ಗೋಕಾಕ:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗೋಕಾಕ ತಾಲೂಕು ಅಧ್ಯಕ್ಷರಾಗಿ ಗುರುಸಿದ್ದಪ್ಟ ಪೂಜೇರಿ, ಪ್ರಧಾನ ಕಾರ್ಯದರ್ಶಿಯಾಗಿ ಸಾದಿಕ ಹಲ್ಯಾಳ ಆಯ್ಕೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗೋಕಾಕ ತಾಲೂಕು ಅಧ್ಯಕ್ಷರಾಗಿ ಗುರುಸಿದ್ದಪ್ಟ ಪೂಜೇರಿ, ಪ್ರಧಾನ ಕಾರ್ಯದರ್ಶಿಯಾಗಿ ಸಾದಿಕ ಹಲ್ಯಾಳ ಆಯ್ಕೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 20 :
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗೋಕಾಕ ಹಾಗೂ ಮೂಡಲಗಿ ತಾಲೂಕು ಘಟಕದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಶುಕ್ರವಾರದಂದು ಸಾಯಂಕಾಲ ನಗರದ ಸಮುದಾಯ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಸಮಾರಂಭ ಹಾಗೂ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ದಿಲೀಪ್ ಕುರಂದವಾಡೆ ಅವರು ಆಯ್ಕೆ ಪ್ರಕ್ರಿಯೆಯನ್ನು ನಡೆಸಿದರು.
ಗೌರವಾಧ್ಯಕ್ಷರಾಗಿ ಎಲ್ಇಟಿ ಸಂಸ್ಥೆಯ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ, ತಾಲೂಕು ಅಧ್ಯಕ್ಷರಾಗಿ ಗುರುಸಿದ್ದಪ್ಟ ಪೂಜೇರಿ, ಪ್ರಧಾನ ಕಾರ್ಯದರ್ಶಿಯಾಗಿ ಸಾದಿಕ ಹಲ್ಯಾಳ, ಉಪಾಧ್ಯಕ್ಷರುಗಳಾಗಿ ಬಿ.ಪ್ರಭಾಕರ ( ಪ್ರವಿಣ) , ಗಣೇಶ ಗಾಣಿಗ ಕಾರ್ಯದರ್ಶಿಗಳಾಗಿ ಪ್ರದೀಪ್ ನಾಗನೂರ, ಬಸವರಾಜ ಭರಮನ್ನವರ, ಖಜಾಂಚಿಯಾಗಿ ಮಹಾರುದ್ರ ಮಹಾಲಮನಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಮೂಡಲಗಿ ತಾಲೂಕು ಘಟಕದ ಅಧ್ಯಕ್ಷರಾಗಿ ಕೃಷ್ಣಪ್ಪ ಗೀರೆನ್ನವರ, ಪ್ರಧಾನ ಕಾರ್ಯದರ್ಶಿಯಾಗಿ ಮಲ್ಲಪ್ಪ ಬೋಳನ್ನವರ, ಉಪಾಧ್ಯಕ್ಷರುಗಳಾಗಿ ಲಿಂಗಪ್ಪ ಗಾಡವಿ, ಶಿವಾನಂದ ಮರಾಠೆ, ಕಾರ್ಯದರ್ಶಿಗಳಾಗಿ ಅಲ್ತಾಫ್ ಹವಾಲ್ದಾರ, ವೆಂಕಪ್ಪ ಬಾಲರಡ್ಡಿ, ಖಜಾಂಚಿಯಾಗಿ ಮಹಾದೇವ ನಡುವಿನಕೇರಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ದಿಲೀಪ್ ಮಜಲಿಕರ ಅವರನ್ನು ಜಿಲ್ಲಾ ಘಟಕಕ್ಕೆ ನಾಮನಿರ್ದೇಶನ ಸದಸ್ಯರೆಂದು ಆಯ್ಕೆ ಮಾಡಲಾಯಿತು.
ವೇದಿಕೆಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಜಿಲ್ಲಾ ಉಪಾಧ್ಯಕ್ಷ ಯಲ್ಲಪ್ಪ ತಳವಾರ, ಜಿಲ್ಲಾ ಕಾರ್ಯದರ್ಶಿ ಟಿ.ಎನ್ ಮುರಂಕರ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರುಗಳಾದ ಸೂರ್ಯಕಾಂತ ಪಾಟೀಲ, ಭೀಮಪ್ಪ ಕಿಚಡಿ ಸುಕುಮಾರ ಬನ್ನೂರೆ ಉಪಸ್ಥಿತರಿದ್ದರು.