RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ಜೀವನದಲ್ಲಿ ಬಡತನ, ಅವಮಾನ, ಸೋಲು ಮನುಷ್ಯನಿಗೆ ಅನೇಕ ಅನುಭವನಗಳನ್ನು ನೀಡುತ್ತವೆ : ಸಂಸದ ಈರಣ್ಣ ಕಡಾಡಿ

ಗೋಕಾಕ:ಜೀವನದಲ್ಲಿ ಬಡತನ, ಅವಮಾನ, ಸೋಲು ಮನುಷ್ಯನಿಗೆ ಅನೇಕ ಅನುಭವನಗಳನ್ನು ನೀಡುತ್ತವೆ : ಸಂಸದ ಈರಣ್ಣ ಕಡಾಡಿ 

ಜೀವನದಲ್ಲಿ ಬಡತನ, ಅವಮಾನ, ಸೋಲು ಮನುಷ್ಯನಿಗೆ ಅನೇಕ ಅನುಭವನಗಳನ್ನು ನೀಡುತ್ತವೆ : ಸಂಸದ ಈರಣ್ಣ ಕಡಾಡಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 4 :

 

ಜೀವನದಲ್ಲಿ ಬಡತನ, ಅವಮಾನ, ಸೋಲು ಸೇರಿದಂತೆ ಅನೇಕ ಘಟನೆಗಳು ಮನುಷ್ಯನಿಗೆ ಅನೇಕ ಅನುಭವನಗಳನ್ನು ನೀಡುತ್ತವೆ. ಇಂತಹ ಅನುಭವಗಳನ್ನು ಅರಿತು ರೋಟರಿ ಸಂಸ್ಥೆ ದೇಶದಲ್ಲಿ ತನ್ನದೇ ಆದ ಸೇವೆಯನ್ನು ನೀಡುತ್ತಾ ಬಂದು ಒಂದು ಒಳ್ಳೆಯ ಸೇವಾ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ರವಿವಾರದಂದು ನಗರದ ರೋಟರಿ ರಕ್ತ ಭಂಡಾರ ಸಭಾಂಗಣದಲ್ಲಿ ರೋಟರಿ ಸಂಸ್ಥೆ, ರೋಟರಿ ಸೇವಾ ಸಂಘದ ಡಾ‌. ಬಿ.ಸಿ . ಆಜರಿ ಅವರ ಸ್ಮರಣಾರ್ಥ ರೋಟರಿ ರಕ್ತ ಭಂಡಾರಥ ರೂ. 60 ಲಕ್ಷಗಳ ವೆಚ್ಚದಲ್ಲಿ ಮೇಲ್ದರ್ಜೆಗೆರಿಸಿದ ರೋಟರಿ ರಕ್ತ ಭಂಡಾರದ ರಕ್ತ ಗುಂಪು ವಿಂಗಡಣಾ ಘಟಕದ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮತ್ತು ಸಂಸದೆ ಮಂಗಳಾ ಅಂಗಡಿ ಅವರ ಮತ್ತು ರಾಜಸಭಾ ಸದಸ್ಯ ಈರಣ್ಣ ಕಡಾಡಿ ಅವರ ನಿಧಿಯಿಂದ 31.5 ಲಕ್ಷ ರೂಗಳ ರಕ್ತ ಸಂಗ್ರಹಣಾ ವಾಹನ ಖರೀದಿ ಅನುದಾನ ನೀಡಿ ಅವರು ಮಾತನಾಡಿದರು.

