ಮೂಡಲಗಿ:ಸಬ್ ರಿಜಿಸ್ಟ್ರಾರ್ ಕಛೇರಿ ನನಸು ಮಾಡಿದ ಬಾಲಚಂದ್ರ ಜಾರಕಿಹೊಳಿ
ಸಬ್ ರಿಜಿಸ್ಟ್ರಾರ್ ಕಛೇರಿ ನನಸು ಮಾಡಿದ ಬಾಲಚಂದ್ರ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಅ 31 :
ಮೂಡಲಗಿಗೆ ಉಪನೋಂದಣಿ ಅಧಿಕಾರಿಗಳ ಕಛೇರಿಯನ್ನು ಆರಂಭಿಸುವ ಮೂಲಕ ತಾಲೂಕಿನ ಜನತೆಯ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದೇನೆ ಎಂದು ಶಾಸಕ ಮತ್ತು ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿ ಬಳಿ ಸೋಮವಾರ ನೂತನವಾಗಿ ಆರಂಭಗೊಂಡಿರುವ ಉಪನೋಂದಣಾಧಿಕಾರಿಗಳ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಕ್ಟೋಬರ ತಿಂಗಳಾಂತ್ಯಕ್ಕೆ ಮೂಡಲಗಿಯಲ್ಲಿ ಕಛೇರಿಯ ಪೂಜೆ ಸಲ್ಲಿಸುವ ಮೂಲಕ ಸಾರ್ವಜನಿಕರು ಹಾಗೂ ರೈತರಿಗೆ ನೀಡಿದ ವಾಗ್ದಾನದಂತೆ ನಡೆದುಕೊಂಡಿರುವುದಾಗಿ ಅವರು ಹೇಳಿದರು.
ರಾಜ್ಯದಲ್ಲಿ ಮೂಡಲಗಿ ಹೊಸ ತಾಲೂಕಿಗೆ ಮಾತ್ರ ಉಪ ನೋಂದಣಾಧಿಕಾರಿಗಳ ಕಛೇರಿ ಆರಂಭಿಸಲಿಕ್ಕೆ ಸರಕಾರ ಅನುಮತಿ ನೀಡಿದೆ. ಉಳಿದ ಯಾವ ಹೊಸ ತಾಲೂಕಿಗೂ ಈ ಕಛೇರಿ ಆರಂಭಿಸಲಿಕ್ಕೆ ಸರಕಾರ ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಮತಿ ನೀಡಿಲ್ಲ. ಮೂಡಲಗಿ ಹೊಸ ತಾಲೂಕು ರಚನೆಯಾದ ಬಳಿಕ ತಾಲೂಕಿನ ಕೂಗು ಇಲ್ಲಿನ ಉಪನೋಂದಣಾಧಿಕಾರಿಗಳ ಕಛೇರಿ ಆರಂಭಿಸುವುದು ಬಹುದಿನಗಳ ಬೇಡಿಕೆಯಾಗಿತ್ತು. ನಾನು ಕೂಡಾ ಈ ನಿಟ್ಟಿನಲ್ಲಿ ಸರಕಾರದ ಮೇಲೆ ಸಾಕಷ್ಟು ಒತ್ತಡಗಳನ್ನು ಹೇರಿದ್ದೆ. ಹಲವಾರು ಬಾರಿ ಮನವಿಯನ್ನು ಕೂಡಾ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದೆ. ಕೆಲವರು ಮೂಡಲಗಿಗೆ ಉಪನೋಂದಣಾಧಿಕಾರಿಗಳ ಕಛೇರಿ ಮಾಡುವುದು ಇವರಿಗೆ ಮನಸ್ಸಿಲ್ಲ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದರು. ಆದರೆ ನನಗೆ ಮೂಡಲಗಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ಮುಖ್ಯವಾಗಿದ್ದು, ಯಾರೂ ಏನೇ ಅಂದರೂ ಅದಕ್ಕೆ ಎಂದಿಗೂ ತಲೆಕೆಡಿಸಿಕೊಂಡಿಲ್ಲ ಎಂದು ಅವರು ತಿಳಿಸಿದರು.
ತಾಲೂಕು ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಬೇಕಾಗಿದೆ. ಈ ದಿಸೆಯಲ್ಲಿ ಮೂಡಲಗಿಗೆ ಅಗತ್ಯವಿರುವ ಎಲ್ಲ ತಾಲೂಕು ಮಟ್ಟದ ಸರಕಾರಿ ಕಛೇರಿಗಳನ್ನು ಮಂಜೂರು ಮಾಡಿಸುತ್ತಿದ್ದೇನೆ, ಈಗಾಗಲೇ ಅಗ್ನಿ ಶಾಮಕ ಠಾಣೆ ಮಂಜುರಾತಿ ಹಂತದಲ್ಲಿದೆ. ಮಿನಿ ವಿಧಾನಸೌಧ ಕೂಡಾ ಪ್ರಗತಿಯಲ್ಲಿದೆ. ರಸ್ತೆಗಳ ಪ್ರಗತಿಗಾಗಿ ಮೂಡಲಗಿಗೆ ನಗರೋತ್ಥಾನ ಯೋಜನೆ ಅಡಿ ೪ ಕೋಟಿ ರೂಪಾಯಿ ಅನುದಾನ ಬಂದಿದ್ದು. ಭೂಮಿ ಪೂಜೆ ಮಾಡಲಾಗಿದೆ. ಇನ್ನೂ ೨ ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ನೀಡುವಂತೆ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಮೂಡಲಗಿ ತಾಲೂಕು ಅಭಿವೃದ್ಧಿಯಾಗಬೇಕು. ಸಾರ್ವಜನಿಕರ ಅಲೆದಾಟ ತಪ್ಪಿಸಲು ಎಲ್ಲ ಕಛೇರಿಗಳನ್ನು ಆರಂಭಿಸುತ್ತೇನೆ, ಮೂಡಲಗಿಯಲ್ಲಿ ಉಪನೋಂದಣಾಧಿಕಾರಿಗಳ ಕಛೇರಿ ಆರಂಭವಾಗಿರುವದರಿಂದ ಗೋಕಾಕ ತಾಲೂಕಿಗಿಂತ ಮೂಡಲಗಿ ತಾಲೂಕಿಗೆ ಅಧಿಕ ಪ್ರಮಾಣದಲ್ಲಿ ಆದಾಯ ಬರಲಿದೆ. ಜೊತೆಗೆ ಮೂಡಲಗಿ ಶ್ರೀಮಂತ ತಾಲೂಕು ಆಗುವದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶಾಸಕ. ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಮುಹೂರ್ತದ ಪ್ರಕಾರ ಇಂದು ಸೋಮವಾರದಂದು ಪೂಜೆಸಲ್ಲಿಸಲಾಗಿದೆ. ನವೆಂಬರ ೧೦ ರಿಂದ ಉಪ ನೋಂದಣಾಧಿಕಾರಿಗಳ ಕಛೇರಿಯು ಸಾರ್ವಜನಿಕರ ಸೇವೆಗೆ ಅಣಿಯಾಗಲಿದೆ. ಈಗಾಗಲೇ ಕಚೇರಿ ಆರಂಭಕ್ಕೆ ಅಗತ್ಯ ಇರುವ ಎಲ್ಲ ಕಾರ್ಯಗಳು ಬಹುತೇಕ ಮುಗಿದಿವೆ. ಇನ್ನೂ ಪ್ರೂಟ್ ಲಾಗಿನ್/ ಪಾಸ್‌ವರ್ಡ, ಆರ್.ಟಿ.ಐ ಲಾಗಿನ್ /ಪಾಸವರ್ಡ, ಇಸಿ/ಸಿಸಿ ಲಾಗಿನ್ ಪಾಸವರ್ಡ, ಕೆ೨ ಮ್ಯಾಪಿಂಗ್ ಮತ್ತು ಎನಿವೇರ್ ಇಸಿ ಆಗಬೇಕಿರುವ ಕೆಲಸಗಳು ಮಾತ್ರ ಬಾಕಿ ಇವೆ ಎಂದು ಹೇಳಿದರು
ಕಾರ್ಯಕ್ರಮದ ಸಾನಿಧ್ಯವನ್ನು ಮೂಡಲಗಿ ಶಿವಬೋಧರಂಗ ಮಠದ ಪೀಠಾಧಿಪತಿಗಳಾದ ದತ್ತಾತ್ರೇಯಬೋಧ ಸ್ವಾಮಿಜಿ, ಶ್ರೀಧರಬೋಧ ಸ್ವಾಮಿಜಿಗಳು ವಹಿಸಿದ್ದರು.
