RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಪ್ರತಿಯೊಬ್ಬರೂ ಕಾಯಕದಲ್ಲಿ ತೊಡಗಿ, ಸ್ವಾವಲಂಬಿಗಳಾಗಿ ಬದುಕನ್ನು ಸಾಗಿಸಿ : ಶ್ರೀ ಸಿಧ್ಧಲಿಂಗ ಮಹಾಸ್ವಾಮಿ

ಗೋಕಾಕ:ಪ್ರತಿಯೊಬ್ಬರೂ ಕಾಯಕದಲ್ಲಿ ತೊಡಗಿ, ಸ್ವಾವಲಂಬಿಗಳಾಗಿ ಬದುಕನ್ನು ಸಾಗಿಸಿ : ಶ್ರೀ ಸಿಧ್ಧಲಿಂಗ ಮಹಾಸ್ವಾಮಿ 

ಪ್ರತಿಯೊಬ್ಬರೂ ಕಾಯಕದಲ್ಲಿ ತೊಡಗಿ, ಸ್ವಾವಲಂಬಿಗಳಾಗಿ ಬದುಕನ್ನು ಸಾಗಿಸಿ : ಶ್ರೀ ಸಿಧ್ಧಲಿಂಗ ಮಹಾಸ್ವಾಮಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 9 :

 

ಪ್ರತಿಯೊಬ್ಬರೂ ಕಾಯಕದಲ್ಲಿ ತೊಡಗಿ, ಸ್ವಾವಲಂಬಿಗಳಾಗಿ ಬದುಕನ್ನು ಸಾಗಿಸಬೇಕು ಎಂದು ನದಿ ಇಂಗಳಗಾವಿಯ ಗುರುಲಿಂಗ ದೇವರ ಮಠದ ಶ್ರೀ ಸಿಧ್ಧಲಿಂಗ ಮಹಾಸ್ವಾಮಿಗಳು ಹೇಳಿದರು.

ಬುಧವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ 159ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸರಕಾರ ಮೀಸಲಾತಿ ವ್ಯವಸ್ಥೆ ಕಲ್ಪಿಸಿ ಸಮಾಜದ ಕೆಳ ವರ್ಗದ ಜನರನ್ನು ಮೇಲೆತ್ತದಂತೆ ಮಾಡಿದೆ. ಅವರು ಇತರರನ್ನು ಅವಲಂಬಿಸುವಂತೆ ಆಗಿದೆ.ಸರಕಾರ ಅವರ ದುಡಿಮೆಗೆ ಸೂಕ್ತ ಪ್ರತಿಫಲ, ಗೌರವ ಸಿಗುವಂತೆ ಮಾಡಬೇಕು. ಶರಣರು ತೋರಿಸಿಕೊಟ್ಟ ಕಾಯಕ ಸಿಧ್ಧಾಂತವನ್ನು ಪ್ರತಿಯೊಬ್ಬರೂ ಪಾಲಿಸಿದರೆ ಸ್ವಾವಲಂಬಿಗಳಾಗಿ ಬದುಕಲು ಸಾಧ್ಯವಿದೆ ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸನಗೌಡಾ ಪಾಟೀಲ ವಹಿಸಿದ್ದರು.

ವೇದಿಕೆಯಲ್ಲಿ ಜಾನಪದ ವಿದ್ವಾಂಸ ಡಾ. ಸಿ.ಕೆ. ನಾವಲಗಿ, ಶ್ರೀಮತಿ ಸುಮಿತ್ರಾ ಕಾಳಪ್ಪಾ ಗುರಾಣಿ, ದಾಸೋಹಿಗಳಾದ ಶ್ರೀಮತಿ ವಿನುತಾ ನಾವಲಗಿ, ಶ್ರೀಕಾಂತ ಹಳ್ಳೂರ, ಕ.ರ.ವೇ. ಅಧ್ಯಕ್ಷರಾದ ಬಸವರಾಜ್ ಖಾನಪ್ಪನವರ ಉಪಸ್ಥಿತರಿದ್ದರು.
ಶಿಕ್ಷಕ ಆರ್. ಎಲ್. ಮಿರ್ಜಿ ಕಾರ್ಯಕ್ರಮ ನಿರೂಪಿಸಿದರು. ಎಸ್. ಕೆ. ಮಠದ ವಂದಿಸಿದರು.

Related posts: