ಗೋಕಾಕ:ಬಾಸ್ಕೆಟಬಾಲ್ ಹಾಗೂ ಈಜು ಸ್ವರ್ಧೆಯಲ್ಲಿ ಸತೀಶ್ ಶುಗರ್ಸ ಅಕ್ಯಾಡಮಿ ಪದವಿಪೂರ್ವ ವಿದ್ಯಾಲಯ ವಿದ್ಯಾರ್ಥಿಗಳ ಸಾಧನೆ
ಬಾಸ್ಕೆಟಬಾಲ್ ಹಾಗೂ ಈಜು ಸ್ವರ್ಧೆಯಲ್ಲಿ ಸತೀಶ್ ಶುಗರ್ಸ ಅಕ್ಯಾಡಮಿ ಪದವಿಪೂರ್ವ ವಿದ್ಯಾಲಯ ವಿದ್ಯಾರ್ಥಿಗಳ ಸಾಧನೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 10 :
ಸನ್ 2022-23 ನೇ ಸಾಲಿನ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕೆ.ಎಲ್.ಇ ಜಿ.ಐ ಬಾಗೇವಾಡಿ ನಿಪ್ಪಾಣಿ ಇವುಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ನಡೆದ ಬಾಸ್ಕೆಟಬಾಲ್ ಹಾಗೂ ಈಜು ಸ್ವರ್ಧೆಯಲ್ಲಿ ಇಲ್ಲಿನ ಸತೀಶ್ ಶುಗರ್ಸ ಅಕ್ಯಾಡಮಿ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಬಾಲಕರ ವಿಭಾಗದಲ್ಲಿ ಪ್ರಥಮ ಹಾಗೂ ಬಾಲಕಿಯ ವಿಭಾಗದಲ್ಲಿ ದ್ವಿತೀಯ ಸ್ಥಾನ , ಈಜು ಸ್ವರ್ಧೆಯಲ್ಲಿ ನಾಗರಾಜ್ ರಾಜಾಪೂರೆ 50 ಮೀಟರ ಹಾಗೂ 100 ಮೀಟರ ಬ್ಯಾಕ ಸ್ಟ್ರೋಕ್ ಸ್ವರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಅಧ್ಯಕ್ಷ , ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ , ಕಾಲೇಜಿನ ಪ್ರಾಚಾರ್ಯ ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.