ಗೋಕಾಕ:ಬಿಡಾಡಿಯಾಗಿ ಜನನಿಬಿಡ ಪ್ರದೇಶದಲ್ಲಿ ತಿರುಗುವ ದನ-ಕರುಗಳನ್ನು ತಮ್ಮ ಕಬ್ಜೆಗೆ ತೆಗೆದುಕೊಳ್ಳಿ : ಹಿರೇಮಠ
ಬಿಡಾಡಿಯಾಗಿ ಜನನಿಬಿಡ ಪ್ರದೇಶದಲ್ಲಿ ತಿರುಗುವ ದನ-ಕರುಗಳನ್ನು ತಮ್ಮ ಕಬ್ಜೆಗೆ ತೆಗೆದುಕೊಳ್ಳಿ : ಹಿರೇಮಠ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 14 :
ಖಾಸಗಿ ದನಗಳು ನಗರದಲ್ಲಿ ಬಿಡಾಡಿಯಾಗಿ ಜನನಿಬಿಡ ಪ್ರದೇಶದಲ್ಲಿ ತಿರುಗಾಡುತ್ತಿದ್ದು, ಇದರಿಂದ ಸಾರ್ವಜನಿಕರು ತಿರುಗಾಡಲು ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಅವುಗಳ ಮಾಲೀಕರು ತಮ್ಮ ದನ-ಕರುಗಳನ್ನು ತಮ್ಮ ಕಬ್ಜೆಗೆ ತೆಗೆದುಕೊಳ್ಳಬೇಕೆಂದು ಪೌರಾಯುಕ್ತ ಶಿವಾನಂದ ಹಿರೇಮಠ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ದನ-ಕರುಗಳು ರಸ್ತೆಯಲ್ಲಿ ಅಡ್ಡಾಡುತ್ತಿರುವುದರಿಂದ ಸಾರ್ವಜನಿಕರಿಗೆ ಮಾರಣಾಂತಿಕ ಹಾನಿಯಾಗುವ ಸಂಭವವಿರುತ್ತದೆ. ಇದರ ಬಗ್ಗೆ ಈಗಾಗಲೇ ನಗರಸಭೆಯಿಂದ ಮೌಖಿಕವಾಗಿ ಹಾಗೂ ಲಿಖೀತ ನೋಟೀಸು ನೀಡಿದ್ದರೂ ಸಹ ತಮ್ಮ ದನಗಳನ್ನು ತಮ್ಮ ಜಾಗೆಯಲ್ಲಿ ಕಟ್ಟಿಕೊಂಡಿರುವುದಿಲ್ಲ. ಕಾರಣ ತಮ್ಮಲ್ಲಿ ಮತ್ತೊಮ್ಮೆ ತಮ್ಮ ಜಾಗೆಯಲ್ಲಿ ಕಟ್ಟಿಕೊಂಡು ಸಾಕತಕ್ಕದ್ದು. ತಪ್ಪಿದ್ದಲ್ಲಿ ರಸ್ತೆಯಲ್ಲಿ ತಿರುಗಾಡುವ ದನಗಳನ್ನು ಬಿಡಾಡಿ ದನಗಳೆಂದು ಪರಿಗಣಿಸಿ ನಿಯಮಾನುಸಾರ ಸ್ಥಳಾಂತರಿಸಲು ಕ್ರಮ ಕೈಕೊಳ್ಳಲಾಗುವುದು ಎಂದು ಪೌರಾಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.