ಘಟಪ್ರಭಾ:ಕೆ.ಎಚ್.ಆಯ್ ಆಸ್ಪತ್ರೆಯವರಿಂದ ಘಟಪ್ರಭಾ-ಧುಪದಾಳ ರಸ್ತೆ ಅತೀಕ್ರಮಣ
ಕೆ.ಎಚ್.ಆಯ್ ಆಸ್ಪತ್ರೆಯವರಿಂದ ಘಟಪ್ರಭಾ-ಧುಪದಾಳ ರಸ್ತೆ ಅತೀಕ್ರಮಣ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಅ 22 :
ಕರ್ನಾಟಕ ಆರೋಗ್ಯ ಧಾಮ ಕೆ.ಎಚ್.ಆಯ್ ಆಸ್ಪತ್ರೆಯವರಿಂದ ಘಟಪ್ರಭಾ-ಧುಪದಾಳ ರಸ್ತೆ ಅತೀಕ್ರಮಣವಾಗುತ್ತಿದರೂ ಕಣ್ಣ ಮುಚ್ಚಿ ಕುಳಿತಿರುವ ಲೋಕೋಪಯೋಗಿ ಇಲಾಖೆ ಬಗ್ಗೆ ಸಾರ್ವಜನಿಕರು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಇಲ್ಲಿನ ಪ್ರಸಿದ್ದ ಕೆ.ಎಚ್.ಆಯ್ ಆಸ್ಪತ್ರೆಗೆ ಈಗಾಗಲೇ ನೂರಾರು ಎಕರೆ ಜಮೀನ ಇದ್ದು, ತಮ್ಮ ಜಾಗೆಯನ್ನು ಗುರುತಿಸಿ ಕಂಪೌಂಡ ಗೋಡೆಯನ್ನು ನಿರ್ಮಿಸಿದ್ದಾರೆ. ಆದರೆ ಇತ್ತಿಚಿಗೆ ಘಟಪ್ರಭಾ— ಧುಪದಾಳ ಹಾಗೂ ಘಟಪ್ರಭಾ—ಗೋಕಾಕ ರಸ್ತೆಯಲ್ಲಿ ಸಾಕಷ್ಟು ಜನಸಂದಣಿಯಾಗುತ್ತಿದ್ದು, ಅದರ ಸಲುವಾಗಿ ರಸ್ತೆ ಅಗಲೀಕರಣಕ್ಕೆ ಸಾಕಷ್ಟು ಹೋರಾಟ ನಡೆದಿವೆ.
ಇಂತಹ ಪರಿಸ್ಥಿತಿಯಲ್ಲಿಯೂ ಕರ್ನಾಟಕ ಆರೋಗ್ಯ ಧಾಮ (ಕೆ.ಎಚ್.ಆಯ್) ಆಸ್ಪತ್ರೆಯವರು ರಸ್ತೆಯ ಅತೀಕ್ರಮಣ ಹಾಡುಹಗಲಿನಲ್ಲೆಯೇ ರಾಜಾರೋಷವಾಗಿ ಮಾಡುತ್ತಿದ್ದಾರೆ. ಹೊಸ ಕೆನೆರಾ ಬ್ಯಾಂಕ ಮುಂದುಗಡೆಯಿಂದ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಕಂಪೌಂಡ ಗೋಡೆ ನಿರ್ಮಿಸುತ್ತಿದ್ದಾರೆ. ಸುಮಾರು ಅರ್ಧ ಕಿ,ಮಿ ದಷ್ಟಿರುವ ತಮ್ಮ ಹಳೆಯ ಕಂಪೌಂಡದಿಂದ ಸುಮಾರ 8 ಪೂಟ ಮುಂದೆ ಮುಖ್ಯ ರಸ್ತೆಗೆ ಅಂಟಿಕೊಂಡೆ ಹೊಸ ಗೋಡೆಯನ್ನು ನಿರ್ಮಿಸುತ್ತಿದ್ದಾರೆ.
ಯಾವುದೇ ರಸ್ತೆಯ ಅಕ್ಕ ಪಕ್ಕದಲ್ಲಿ ಕಟ್ಟಡ ಮಾಡುವುವ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ನಿಯಂದಂತೆ ರಸ್ತೆಯಿಂದ 75 ಪೂಟು ಜಾಗವನ್ನು ಬಿಟ್ಟು ಕಟ್ಟಡ ಮಾಡಬೇಕು. ಆದರೆ ಇಲ್ಲಿ ಯಾವುದೇ ನಿಯಮ ಪಾಲನೆ ಆಗುತ್ತಿಲ್ಲ.
ಈ ಬಗ್ಗೆ ಜಾಗೃತರಾಗಬೇಕಿದ್ದ ಲೋಕೋಪಯೋಗಿ ಇಲಾಖೆಯವರು ಅತೀಕ್ರಮಣ ತಡೆಗಟ್ಟುವದನ್ನು ಬಿಟ್ಟು ಸುಮ್ಮನೆ ಕುಳಿತ್ತಿದ್ದನ್ನು ಗಮನಿಸಿದರೆ ಇಲಾಖೆ ಹಾಗೂ ಅಧಿಕಾರಿಗಳ ಬಗ್ಗೆ ಸಂಶಯ ವ್ಯಕ್ತವಾಗುತ್ತಿದೆ.
ಈಗಾಗಲೆ ಘಟಪ್ರಭಾ ಮುಖ್ಯ ರಸ್ತೆಯಲ್ಲಿ ಅಂಗಡಿಕಾರರು ರಸ್ತೆಯನ್ನು ಸಾಕಷ್ಟು ಅತೀಕ್ರಮಣ ಮಾಡಿದ್ದು, ಇದರಿಂದ ಆಗುತ್ತಿರುವ ಜನದಟ್ಟನೆಯಿಂದ ಸಂಚಾರಕ್ಕೆ ತೀರಾ ತೊಂದರೆಯಾಗುತ್ತಿದೆ. ಕಬ್ಬು ತುಂಬಿದ ಟ್ಯಾಕ್ಟರ ಬಂದರೆ ಜೀವ ಕೈಯಲ್ಲಿ ಹಿಡಿದು ನಿಲ್ಲುವಂತ ಪರಿಸ್ಥಿತಿ ಇಲ್ಲಿದೆ. ಕೂಡಲೇ ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯ ಪುರಸಭೆ ಅಧಿಕಾರಿಗಳು ಈ ಅತೀಕ್ರಮಣವನ್ನು ತಡೆಯಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಕೆ.ಎಚ್.ಆಯ್. ಆಸ್ಪತ್ರೆ ಕಂಪೌಂಡ ಗೋಡೆ ಕಟ್ಟುವ ವಿಷಯ ನನ್ನ ಗಮನಕ್ಕೆ ಬಂದಿದ್ದು ಈ ಬಗ್ಗೆ ನಮ್ಮ ಸಿಬ್ಬಂದಿಯನ್ನು ಕಳಿಸಿ ಗೋಡೆ ಕಟ್ಟುವದನ್ನು ನಿಲ್ಲಿಸುತ್ತೆವೆ.
ಉಪ್ಪಾರ ಸಹಾಯಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಘಟಪ್ರಭಾ