ಗೋಕಾಕ:ಮೂವರು ಸರಗಳ್ಳ ಮತ್ತು ಬೈಕ್ ಕಳ್ಳರ ಬಂಧನ : 50 ಗ್ರಾಂ ಬಂಗಾರ , 2 ಬೈಕ್ ವಶ
ಮೂವರು ಸರಗಳ್ಳ ಮತ್ತು ಬೈಕ್ ಕಳ್ಳರ ಬಂಧನ : 50 ಗ್ರಾಂ ಬಂಗಾರ , 2 ಬೈಕ್ ವಶ
ನಮ್ಮ ಬೆಳಗಾವಿ ಇ – ವಾರ್ತೆ ಜು 25 :
ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಹಾಗೂ ಮೋಟಾರ್ ಸೈಕಲ್ ಕಳ್ಳತನ ಮಾಡುತ್ತಿದ್ದ ಮೂವರನ್ನು ಗೋಕಾಕ ನಗರ ಪೊಲೀಸ ಠಾಣೆ ಪೊಲೀಸರು ಬಂಧಿಸಿ 50 ಗ್ರಾಂ ತೂಕದ 2.75 ಲಕ್ಷ ರೂ. ಬೆಲೆ ಬಾಳುವ ಸರ ಹಾಗೂ 80 ಸಾವಿರ ಬೆಲೆ ಬಾಳುವ 2 ಬೈಕಗಳನ್ನು ವಶಪಡಿಸಿಕೊಂಡಿದ್ದಾರೆ.
ಸೋಮವಾರದಂದು ನಗರದ ಯೋಗಿಕೋಳ್ಳ ರಸ್ತೆಯಲ್ಲಿ ಪೊಲೀಸರು ಗಸ್ತು ತಿರುಗುವಾಗ ಮೋಟಾರ್ ಸೈಕಲ್ ಮೇಲೆ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ಧ ಮೂವರನ್ನು ಪೊಲೀಸರು ವಶ ಪಡೆದುಕೊಂಡು ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ 2 ಬೈಕ್ ಹಾಗೂ ಫೆಬ್ರವರಿ ತಿಂಗಳಲ್ಲಿ ನಗರದ ಗುಲ್ಲ ಅವರ ಅಂಗಡಿ ಮುಂದೆ ಹಾಗೂ ಜೂನ ತಿಂಗಳಲ್ಲಿ ವಿದ್ಯಾ ನಗರದ ಬಸವ ಮಂಟಪದ ಹತ್ತಿರ ಮಹಿಳೆಯ ಕೊರಳಲ್ಲಿಯ ಬಂಗಾರದ ಮಂಗಳಸೂತ್ರವನ್ನು ಕಳ್ಳತನ ಮಾಡಿದ್ದರ ಬಗ್ಗೆ ಒಪ್ಪಿಕೊಂಡಿದ್ದಾರೆ ಬಂಧಿತ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಶಹರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.