ಬೆಳಗಾವಿ:ಕಣ್ಣು ಮುಚ್ಚಿದ ಕತ್ತಿ ಸಾಹುಕಾರ : ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಕೂಗಿನ ನಾಯಕ ಉಮೇಶ ಇನ್ನಿಲ್ಲ
ಕಣ್ಣು ಮುಚ್ಚಿದ ಕತ್ತಿ ಸಾಹುಕಾರ : ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಕೂಗಿನ ನಾಯಕ ಉಮೇಶ ಇನ್ನಿಲ್ಲ
ನಮ್ಮ ಬೆಳಗಾವಿ ಇ- ವಾರ್ತೆರ ಬೆಳಗಾವಿ ಸೆ 7 :
ಉತ್ತರ ಕರ್ನಾಟಕದ ಅಭಿವೃದ್ಧಿಯ ಹರಿಕಾರ, ನೇರ ನುಡಿಯ ನಾಯಕ ಅರಣ್ಯ ಸಚಿವ ಉಮೇಶ ಕತ್ತಿ ಅವರು ತೀವ್ರ ಹೃದಯಘಾತದಿಂದ ನಿನ್ನೆ ರಾತ್ರಿ ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ನಿಧಾನರಾಗಿದ್ದಾರೆ.
ರಾಜ್ಯ ರಾಜಕೀಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಧಿಮಂತ ನಾಯಕ ಉಮೇಶ್ ಕತ್ತಿ ಅವರ ಅಗಲಿಕೆಯ ಸುದ್ದಿ ಇಡೀ ರಾಜ್ಯಕ್ಕೆ ತುಂಬಾ ನಷ್ಟವನ್ನುಂಟು ಮಾಡಿದೆ.
ಹಲವಾರು ಖಾತೆಗಳ ಸಚಿವರಾಗಿ ಸಮರ್ಥವಾಗಿ ನಿಭಾಯಿಸಿದ ಕತ್ತಿ ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗನ್ನು ಎತ್ತಿದ್ದವರು ಇದಕ್ಕೆ ಹಲವು ಮುಖಂಡರು ವಿರೋಧ ವ್ಯಕಪಡಿಸಿದ್ದರು ಹೆದರದೆ ತಮ್ಮ ವಾದವನ್ನು ಸಮರ್ಥವಾಗಿ ಮಂಡಿಸಿದ ಧೈರ್ಯವಂತ ನಾಯಕ ಉಮೇಶ್ ಕತ್ತಿ ಅವರು ಅಗಲಿಕೆ ಉತ್ತರ ಕರ್ನಾಟಕಕ್ಕೆ ದೊಡ್ಡ ಅಘಾತವನ್ನುಂಟು ಮಾಡಿದೆ.
ಇಂದು ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ : ಅರಣ್ಯ ಸಚಿವ ಉಮೇಶ ಕತ್ತಿ ಅವರ ಪ್ರಾರ್ಥಿವ ಶರೀರವನ್ನು ಬುಧವಾರದಂದು ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ತಲುಪಲಿದ್ದು , ಅಲಿ ಸಕಲ ಸರಕಾರಿ ಗೌರವ ಸಲ್ಲಿಸಿ , ಅಲಿಂದ ಬೆಲದಬಾಗೇವಾಡಿಯ ವಿಶ್ವರಾಜ ಸಕ್ಕರೆ ಕಾರಖಾನೆ ಆವರಣದಲ್ಲಿ ಅವರ ಪ್ರಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಿಲಾಗುವದು. ಸಾಯಂಕಾಲ 5 ಘಂಟೆಗೆ ಸಕಲ ವಿಧಿ ವಿಧಾನದಿಂದ , ಸರಕಾರಿ ಗೌರವದಿಂದ ಅವರ ಅಂತ್ಯಕ್ರಿಯೆ ನಡೆಯಲಿದೆ.
ಅಂತ್ಯಕ್ರಿಯೆದಲ್ಲಿ ಹಲವು ಸಚಿವರು ಭಾಗಿ: ಉತ್ತರ ಕರ್ನಾಟಕದ ಧೀಮಂತ ನಾಯಕ ಅರಣ್ಯ ಸಚಿವ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸರಕಾರದ ಅನೇಕ ಸಚಿವರು ಬೆಲದಬಾಗೇವಾಡಿಗೆ ಆಗಮಿಸಿ ಅಂತಿಮ ದರ್ಶನ ಪಡೆಯಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಬೆಂಗಳೂರಿನ ರಾಮಯ್ಯ ಆಸ್ಪತ್ರೆಗೆ ತೆರಳಿ ಅಂತಿಮ ದರ್ಶನವನ್ನು ಪಡೆದಿದ್ದಾರೆ. ಇಂದು ಸಾಯಂಕಾಲ 5 ಘಂಟೆಗೆ ಅವರ ಅಂತ್ಯಕ್ರಿಯೆ ಜರುಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ : ಅರಣ್ಯ ಸಚಿವ ಉಮೇಶ್ ಕತ್ತಿ ಅವರ ಅಕಾಲಿಕ ನಿಧನದಿಂದ ಜಿಲ್ಲೆಯಾದ್ಯಂತ ಒಂದು ದಿನ ಶೋಕಾಚರಣೆ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಜೆ ಘೋಷಣೆ ಮಾಡಿದ್ದಾರೆ.
ಒಟ್ಟಾರೆ ಉತ್ತರ ಕರ್ನಾಟಕದ ಕೂಗು ಆಗಿದ್ದ ಸಚಿವ ಉಮೇಶ ಕತ್ತಿ ಅವರು ಶಾಶ್ವತವಾಗಿ ಕಣ್ಣು ಮುಚ್ಚಿದರಿಂದ ಉತ್ತರ ಕರ್ನಾಟಕ ಬಡವಾಗಿದೆ ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೊಣ .