ಗೋಕಾಕ:ರೈತರ ಜೀವನಾಡಿಯಾಗಿರುವ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಪಶು ವೈದ್ಯರು ಹೆಚ್ಚಿನ ಮಹತ್ವ ನೀಡಿ : ಶಾಸಕ ರಮೇಶ
ರೈತರ ಜೀವನಾಡಿಯಾಗಿರುವ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಪಶು ವೈದ್ಯರು ಹೆಚ್ಚಿನ ಮಹತ್ವ ನೀಡಿ : ಶಾಸಕ ರಮೇಶ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 27 :
ರೈತರ ಜೀವನಾಡಿಯಾಗಿರುವ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಪಶು ವೈದ್ಯರು ಹೆಚ್ಚಿನ ಮಹತ್ವ ನೀಡುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಗುರುವಾರದಂದು ನಗರದ ತಮ್ಮ ಕಾರ್ಯಾಲಯದಲ್ಲಿ ಗೋಕಾಕ ಮತಕ್ಷೇತ್ರದ ಪಶು ಪಾಲನಾ ಇಲಾಖೆಯ ಚಿಕಿತ್ಸಾಲಯಗಳಿಗೆ ವೈಯಕ್ತಿಕವಾಗಿ ನೀಡಿದ ಚರ್ಮ ಗಂಟು ರೋಗ ಔಷಧಿ ಕಿಟ್ ಗಳನ್ನು ವಿತರಿಸಿ ಅವರು ಮಾತನಾಡುತ್ತಾ ಜಾನುವಾರುಗಳು ರೈತರ ಬದುಕಿನ ಒಂದು ಭಾಗವಾಗಿದ್ದು, ಅವುಗಳ ಆರೋಗ್ಯ ರಕ್ಷಣೆ ಕುರಿತು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ ತಾವುಗಳು ಸಹಿತ ಅವುಗಳ ಆರೋಗ್ಯ ರಕ್ಷಣೆಗೆ ಶ್ರಮಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್, ಬಿಜೆಪಿ ಮುಖಂಡರಾದ ಎಲ್ ಟಿ.ತಪಸಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮನ್ನವರ, ಪ್ರಮೋದ್ ಜೋಶಿ, ಮಹ್ಮದ ಶಫೀ ಜಮಾದಾರ, ಪಶು ಪಾಲನಾ ಇಲಾಖೆಯ ನಿರ್ದೇಶಕ ಡಾ.ಮೋಹನ ಕಮತ್, ವೈದ್ಯರುಗಳಾದ ಶಶಿಕಾಂತ ಕೌಜಲಗಿ, ಆನಂದ ಗುರಿಕಾರ, ಸಚಿನ್ ಗೊಂದಳಿ, ಕುರಂದರ ಕಾಂಬ್ಳಿ, ರಾಜೇಂದ್ರ ಒಡೆಯರ ಇದ್ದರು.