RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಪ್ರವಾಸದಿಂದ ಜನರ ಮನೊಉಲ್ಲಾಸ ದೊಂದಿಗೆ ಜ್ಞಾನವೃದ್ಧಿ ಆಗುತ್ತದೆ : ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ

ಗೋಕಾಕ:ಪ್ರವಾಸದಿಂದ ಜನರ ಮನೊಉಲ್ಲಾಸ ದೊಂದಿಗೆ ಜ್ಞಾನವೃದ್ಧಿ ಆಗುತ್ತದೆ : ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ 

ಪ್ರವಾಸದಿಂದ ಜನರ ಮನೊಉಲ್ಲಾಸ ದೊಂದಿಗೆ ಜ್ಞಾನವೃದ್ಧಿ ಆಗುತ್ತದೆ : ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 27 :

 
ಪ್ರವಾಸದಿಂದ ಜನರ ಮನೊಉಲ್ಲಾಸ ದೊಂದಿಗೆ ಜ್ಞಾನವೃದ್ಧಿ ಆಗುವುದು ಎಂದು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಹೇಳಿದರು

ಮಂಗಳವಾರದಂದು ಸಮೀಪದ ಗೋಕಾಕ ಫಾಲ್ಸ್ ನ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ, ಮತ್ತು ಪ್ರವಾಸೋದ್ಯಮ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು

ಪುಸ್ತಕದಷ್ಟೆ ಜ್ಞಾನ ಪ್ರವಾಸ ಮಾಡುವದರಿಂದ ಲಭಿಸುತ್ತದೆ. ಪ್ರವಾಸೋದ್ಯಮ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿ, ದೇಶದ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರವಹಿಸುತ್ತಿದೆ. ನಾವೆಲ್ಲರೂ ಪ್ರವಾಸಗಳಿಗೆ ಹೆಚ್ಚಿನ ಮಹತ್ವ ನೀಡಿ, ಜನರಲ್ಲಿ ಅರಿವು ಮೂಡಿಸುವಂತೆ ಕರೆ ನೀಡಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಹಿರಿಯ ಸಾಹಿತಿ ಡಾ.ಸಿ.ಕೆ ನಾವಲಗಿ ಮಾತನಾಡಿ ಪ್ರವಾಸಗಳಿಂದ ಜನರಿಗೆ ಆನಂದ, ಸಂತೋಷ , ಪುಣ್ಯ ಹಾಗೂ ಜ್ಞಾನ ದೊರೆಯುತ್ತದೆ. ಜಗತ್ತಿನಲ್ಲೆ ಅತಿ ಹೆಚ್ಚು ಪ್ರವಾಸಿ ಸ್ಥಳಗಳನ್ನು ನಮ್ಮ ದೇಶ ಹೊಂದಿದ್ದು ಅವುಗಳನ್ನು ಸಮೃದ್ಧಗೊಳಿಸಿ ದೇಶಧ ಜನರೊಂದಿಗೆ ವಿಶ್ವದ ಜನರನ್ನು ಆಕರ್ಷಿಸುವಂತೆ ಮಾಡಬೇಕಾಗಿದೆ ಎಂದು ಹೇಳಿದ ಅವರು ಜಿಲ್ಲೆಯಲ್ಲಿಯೂ ಅನೇಕ ಮಹತ್ವದ ಪ್ರವಾಸಿ ತಾಣಗಳಿದ್ದು ಅವುಗಳನ್ನು ಅಭಿವೃದ್ಧಿ ಪಡಿಸಿ ಪ್ರವಾಸಿಗರನ್ನು ಆಕರ್ಷಿಸುವ ಕಾರ್ಯ ಇಲಾಖೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಕೊಣ್ಣೂರ ಪುರಸಭೆ ಅಧ್ಯಕ್ಷೆ ಮಂಗಳಾ ತೇಲಿ, ಪೌರಾಯುಕ್ತ ಶಿವಾನಂದ ಹಿರೇಮಠ, ಉಮೇಶ್ ಬಾಳಿ , ಗುಡೇಶ ಪಾಟೀಲ, ರಜನಿ ಜಿರಗ್ಯಾಳ, ಎಂ ಬಿ ಪಾಟೀಲ ಇದ್ದರು.

Related posts: