RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಪ್ರವಾಸಗಳಿಂದ ವಿದ್ಯಾರ್ಥಿಗಳ ಜ್ಞಾನಮಟ್ಟ ಹೆಚ್ಚಿ ಅವರು ಪ್ರತಿಭಾವಂತರಾಗಲು ಸಹಕಾರಿಯಾಗುತ್ತದೆ : ಬಿಇಒ ಬಳಗಾರ

ಗೋಕಾಕ:ಪ್ರವಾಸಗಳಿಂದ ವಿದ್ಯಾರ್ಥಿಗಳ ಜ್ಞಾನಮಟ್ಟ ಹೆಚ್ಚಿ ಅವರು ಪ್ರತಿಭಾವಂತರಾಗಲು ಸಹಕಾರಿಯಾಗುತ್ತದೆ : ಬಿಇಒ ಬಳಗಾರ 

ಪ್ರವಾಸಗಳಿಂದ ವಿದ್ಯಾರ್ಥಿಗಳ ಜ್ಞಾನಮಟ್ಟ ಹೆಚ್ಚಿ ಅವರು ಪ್ರತಿಭಾವಂತರಾಗಲು ಸಹಕಾರಿಯಾಗುತ್ತದೆ : ಬಿಇಒ ಬಳಗಾರ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 25 :

 
ಪ್ರವಾಸಗಳಿಂದ ವಿದ್ಯಾರ್ಥಿಗಳ ಜ್ಞಾನಮಟ್ಟ ಹೆಚ್ಚಿ ಅವರು ಪ್ರತಿಭಾವಂತರಾಗಲು ಸಹಕಾರಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.

ಶನಿವಾರದಂದು ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಪೂರ್ವಭಾವಿಯಾಗಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ, ವಿವಿಧ ಸ್ವರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಒತ್ತಡದ ಜೀವನದಲ್ಲಿ ವಿವಿಧ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುವದರಿಂದ ಮನೊಉಲ್ಲಾಸದೊಂದಿಗೆ ಜ್ಞಾನವನ್ನು ಪಡೆಯಬಹುದು. ಹೋಸ ಸ್ಥಳಗಳಿಗೆ ಭೇಟಿ ನೀಡುವದರಿಂದ ಹೋಸ ವಿಚಾರಗಳೊಂದಿಗೆ ವಿಭಿನ್ನ ಸಂಸ್ಕೃತಿಗಳ ಪರಿಚಯವಾಗುತ್ತದೆ. ವಿದ್ಯಾರ್ಥಿಗಳು ಪ್ರವಾಸಕ್ಕೂ ಹೆಚ್ಚಿನ ಮಹತ್ವ ನೀಡಿ ತಮ್ಮ ಪಾಲಕರಲ್ಲೂ ಅರಿವು ಮೂಡಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಮೂಡಲಗಿ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ, ಶಾಲೆಯ ಆಡಳಿತ ಅಧಿಕಾರಿ ಎಸ್.ಬಿ.ಮುರಗೋಡ, ಪ್ರಧಾನ ಗುರುಮಾತೆ ಸಿ.ಬಿ.ಪಾಗದ ,ಶಿಕ್ಷಣ ಇಲಾಖೆಯ ಎಸ್.ಬಿ.ಕಲ್ಲಟ್ಟಿ, ಅಭಿನಂಧನ ಜಿರಾಳೆ, ಎಂ.ಎಚ.ವೆಂಕಟಾಪೂರ, ಆರ್.ವ್ಹಿ.ದೇಮಶೆಟ್ಟಿ, ಎಂ.ವಾಯ್, ಮುಕರ್ತಿಹಾಳ, ಬಿ.ಬಿ.ತಿಗಡಿಮರ, ಜಿ.ಎಸ್.ಮಠಪತಿ, ಬಿ.ಎಸ್.ಜೋರಾಪೂರೆ, ಎನ್‌.ಬಿ.ತೋರಣಗಟ್ಟಿ ಇದ್ದರು.

Related posts: