ಗೋಕಾಕ:ತಾಲೂಕಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಈದುಲ್ ಅಝಾ ( ಬಕ್ರೀದ್) ಹಬ್ಬ ಆಚರಣೆ
ತಾಲೂಕಿನಾದ್ಯಂತ ಶ್ರದ್ಧಾ ಭಕ್ತಿಯಿಂದ ಈದುಲ್ ಅಝಾ ( ಬಕ್ರೀದ್) ಹಬ್ಬ ಆಚರಣೆ
ನಮ್ಮ ಬೆಳೆಗಾವಿ ಇ – ವಾರ್ತೆ, ಗೋಕಾಕ ಜು 10 :
ತಾಲೂಕಿನಾದ್ಯಂತ ರವಿವಾರದಂದು ಮುಸ್ಲಿಂ ಸಮಾಜ ಭಾಂಧವರು ಈದುಲ್ ಅಝಾ ( ಬಕ್ರೀದ್) ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ನಗರದ ಜಾಮೀಯ ಮಸೀದಿಯ ಮೌಲಾನಾ ತಲಹಾಸಾಬ ಮತ್ತು ಅಮೀರಸಾಬ ಹಾಜಿ ಕುತುಬುದ್ದೀನ ಬಸ್ಸಾಪೂರ ನೇತೃತ್ವದಲ್ಲಿ ಸಾಮೂಹಿಕ ವಿಶೇಷ ಈದ್ ನಮಾಝ್ ನಡೆಯಿತು. ಈ ಸಂದರ್ಭದಲ್ಲಿ ಧರ್ಮಗುರುಗಳು ಈದ್ ಸಂದೇಶ ನೀಡಿದರು.
ನಗರದ ಹೊಸಪೇಟೆ ಗಲ್ಲಿಯ ನೂರಾನಿ ಮಸೀದ, ಅಂಬೇಡ್ಕರ್ ನಗರದ ಮದೀನಾ, ಹಾಳಬಾಗ ಗಲ್ಲಿಯ ಹಾಜಿ ಮಸೀದ , ಬಾಂಬೆಚಾಳನ ಗಮಾಮ , ಮಹಾಲಿಂಗೇಶ್ವರ ನಗರದ ಉಸ್ಮಾನೀಯಾ ಮಸೀದ , ಜನತಾ ಪ್ಲಾಟ್ ನ ಸಾಹಾಬಾ ಮಸೀದ , ಬಸವ ನಗರದ ಹಜರತ ಬಿಲಾಲ ಮಸೀದ, ಅಂಬೇಡ್ಕರ್ ನಗರದ ಮದೀನಾ ಮಸೀದ್,ಬೋಜಗರ ಗಲ್ಲಿಯ ನೂರಾನಿ ಮಸೀದ್, ಜನತಾ ಪ್ಲಾಟ್ ನ ಕೂಬಾ ಮಸೀದ್, ಸೇರಿದಂತೆ ನಗರದಲ್ಲಿಯ ಒಟ್ಟು 32 ಮಸೀದಗಳಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನಂತರ ನಗರದ ಈದ್ಗಾ ಮೈದಾನದಲ್ಲಿ ಜರುಗಿದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಕಲ ಮನುಕುಲದ ಉದ್ಧಾರಕ್ಕಾಗಿ ಪ್ರಾರ್ಥಿಸಲಾಯಿತು .
ಈ ಸಂದರ್ಭದಲ್ಲಿ ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ಜಾವೇದ್ ಗೋಕಾಕ , ಉಪಾಧ್ಯಕ್ಷ ಇಲಾಹಿ ಖೈರದಿ, ಕಾರ್ಯದರ್ಶಿ ಜುಬೇರ ತ್ರಾಸಗರ, ಮುಖಂಡರುಗಳಾದ ಅಬ್ದುಲ್ ರಹೆಮಾನ ದೇಸಾಯಿ, ಇಸ್ಮಾಯಿಲ್ ಗೋಕಾಕ , ಇಸ್ಮಾಯಿಲ್ ಜಮಾದಾರ, ಜಾಕೀರ ಕುಡಚಿಕರ, ಸಾದಿಕ ಹಲ್ಯಾಳ, ಅಬ್ಬಾಸ ದೇಸಾಯಿ, ಸೈಯದ ಮುಲ್ಲಾ ಸೇರಿದಂತೆ ಸಾವಿರಾರು ಮುಸ್ಲಿಂ ಭಾಂಧವರು ಉಪಸ್ಥಿತರಿದ್ದರು.