ಗುಂಡು ಆಚಾರ್ಯ ತೇಗ್ಗಿ ಮತ್ತು ರಾಘವೇಂದ್ರ ಆಚಾರ್ಯ ತೆಗ್ಗಿ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ಈ ಸಂಧರ್ಭದಲ್ಲಿ ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಜಿಲ್ಲಾ ನೋಂದಣಾಧಿಕಾರಿ ಶಿವಕುಮಾರ ಅಪರಂಜಿ, ಮೂಡಲಗಿ ತಹಶೀಲ್ದಾರ ಡಿ.ಜಿ.ಮಹಾತ, ತಾ.ಪಂ ಇಓ ಎಫ್.ಎಸ್.ಚಿನ್ನನವರ, ಮೂಡಲಗಿ ಉಪ ನೋಂಧಣಾಧಿಕಾರಿ ಓ.ಹರಿಯಪ್ಪ, ಮುಖಂಡರಾದ ಜಿ.ಟಿ.ಸೋನವಾಲ್ಕರ, ರಾಮಣ್ಣಾ ಹಂದಿಗುಂದ, ರವಿ ಸೋನವಾಲ್ಕರ, ಬಸವಪ್ರಬು ನಿಡಗುಂದಿ, ವಿಜಯಕುಮಾರ ಸೋನವಾಲ್ಕರ, ಅಜೀಜ ಡಾಂಗೆ, ಸಂತೋಷ ಸೋನವಾಲ್ಕರ, ಡಾ.ಎಸ್.ಎಸ್.ಪಾಟೀಲ, ಮರೆಪ್ಪ ಮರೆಪ್ಪಗೋಳ, ಅನ್ವರ ನದಾಫ್, ಗಿರೀಶ ಢವಳೇಶ್ವರ, ಮಹಾದೇವ ಶೆಕ್ಕಿ, ಆಯ್.ಎಸ್.ಕೊಣ್ಣೂರ, ರಮೇಶ ಸಣ್ಣಕ್ಕಿ, ಪುರಸಭೆ ಸದಸ್ಯರು, ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ, ರವಿ ಸಣ್ಣಕ್ಕಿ, ಹುಸೇನ ಶೇಖ, ಶಿವು ಚಂಡಕಿ, ಬಾಳಯ್ಯ ಹಿರೇಮಠ, ರವಿ ನೇಸೂರ, ಶ್ರೀಶೈಲ್ ಬಳಿಗಾರ, ಕೆ.ಬಿ.ಪಾಟೀಲ, ಎ.ವಿ.ಹೊಸಕೋಟಿ, ಬಿ.ವಿ.ಗುಲಗಾಜಂಬಗಿ, ಈಶ್ವರ ಸತರಡ್ಡಿ, ವಿಲಾಸ ನಾಶಿ, ಈರಪ್ಪ ಬನ್ನೂರ, ಬಸು ಝಂಡೇಕುರಬರ, ಹನಮಂತ ಪೂಜೇರಿ, ಶ್ರೀಶೈಲ್ ಮದಗನ್ನವರ, ಪ್ರಕಾಶ ಮಾದರ, ಸದಾ ತಳವಾರ, ಮನೋಹರ ಸಣ್ಣಕ್ಕಿ,ರಾಮು ಜಂಡೆ ಕುರುಬರ, ಮೂಡಲಗಿ ತಾಲೂಕಿನ ವಿವಿಧ ಗ್ರಾಮಗಳ ಮುಖಂಡರು, ಚುನಾಯಿತ ಪ್ರತಿನಿಧಿಗಳು ಮತ್ತಿತರರು ಉಪಸ್ಥಿತರಿದ್ದರು.