಾಶ ಬೆಳ್ಳೂರ, ಸುಮ್ಮನ ಜಾಧವ, ಐ ಎಮ್ ದಫೇದಾರ, ಮೀನಾಕ್ಷಿ ಸವದಿ, ಸಂತೋಷ ಹವಾಲದಾರ,ಪ್ರಕಾಶ ವರ್ಜಿ, ಕವಿತಾ ತುಪ್ಪದ, ಮಂಜುನಾಥ್ ಗಂಗರೆಡ್ಡಿ, ಪಾಪಾಸಾಹೇಬ ದೊಡ್ಡಮನಿ, ಅಬ್ದುಲ್ ಮಂಕಾದಾರ, ಲಕ್ಷ್ಮಣ ದಂಡಿನ ಸೇರಿದಂತೆ ಅನೇಕರು ಇದ್ದರು.