RNI NO. KARKAN/2006/27779|Friday, November 8, 2024
You are here: Home » breaking news » ಗೋಕಾಕ:ಹಾಳಾದ ನಗರದ ರಸ್ತೆಗಳನ್ನು ಕೂಡಲೇ ರಿಪೇರಿ ಮಾಡುವಂತೆ ಆಗ್ರಹಿಸಿ ಅಶೋಕ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ

ಗೋಕಾಕ:ಹಾಳಾದ ನಗರದ ರಸ್ತೆಗಳನ್ನು ಕೂಡಲೇ ರಿಪೇರಿ ಮಾಡುವಂತೆ ಆಗ್ರಹಿಸಿ ಅಶೋಕ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ 

ಹಾಳಾದ ನಗರದ ರಸ್ತೆಗಳನ್ನು ಕೂಡಲೇ ರಿಪೇರಿ ಮಾಡುವಂತೆ ಆಗ್ರಹಿಸಿ ಅಶೋಕ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ 21:

 
ಗೋಕಾಕ ನಗರದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ರಿಪೇರಿಯಾಗದೇ ಕುಣಿ ಬಿದ್ದಿರುವ ಮತ್ತು ರಸ್ತೆಯಲ್ಲಿ ಹಾಕಿದ್ದ ಡಾಂಬರ ಕಿತ್ತು ದೊಡ್ಡ ದೊಡ್ಡ ಕಂದಕದ ರೀತಿ ಆಗಿರುವ ರಸ್ತೆಗಳನ್ನು ಕೂಡಲೇ ರಿಪೇರಿ ಮಾಡಿ ನಾಗರೀಕರು ಅನುಭವಿಸುತ್ತಿರುವ ಸಂಕಷ್ಟವನ್ನು ದೂರ ಮಾಡಬೇಕೆಂದು ನಗರಸಭೆಗೆ ಹಿರಿಯ ರಾಜಕೀಯ ಧುರೀಣ ಮತ್ತು ಕಾಂಗ್ರೇಸ್ ಮುಖಂಡ ಅಶೋಕ ಪೂಜಾರಿ ಅವರ ನೇತೃತ್ವದಲ್ಲಿ ನಾಗರೀಕರು ಮನವಿ ಸಲ್ಲಿಸಿದರು.
ಇಂದು ನಗರಸಭೆಗೆ ಆಗಮಿಸಿದ ನಾಗರೀಕರು ನಗರಸಭೆಯ ಮುಂದೆ ಘೋಷಣೆಗಳನ್ನು ಕೂಗಿ ನಗರಸಭೆಯ ಪೌರಾಯುಕ್ತ ಶಿವಾನಂದ ಹಿರೇಮಠ ಅವರಿಗೆ ಮನವಿ ಸಲ್ಲಿಸಿದ ಅವರು ಈಗಾಗಲೇ ಗೋಕಾಕದ ನಾಗರೀಕರು ನಗರದಲ್ಲಿ ಅನುಷ್ಠಾನಕ್ಕೆ ತಂದಿರುವ ಒಳಚರಂಡಿ ಯೋಜನೆ, 24×7 ಕುಡಿಯುವ ಯೋಜನೆ, ರಸ್ತೆ ಅಗಲೀಕರಣ ಮುಂತಾದ ಯೋಜನೆಗಳ ವೈಪಲ್ಯತೆ, ಕಾಮಗಿರಿಯಲ್ಲಿ ಆದ ವಿಳಂಬ ಹಾಗೂ ಅಸ್ತವ್ಯಸ್ತಯಿಂದ ದೊಡ್ಡ ಪ್ರಮಾಣದ ಅನಾನುಕೂಲ ಮತ್ತು ಸಂಕಷ್ಟ ಎದುರಿಸುವುದರ ಜೊತೆಗೆ ವಾಣಿಜ್ಯ ವ್ಯವಹಾರಗಳಿಗೆ ಆದ ಅಪಾರ ಹಾನಿಯಿಂದ ತತ್ತಿರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿಯೇ ನಗರದ ತೆಗ್ಗು ಮತ್ತು ಡಾಂಬರ ಕಿತ್ತು ಹೋಗಿರುವ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ಥರವಾಗಿದ್ದು, ಇಂತಹ ರಸ್ತೆಗಳಲ್ಲಿ ಮಕ್ಕಳು ಮತ್ತು ನಾಗರೀಕರು, ವಾಹನಗಳು ಜೀವ ಕೈಯಲ್ಲಿ ಹಿಡಿದು ನಡೆಯುವಂತಾಗಿದೆ ಎಂದು ಖಾರವಾಗಿ ಹೇಳಿದ ಅವರು ಇಂತಹ ರಸ್ತೆಗಳನ್ನು ಕೂಡಲೇ ದುರಸ್ತಿ ಮಾಡದಿದ್ದರೆ ಸದರೀ ರಸ್ತೆಗಳಲ್ಲಿ ಸಂಚರಿಸುವಾಗ ಆಗುವ ಅನಾಹುತಗಳಿಗೆ ನಗರಸಭೆಯೇ ನೇರ ಹೊಣೆಯಾಗಬೇಕಾಗುತ್ತದೆ. ಬರುವ 8-10 ದಿನಗಳಲ್ಲಿ ಸದರೀ ರಸ್ತೆಗಳ ರಿಪೇರಿ ಮಾಡಬೇಕೆಂದು ಆಗ್ರಸಹಿಸಿದರು. ಒಂದು ವೇಳೆ ಈ ಕಾರ್ಯಕ್ಕೆ ಅನಗತ್ಯ ವಿಳಂಬವಾದಲ್ಲಿ ನಗರಸಭೆಯ ಮುಂದೆ ನಾಗರೀಕರು ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಾಮಾಜಿಕ ಹೋರಾಟಗಾರ ದಸ್ತಗೀರ ಪೈಲವಾನ ಮಾತನಾಡಿ ಇಂದು ಪ್ರತಿಭಟನೆಯ ಕಿಡಿ ಹತ್ತಿದ್ದು, ನಗರಸಭೆ ಕೂಡಲೇ ಪ್ರತಿಭಟನೆಗೆ ಪೂರಕವಾದ ಸ್ಪಂಧನೆ ನೀಡದಿದ್ದರೇ ಹೋರಾಟ ಅನಿವಾರ್ಯ ಎಂದು ಉಗ್ರವಾಗಿ ಹೇಳಿದರು. ಮನವಿ ಸ್ವೀಕರಿಸಿ ಮಾತನಾಡಿದ ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ ನ್ಯಾಯಯುತವಾದ ರಸ್ತೆ ರಿಪೇರಿಯ ಕೋರಿಕೆಗೆ ಸ್ಪಂಧಿಸಿ ನಗರಸಭೆ 15 ದಿನಗಳೊಳಗಾಗಿ ಸದರೀ ರಸ್ತೆಯ ರಿಪೇರಿ ಕಾರ್ಯ ಕೈಗೊಳ್ಳುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರಾಜು ನಂದಗಾಂವಿ, ರಾಜು ಮಾಡಲಗಿ, ಪ್ರದೀಪ ಪೂಜಾರಿ, ಮಂಜುನಾಥ ಪಾಟೀಲ, ರೇವಯ್ಯ ಹಿರೇಮಠ, ಬಾಳು ಅಂಬಿ, ಸುರೇಶ ಅಂಬಿ, ಶಿವಲಿಂಗ ಯರನಾಳ, ಲೋಕೇಶ ತೊಡಕರ, ಸುಭಾಸ ಪವಾರ, ರಾಜು ಮಡಿವಾಳರ, ಶಿವಾನಂದ ಹೂಲಿ, ಅನೀಲ ಹಾಲಭಾಂವಿ, ವಿಠ್ಠಲ ಜೀರಗಾಳೆ, ಈರಣ್ಣಾ ಪೂಜಾರಿ, ಗೋಪಾಲ ಪೂಜೇರಿ, ಸಂಜು ಚಿಗಡೊಳ್ಳಿ, ಇಶಾಕ ಕತೀಬ, ನಿಂಗಪ್ಪ ಅಮ್ಮಿಭಾಂವಿ, ಉದಯ ಗಂಜಿ, ಶಂಕರ ನಂದಗಾಂವಿ ಮುಂತಾದ ನಾಗರೀಕರು ಉಪಸ್ಥಿತರಿದ್ದರು.


 

Related posts: