ಗೋಕಾಕ:ಶಾಲೆಯಲ್ಲಿ ಸಿಲಿಂಡರ್ ಸ್ಫೋಟ: ಧಾನ್ಯ, ಸಾಮಗ್ರಿ ಭಸ್ಮ : ನಗರದಲ್ಲಿ ಘಟನೆ
ಶಾಲೆಯಲ್ಲಿ ಸಿಲಿಂಡರ್ ಸ್ಫೋಟ: ಧಾನ್ಯ, ಸಾಮಗ್ರಿ ಭಸ್ಮ : ನಗರದಲ್ಲಿ ಘಟನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 26 :
ಇಲ್ಲಿನ ವಿವೇಕಾನಂದ ನಗರದಲ್ಲಿ ತಾಲೂಕಿನ ಗೋಡಚಿನಮಲ್ಕಿ ಗ್ರಾಮದದಿಂದ ಸ್ಥಳಾಂತರಗೊಂಡಿರುವ ಡಾ..ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸೋಮವಾರದಂದು ಬಿಸಿಯೂಟ ಅಡುಗೆ ಕೋಣೆಯಲ್ಲಿ ಅಡುಗೆ ಮಾಡುತ್ತಿರುವಾಗ ಸಿಲೆಂಡರ್ ಸ್ಫೋಟವಾಗಿ ಕೋಣೆಯ ಬಾಗಿಲು ಸುಟ್ಟು ಹೋಗಿದ್ದು,ಒಳಗೆ ಇರುವ ಬಿಸಿಯೂಟದ ಆಹಾರ ಧಾನ್ಯ ಮುಂತಾದ ಪರಿಕರಗಳಿಗೆ ಸುಟ್ಟಿವೆ.
ಅಡುಗೆ ಮಾಡುತ್ತಿರುವಾಗ ಸಿಲೆಂಡರ್ ನಿಂದ ಭಾರಿ ಶಬ್ದ ಬಂದಾಗ ಅಡುಗೆಯವರು ಹೆದರಿ ಕೋಣೆಯಿಂದ ಹೊರಗೆ ಬಂದರು ನಂತರ ಕೋಣೆಯ ತುಂಬಾ ಬೆಂಕಿ ಆವರಿಸಿತು ಇದ್ದರಿಂದ ಕೋಣೆಯ ಕಿಟಕಿ –ಬಾಗಿಲುಗಳು ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.ಶಾಲೆಯಲ್ಲಿರುವ ಅಗ್ನಿ ನಿಂಧಿಸುವ ಗ್ಯಾಸನಿಂದ ಅಗ್ನಿ ನಿಂಧಿಸಲು ಪ್ರಯತ್ನಸಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದಾಗ ಅಗ್ನಿ ಶಾಮಕ ದಳದ ಬಂದು ಕಾರ್ಯಾಚರಣೆ ಮಾಡಿ ಘಟನೆಯ ಮಾಹಿತಿ ಪಡೆದು ಹೋಗಿದ್ದಾರೆ ಎಂದು ಅಲ್ಲಿನ ಮುಖ್ಯ ಗುರುಗಳಾದ ವಿಠಲ ಗುಡೇನ್ನವರ ತಿಳಿಸಿದರು.
ಸಿಲಿಂಡರ್‌ನ ರೆಗ್ಯುಲೇಟರ್ ಸಡಿಲಿಕ್ಕೆ ಮತ್ತು ಪೈಪ್ ಲಿಕೇಜ ಆಗಿರುವುದೇ ಸ್ಫೋಟಕ್ಕೆ ಕಾರಣ ಎಂದು ಶಂಕಿಸಲಾಗಿದೆ.
ಕೋಣೆಯಲ್ಲಿರುವ ಅಕ್ಕಿ,ಬೇಳೆ, ಹಾಲಿನ ಪೌಡರ್, ಮಕ್ಕಳಿಗೆ ನೀಡಲು ಮಾಡಲಾದ ದೋಸೆ ಸೇರಿದಂತೆ ಪಾತ್ರೆಗಳು ಒಡೆದು ಹೋಗಿವೆ.
ಇಷ್ಟೇಲಾ ಘಟನೆ ನಡೆದರು ಸಹ ಬಿಸಿಯೂಟ ಅಧಿಕಾರಿ ಸೇರಿದಂತೆ ಇಲಾಖೆಯ ಯಾವಬ್ಬ ಅಧಿಕಾರಿ ಇಲ್ಲಿವರೆಗೆ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದಿಲ್ಲ ಎಂದು ತಿಳಿದು ಬಂದಿದೆ.