RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ಪ್ರಸಕ್ತ 2022-23 ರ ಹಂಗಾಮನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು : ಚೇರಮನ್ ಇಂಡಿ ಮಾಹಿತಿ

ಗೋಕಾಕ:ಪ್ರಸಕ್ತ 2022-23 ರ ಹಂಗಾಮನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು : ಚೇರಮನ್ ಇಂಡಿ ಮಾಹಿತಿ 

ಪ್ರಸಕ್ತ 2022-23 ರ ಹಂಗಾಮನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು : ಚೇರಮನ್  ಇಂಡಿ ಮಾಹಿತಿ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ  ಅ 10 : 

ಪ್ರಸಕ್ತ 2022-23 ರ ಹಂಗಾಮನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಬೆಳಗಾ ಶುರ್ಗಸ್ಸನ ಚೇರಮನ್ ಪ್ರದೀಪಕುಮಾರ್ ಇಂಡಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು  ಪ್ರಸ್ತುತ ಹಂಗಾಮಿನಲ್ಲಿ ಕಾರ್ಖಾನೆಯ ಸುತ್ತ-ಮುತ್ತಲಿನ ಸುಮಾರು 80 ಕಿ.ಮಿ ಅಂತರದಲ್ಲಿರುವ ಕಬ್ಬು ಪ್ರದೇಶದಿಂದ ಉತ್ತಮ ತಳಿಯ ಕಬ್ಬನ್ನು ಪಡೆಯಲಾಗುವುದು .
ಸನ್ 2020-21 ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತಬಾಂದವರಿಗೆ ಪ್ರತಿ ಟನ್ ಕಬ್ಬಿಗೆ ರೂ.2500/- ಗಳಷ್ಟು ಬಿಲ್ಲ್‍ನ್ನು ಮೂದಲನೇ ಕಂತಾಗಿ ಮತ್ತು ರೂ.100/- ಗಳಷ್ಟು ಹಣವನ್ನು ಎರಡನೇ ಕಂತಾಗಿ ಈಗಾಗಲೇ ನೀಡಲಾಗಿದ್ದು, ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಿದಂತೆ, ಇನ್ನೂ ರೂ.50/-ಗಳಷ್ಟು ಹಣವನ್ನು ಮೂರನೆ ಕಂತಾಗಿ ನೀಡಲು ನಿರ್ಧರಿಸಲಾಗಿದೆ. ಇದರೂಂದಿಗೆ ಸನ್ 2020-21 ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತಬಾಂದವರಿಗೆ ಪ್ರತಿ ಟನ್ ಕಬ್ಬಿಗೆ ಒಟ್ಟಾರೆಯಾಗಿ ರೂ.2650/-ಗಳಷ್ಟು ದರವನ್ನು ನೀಡಿದಂತಾಗುತ್ತದೆ.
ಸನ್ 2021-22 ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತಬಾಂದವರಿಗೆ ಈಗಾಗಲೇ ರೂ.2600/-ಗಳಷ್ಟು ದರವನ್ನು ನೀಡಲಾಗಿದ್ದು, ಎರಡನೇ ಕಂತಾಗಿ ರೂ.100/-ಗಳಷ್ಟು ಹಣವನ್ನು ನೀಡಲು ನಿರ್ಧರಿಸಲಾಗಿದೆ. ಇದರೂಂದಿಗೆ             ಸನ್ 2021-22 ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತಬಾಂದವರಿಗೆ ಪ್ರತಿ ಟನ್ ಕಬ್ಬಿಗೆ ಒಟ್ಟಾರೆಯಾಗಿ ರೂ.2700/- ಗಳಷ್ಟು ದರವನ್ನು ನೀಡಿದಂತಾಗುತ್ತದೆ.

ಪ್ರಸಕ್ತ ಹಂಗಾಮಿನಲ್ಲಿ ಉತ್ತಮ ಗುರಿ ಸಾಧಿಸುವ ನಿರೀಕ್ಷೆ ಹೂಂದಿದ್ದು, ಇದು ರೈತಬಾಂದವರ ಸಹಾಯ ಮತ್ತು ಸಹಕಾರ ದಿಂದ ಮಾತ್ರ ಸಾಧ್ಯವಾಗಲಿದ್ದು, ಕಾರ್ಖಾನೆಗೆ ಕಬ್ಬು ಪೂರೈಸುವ ಸಮಸ್ತ ರೈತಬಾಂದವರು ಈ ಹಿಂದೆ ಹೆಚ್ಚು ಕಬ್ಬು ಪೂರೈಸಿ ಕಾರ್ಖಾನೆಯ ಪ್ರಗತಿಗೆ ಸಹಕರಿಸಿದಂತೆÀ ಪ್ರಸಕ್ತ ಹಂಗಾಮಿನಲ್ಲಿಯೂ ಒಳ್ಳೆಯ ಗುಣಮಟ್ಟ, ಒಳ್ಳೆಯ ರಿಕವರಿ ಇರುವ ಕಬ್ಬನ್ನು ಕಾರ್ಖಾನೆಗೆ ಪೂರೈಸಿ ಯಶಸ್ಸಿನಲ್ಲಿ ಭಾಗಿಯಾಗಬೇಕೆಂದು ಪ್ರದೀಪಕುಮಾರ ಇಂಡಿ ವಿನಂತಿಸಿದ್ದಾರೆ.

Related posts:

ಮೂಡಲಗಿ:ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳು ಬದುಕಿನ ಮೌಲ್ಯವನ್ನು ಕಲಿಸುತ್ತೇವೆ : ಚಿದಾನಂದ ಕುದರಿ

ಮೂಡಲಗಿ:ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಗ್ರಾಮೀಣ ಪ್ರದೇಶಗಳ ರೈತರಿಗೆ ಜೀವನಾಡಿಯಾಗಿದೆ : ಶಾಸಕ ಬಾಲಚಂ…

ಗೋಕಾಕ:ಜನ ಕಲ್ಯಾಣಕ್ಕಾಗಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವ ಚಂಡಿಕಾ ಹೋಮ ನೆರವೇರಿಸಿದ ಕೆಎಂಎಫ್ ಅಧ್ಯಕ್ಷ ಬಾಲಚ…