ಗೋಕಾಕ:ವಿದ್ಯಾರ್ಥಿಗಳು ಸಮಾಜಕ್ಕಾಗಿ ಬದುಕುವಂತೆ ಪ್ರೇರೇಪಿಸುವ ಶಿಕ್ಷಣವನ್ನು ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳು ನೀಡುತ್ತಿವೆ : ಅಡಿವೇಶ ಗವಿಮಠ
ವಿದ್ಯಾರ್ಥಿಗಳು ಸಮಾಜಕ್ಕಾಗಿ ಬದುಕುವಂತೆ ಪ್ರೇರೇಪಿಸುವ ಶಿಕ್ಷಣವನ್ನು ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳು ನೀಡುತ್ತಿವೆ : ಅಡಿವೇಶ ಗವಿಮಠ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 1 :
ವಿದ್ಯಾರ್ಥಿಗಳು ಸಮಾಜಕ್ಕಾಗಿ ಬದುಕುವಂತೆ ಪ್ರೇರೇಪಿಸುವ ಶಿಕ್ಷಣವನ್ನು ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳು ನೀಡುತ್ತಿವೆ ಎಂದು ಇಲ್ಲಿನ ಚೆನ್ನಬಸವೇಶ್ವರ ಬಿ.ಸಿ.ಎ ಕಾಲೇಜಿನ ಆಡಳಿತಾಧಿಕಾರಿ ಅಡಿವೇಶ ಗವಿಮಠ ಹೇಳಿದರು.
ಶನಿವಾರದಂದು ಚೆನ್ನಬಸವೇಶ್ವರ ಬಿ.ಸಿ.ಎ ಕಾಲೇಜು ಆವರಣದಲ್ಲಿ ನಡೆದ ಪಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ರಾಷ್ಟ್ರೀಯ ದೃಷ್ಟಿಕೋನ, ಸಂಸ್ಕಾರಯುತ ಶಿಕ್ಷಣ ಶಾಲೆಯಲ್ಲಿ ಮಾತ್ರ ಸೀಮಿತವಾಗದೇ, ಮನೆಯಲ್ಲಿ ಅವುಗಳನ್ನು ಮುಂದುವರೆಸುವಂತೆ ಪೋಷಕರು ತಮ್ಮ ಮಕ್ಕಳಿಗೆ ಪ್ರೇರಣೆ ನೀಡುವುದು ಅವಶ್ಯಕ. ಈ ರೀತಿಯಾದಾಗ ಮಾತ್ರ ವಿದ್ಯಾರ್ಥಿಗಳು ಪರಿಪೂರ್ಣ ವ್ಯಕ್ತಿತ್ವದ ಬೆಳವಣಿಗೆ ಸಾಧ್ಯ ಎಂದು ಹೇಳಿದರು.
ಪೋಷಕರ ಪರವಾಗಿ ಮಾತನಾಡಿದ ನಿಂಗಪ್ಪ ಗೌಡರ ರವರು ಅಧ್ಯಾಪಕರ ಆಡಳಿತ ಮಂಡಳಿ ಶ್ರಮದಿಂದ ಮಕ್ಕಳು ಉತ್ತಮ ಸಂಸ್ಕಾರದೊಂದಿಗೆ ಉತ್ತಮ ಅಂಕ ಪಡೆದು ತೇರ್ಗಡೆ ಹೊಂದಿದ್ದಾರೆ. ಇದು ನನ್ನನ್ನು ಅತ್ಯಂತ ಸಂತೋಷಕರವಾಗಿಸಿದೆ ಎಂದು ತಿಳಿಸಿದ ಅವರು ವಿದ್ಯಾರ್ಥಿಗಳು ಇನ್ನು ಹೆಚ್ಚಿನ ಶೈಕ್ಷಣಿಕ ಪ್ರಗತಿ ಸಾಧಿಸಲ್ಲಿಕೆ ಸಂಸ್ಥೆ ಆಸಕ್ತಿ ವಹಿಸಿ ಕಾರ್ಯಮಾಡಬೇಕು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ವೇದಿಕೆಯಲ್ಲಿ ಪ್ರಾಚಾರ್ಯ ರಮೇಶ ಕುಂಬಾರ , ನಿರ್ದೇಶಕ ವಿವೇಕ ಜತ್ತಿ ಇದ್ದರು.