ಅನ್ನ , ಆರೋಗ್ಯ ,ಆಶ್ರಯ ಮತ್ತು ಅಕ್ಷರ ಇದನ್ನು ಕೊಡುವ ಜವಾಬ್ದಾರಿ ಸರಕಾರದ್ದು ಆದರೂ ಸಹ ಇಂತಹ ಸೇವೆಗಳನ್ನು ಇಂದು ಸಮಾಜ ಸೇವಾ ಸಂಘಗಳ ಮಾಡುತ್ತಿವೆ.ತಮ್ಮ ವೈಯಕ್ತಿಕ ಬದುಕಿನ ಜೊತೆಗೆ ಸಮಾಜ ಸೇವೆಯಲಿ ಹಲವು ಸಂಘಗಳು ತೊಡಗಿಸಿಕೊಂಡಿವೆ ಅದರಲ್ಲಿ ರೋಟರಿ ಸಂಸ್ಥೆಯು ಒಂದು. ತಮ್ಮದೇ ಆದ ಆದರ್ಶಗಳನ್ನು ಪಾಲಿಸಿ ಪ್ರಾಮಾಣಿಕವಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ.
ಕೆಲವ ಐದು ಜನರಿಂದ ಪ್ರಾರಂಭವಾದ ಈ ಸಂಸ್ಥೆಯು ಇಂದು ಜಗತ್ತಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ವೈಯಕ್ತಿಕ ಬದುಕಿನ ಜೊತೆಗೆ ಸಮಾಜ ಸೇವೆ ಮಾಡಿದರೆ ಮಾತ್ರ ಸಮಾಜ ಸುಧಾರಣೆ ಮಾಡಲು ಸಾಧ್ಯ. ಆ ನಿಟ್ಟಿನಲ್ಲಿ ಜನರ ನಾಡಿಮಿಡಿತವನ್ನು ಅರಿತು ರೋಟರಿ ಸಂಸ್ಥೆ ಸಮಾಜದಲ್ಲಿ ಮಾನವೀಯ ಸೇವೆಯನ್ನು ಮಾಡುತ್ತಿದೆ.
ಸರಕಾರದ ದುಡ್ಡನ್ನು ಸದುಪಯೋಗ ಮಾಡಿಕೊಂಡು ಸಮಾಜದ ಸೇವೆಯಲ್ಲಿ ತೊಡಗಿಸಬೇಕು . ಸರಕಾರವು ಕೂಡಾ ಆರೋಗ್ಯ ಸೇವೆಗೆ ಹೆಚ್ಚಿನ ಮಹತ್ವವನ್ನು ನೀಡಿ ಕಾರ್ಯಮಾಡುತ್ತಿದೆ. ಅವುಗಳನ್ನು ಸಹ ಜನರಿಗೆ ತಲುಪಿಸುವ ಕಾರ್ಯವನ್ನು ರೋಟರಿ ಸಂಸ್ಥೆ ಮಾಡಬೇಕು. ಮನುಷ್ಯ ಶರೀರ ಪರೋಪಕಾರಕ್ಕಾಗಿ ಇದೆ ಅದನ್ನು ಅರಿತು ಜನ ಸೇವೆಯಲ್ಲಿ ತೊಡಗಬೇಕು ಎಂದು ಈರಣ್ಣ ಕಡಾಡಿ ಹೇಳಿದರು.
ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಮಾತನಾಡಿ ಎಲ್ಲಾ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾಗಿದ್ದು, ಮನುಷ್ಯನನ್ನು ಬದುಕಿಸುವದೆ ರಕ್ತದಾನ, ಸಮಾಜದಲ್ಲಿ ರಕ್ತಾದಾನದ ಬಗ್ಗೆ ಜಾಗೃತಿ ಮೂಡಸಬೇಕು ರಕ್ತಾದಾನವು ದಾನಿಗಳಿಗೆ ಪ್ರೇರಣೆಯನ್ನು ನೀಡುತ್ತದೆ ಸಾವಿರಾರು ದಾನಿಗಳನ್ನು ಸೃಷ್ಟಿಸಿರುವ ರೋಟರಿ ರಕ್ತ ಭಂಡಾರದ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಚೇರಮನ್ ಮಲ್ಲಿಕಾರ್ಜುನ ಕಲ್ಲೋಳಿ ವಹಿಸಿದ್ದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಘಟಪ್ರಭಾ ಗುಬ್ಬಲಗುಡ್ಡ ಕೆಂಪಯ್ಯ ಮಠದ ಪೀಠಾಧಿಪತಿ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮತ್ತು ಘೋಡಗೇರಿ ಶಿವಾನಂದ ಮಠದ ಪರಮಪೂಜ್ಯ ಶ್ರೀ ಮಲ್ಲಯ್ಯ ಸ್ವಾಮೀಗಳು ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ ಪಾಂತ್ರಪಾಲ ವೆಂಕಟೇಶ್ ದೇಶಪಾಂಡೆ, ಮಾಜಿ ಜಿಲ್ಲಾ ಪ್ರಾಂತಪಾಲ ರವಿ ಕಿರಣ ಕುಲಕರ್ಣಿ, ರೋಟರಿ ಸೇವಾ ಸಂಘದ ಸೋಮಶೇಖರ್ ಮಗದುಮ್ಮ, ಸುರೇಶ ರಾಠೋಡ, ರೋಟರಿ ಸಂಸ್ಥೆಯ ಸತೀಶ ನಾಡಗೌಡ, ಮಲ್ಲಿಕಾರ್ಜುನ ಈಟಿ ಇದ್ದರು.

ವಿಜಯಕುಮಾರ್ ದುಳಾಯಿ ಸ್ವಾಗತಿಸಿದರು, ವಿದ್ಯಾ ಗುಲ್ ನಿರೂಪಿಸಿದರು, ಅನುಪಾ ಕೌಶಿಕ ವಂದಿಸಿದರು.

Related posts: