RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಶಿಕ್ಷಕರು ರಾಷ್ಟ್ರ ಕಟ್ಟುವ ವಿದ್ಯಾರ್ಥಿಗಳನ್ನು ನಿರ್ಮಿಸುವ ಸೃಷ್ಟಿಕರ್ತರಾಗಿದ್ದಾರೆ : ಜನಪದ ತಜ್ಞ ಡಾ.ಸಿ.ಕೆ.ನಾವಲಗಿ

ಗೋಕಾಕ:ಶಿಕ್ಷಕರು ರಾಷ್ಟ್ರ ಕಟ್ಟುವ ವಿದ್ಯಾರ್ಥಿಗಳನ್ನು ನಿರ್ಮಿಸುವ ಸೃಷ್ಟಿಕರ್ತರಾಗಿದ್ದಾರೆ : ಜನಪದ ತಜ್ಞ ಡಾ.ಸಿ.ಕೆ.ನಾವಲಗಿ 

ಶಿಕ್ಷಕರು ರಾಷ್ಟ್ರ ಕಟ್ಟುವ ವಿದ್ಯಾರ್ಥಿಗಳನ್ನು ನಿರ್ಮಿಸುವ ಸೃಷ್ಟಿಕರ್ತರಾಗಿದ್ದಾರೆ : ಜನಪದ ತಜ್ಞ ಡಾ.ಸಿ.ಕೆ.ನಾವಲಗಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 5 :

 

ಶಿಕ್ಷಕರು ರಾಷ್ಟ್ರದ ರಕ್ಷಕರಾಗಿ ರಾಷ್ಟ್ರ ಕಟ್ಟುವ ವಿದ್ಯಾರ್ಥಿಗಳನ್ನು ನಿರ್ಮಿಸುವ ಸೃಷ್ಟಿಕರ್ತರಾಗಿದ್ದಾರೆ ಎಂದು ಸಾಹಿತಿ ಜನಪದ ತಜ್ಞ ಡಾ‌.ಸಿ.ಕೆ ನಾವಲಗಿ ಹೇಳಿದರು.

ಸೋಮವಾರದಂದು ನಗರದ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ವಿವಿಧ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶಿಕ್ಷಕ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಿಕ್ಷಕರು ವೃತ್ತಿಯನ್ನು ಗೌರವಿಸಿ ವಿದ್ಯಾರ್ಥಿಗಳನ್ನು ಮಕ್ಕಳೆಂದು ತಿಳಿದು ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸಬೇಕು. ಡಾ.ರಾಧಾಕೃಷ್ಣನ್ ಅವರು ಶಿಕ್ಷಕರ ಮಹತ್ವವನ್ನು ಅರಿತು ತಮ್ಮ ಹುಟ್ಟು ಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ನೀಡಿದ ಕರೆಯ ಘನತೆಯನ್ನು ಹೆಚ್ಚಿಸುವಂತೆ ಕಾರ್ಯನಿರ್ವಹಿಸಬೇಕು. ಶಿಕ್ಷಣದೊಂದಿಗೆ ನಮ್ಮ ದೇಶಿಯ ಸಂಸ್ಕೃತಿಯನ್ನು ಉಳಿಸಿ ಬೆಳಸಬೇಕು. ತ್ವರಿತಗತಿಯಲ್ಲಿ ಬದಲಾವಣೆ ಗೋಳುತ್ತಿರುವ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕರು ಹೆಚ್ಚು ಅಧ್ಯಯನ ಶೀಲರಾಗಿ ಸ್ಪಂದಿಸಬೇಕು.

ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಇಂದಿನ ಯುವ ಪೀಳಿಗೆಯಲ್ಲಿ ದೇಶಿಯ ಸಂಸ್ಕೃತಿಯ ಅರಿವು ಮೂಡಿಸಿ ಅವರನ್ನು ದೇಶಾಭಿಮಾನಿಗಳನ್ನಾಗಿ ಮಾಡುವಂತೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಶಿಕ್ಷಕರನ್ನು ಸತ್ಕರಿಸಿ, ಗೌರವಿಸಲಾಯಿತು.

ವೇದಿಕೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ, ಆಡಳಿತಾಧಿಕಾರಿ ಬಿ.ಕೆ ಕುಲಕರ್ಣಿ, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಎ.ಬಿ.ಪಾಟೀಲ, ಪಿ.ಎಲ್.ಮೋರೆ, ಐ .ಎಸ್. ಪವಾರ, ಕಿರಣ ಅಂಬೇಕರ, ಅರುಣ್ ಪೂಜೇರಾ, ಎಚ್.ಎಸ್.ಅಡಿಬಟ್ಟಿ , ಆರ್‌.ಎಂ ದೇಶಪಾಂಡೆ, ಎಚ್.ವ್ಹಿ.ಪಾಗನಿಸ, ಪಿ.ವ್ಹಿ.ಚಚಡಿ ಇದ್ದರು.

Related posts: