RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ನಾನೊಂದು ತೀರಾ ನಿನ್ನೊಂದು ತೀರಾ : ಒಂದೆ ವೇದಿಕೆ ಹಂಚಿಕೊಂಡರು ಒಬ್ಬರಿಗೊಬ್ಬರು ನೋಡದ ಸತೀಶ ಮತ್ತು ಲಖನ್ ಸಹೋದರರು

ಗೋಕಾಕ:ನಾನೊಂದು ತೀರಾ ನಿನ್ನೊಂದು ತೀರಾ : ಒಂದೆ ವೇದಿಕೆ ಹಂಚಿಕೊಂಡರು ಒಬ್ಬರಿಗೊಬ್ಬರು ನೋಡದ ಸತೀಶ ಮತ್ತು ಲಖನ್ ಸಹೋದರರು 

ನಾನೊಂದು ತೀರಾ ನಿನ್ನೊಂದು ತೀರಾ : ಒಂದೆ ವೇದಿಕೆ ಹಂಚಿಕೊಂಡರು ಒಬ್ಬರಿಗೊಬ್ಬರು ನೋಡದ ಸತೀಶ ಮತ್ತು ಲಖನ್ ಸಹೋದರರು

 

ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಸೆ 24 :

 
ಶನಿವಾರದಂದು ನಗರದಲ್ಲಿ ನಡೆದ ಉಪ್ಪಾರ ಸಮಾಜದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಮತ್ತು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಒಂದೇ ವೇದಿಕೆ ಹಂಚಿಕೊಂಡಿದ್ದು, ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು. 2019 ರಲ್ಲಿ ನಡೆದ ವಿಧಾನ ಸಭೆ ಉಪ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಅವರ ಬೆಂಬಲದೊಂದಿಗೆ ಕಾಂಗ್ರೆಸ್ ಪಕ್ಷದಿಂದ ಸ್ವರ್ಧಿಸಿದ್ದ ಲಖನ ಜಾರಕಿಹೊಳಿ ಅವರು ಬದಲಾದ ರಾಜಕೀಯ ಸನ್ನಿವೇಶದಿಂದ ಮತ್ತೆ ಶಾಸಕರ ರಮೇಶ ಜಾರಕಿಹೊಳಿ ಅವರನ್ನು ಬೆಂಬಲಿಸಿದ್ದಾರೆ ಅಂದಿನಿಂದ ಲಖನ ಜಾರಕಿಹೊಳಿ ಮತ್ತು ಸತೀಶ ಜಾರಕಿಹೊಳಿ ಅವರು ಪರಸ್ಪರ ಮುಖಾಮುಖಿ ಆಗಿರಲಿಲ್ಲ .ಇಂದಿನ ಸಮಾರಂಭದಲ್ಲಿ ಒಂದೇ ವೇದಿಕೆಯ ಹಂಚಿಕೊಂಡರು ಸಹ ಜಾರಕಿಹೊಳಿ ಸಹೋದರರು ಪರಸ್ಪರ ಒಬ್ಬರನ್ನೊಬ್ಬರು ನೋಡಲೆ ಇಲ್ಲಾ. ಇದನ್ನು ಅರಿತ ಜನರು ಜಾರಕಿಹೊಳಿ ಸಹೋದರರ ನಡುವಳಿಕೆಯನ್ನು ನಾನೊಂದು ತೀರಾ ಇನ್ನೊಂದು ತೀರಾ ಎಂದು ಬಣ್ಣಿಸಿ ಮಾತನಾಡಾಕೊಳ್ಳುತ್ತಿದ್ದರು

Related posts: