RNI NO. KARKAN/2006/27779|Friday, January 10, 2025
You are here: Home » breaking news » ಗೋಕಾಕ:ಪಂಡಿತ್ ಈಶ್ವರಪ್ಪ ಮಿನಚಿ ಅವರು ಸಂಗೀತ ಕ್ಷೇತ್ರವನ್ನು ಶ್ರೀಮಂತಗೋಳಿಸಿದ್ಧಾರೆ : ಡಾ.ಸಿ.ಕೆ ನಾವಲಗಿ

ಗೋಕಾಕ:ಪಂಡಿತ್ ಈಶ್ವರಪ್ಪ ಮಿನಚಿ ಅವರು ಸಂಗೀತ ಕ್ಷೇತ್ರವನ್ನು ಶ್ರೀಮಂತಗೋಳಿಸಿದ್ಧಾರೆ : ಡಾ.ಸಿ.ಕೆ ನಾವಲಗಿ 

ಪಂಡಿತ್ ಈಶ್ವರಪ್ಪ ಮಿನಚಿ ಅವರು ಸಂಗೀತ ಕ್ಷೇತ್ರವನ್ನು ಶ್ರೀಮಂತಗೋಳಿಸಿದ್ಧಾರೆ : ಡಾ.ಸಿ.ಕೆ ನಾವಲಗಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 14 :

 

ಪಂಡಿತ್ ಈಶ್ವರಪ್ಪ ಮಿನಚಿ ಅವರು ಸಂಗೀತ ಸೇವೆಯೊಂದಿಗೆ ನಾಡಿಗೆ ಹಲವಾರು ಕಲಾವಿದರುನ್ನು ನೀಡಿ ಸಂಗೀತ ಕ್ಷೇತ್ರವನ್ನು ಶ್ರೀಮಂತಗೋಳಿಸಿದ್ದಾರೆ ಎಂದು ಜಾನಪದ ತಜ್ಞ ಡಾ.ಸಿ.ಕೆ ನಾವಲಗಿ ಹೇಳಿದರು.

ಬುಧವಾರದಂದು ನಗರದ ಗಣಪತಿ ದೇವಸ್ಥಾನದ ಸಮುದಾಯ ಭವನದಲ್ಲಿ ಸ್ವರ ಸಂಗಮದವರು ಗುರು ಪೂರ್ಣಿಮೆ ನಿಮಿತ್ತ ಸಂತ ಶಿಶುನಾಳ ಪ್ರಶಸ್ತಿ ಪುರಸ್ಕೃತ ಪಂಡಿತ್ ಈಶ್ವರಪ್ಪ ಮಿನಚಿ ಅವರ ಸ್ಮರಣೆಗಾಗಿ ಹಮ್ಮಿಕೊಂಡ ಸ್ವರ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈಶ್ವರಪ್ಪ ಮಿನಚಿ ಅವರ ಸಂಗೀತದ ಸಾಧನೆ ಇಂದಿನ ಕಲಾವಿದರಿಗೆ ಮಾದರಿಯಾಗಿದೆ. ಸರಳ ಸಜ್ಜನಿಕೆಯೊಂದಿಗೆ ನಿರ್ಸಗದತ್ತ ಮಾದುರ್ಯ ಕಂಟದಿಂದ ಜನರ ಮನದಲ್ಲಿ ನೆಲೆಸಿದ್ದಾರೆ. ಆಕಾಶವಾಣಿ ಕಲಾವಿದರಾಗಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವರ ಸಂಗೀತದ ಕುರಿತು ಅಧ್ಯಯನ ಮಾಡಿ ಮುಂದಿನ ಪೀಳಿಗೆಗೆ ಪರಿಚಯಿಸಿಬೇಕಾಗಿದೆ. ಸ್ವರ ಸಂಗಮದವರ ಈ ಕಾರ್ಯಕ್ರಮ ಅತ್ಯಂತ ಶ್ಲಾಘನೀಯವಾಗಿ ಅವರನ್ನು ಜೀವಂತವಾಗಿರಿಸಿದೆ. ಅವರ ಪ್ರೇರಣೆಯಿಂದ ಅವರ ಶಿಷ್ಯದಿಂದರು ಸಂಗೀತ ಕ್ಷೇತ್ರವನ್ನು ಸಮೃದ್ಧಿಗೋಳಿಸಿಲೆಂದು ಹೇಳಿದರು.

ಈ ಸಂದರ್ಭದಲ್ಲಿ ಸುಗಂದಾ ಮನ್ನಿಕೇರಿ, ಸೋಮಶೇಖರ್ ಮಗದುಮ್ಮ, ಮಹಾಂತೇಶ ತಾಂವಶಿ, ಚಂದ್ರಶೇಖರ್ ಅಕ್ಕಿ, ಸ್ವರ ಸಂಗಮದ ವಿದ್ಯಾ ಮಗದುಮ್ಮ, ಶಶಿಕಲಾ ಶಿಂಧೆ, ಕಲಾವಿದರಾದ ನಟರಾಜ್ ಮಹಾಜನ್, ಸುರೇಶ್ ಚಂದರಗಿ, ದಿನೇಶ್ ಜುಗಳಿ, ಮಲ್ಲಿಕಾರ್ಜುನ ವಕ್ಕೂಂದ ಇದ್ದರು.
ವಿದ್ಯಾ ಗುಲ್ ಸ್ವಾಗತಿಸಿದರು, ಈಶ್ವರಚಂದ್ರ ಬೆಟಗೇರಿ ವಂದಿಸಿದರು.

Related posts: